ಚಿಟ್ಟಿ

Author : ಪಿ. ಚಂದ್ರಿಕಾ

Pages 272

₹ 200.00




Year of Publication: 2016
Published by: ನಾಕುತಂತಿ ಪ್ರಕಾಶನ

Synopsys

ಹುಟ್ಟುವಾಗಲೇ ಕಷ್ಟಗಳ ಸುರಿಮಳೆಯನ್ನು ಕಂಡ ಹುಡುಗಿಯ ಕಣ್ಣೀರಿನ ಕಥೆ ಈ ಪುಸ್ತಕ. ಲೇಖಕಿಯ ಮಾತುಗಳ ಪ್ರಕಾರ ಇದು ಬಹಳಷ್ಟು ಹೆಣ್ಣು ಮಕ್ಕಳ ಆತ್ಮ ಕಥೆ. ಚಂದ್ರಿಕಾ ಅವರ ಲೇಖನಿಯಿಂದ ಮೂಡಿಬಂದಂತಹ ಪ್ರಥಮ ಕಾದಂಬರಿಯಿದು. ಹಾಗಂತ ಎಲ್ಲಿಯೂ ಇದೊಂದು ಪ್ರಥಮ ಪ್ರಯತ್ನವೆಂಬ ಭಾವನೆ ಓದುಗರಲ್ಲಿ ಮೂಡಿ ಬರದಂತಹ ಬರೆವಣಿಗೆಯನ್ನು ಈ ಪುಸ್ತಕದಲ್ಲಿ ಕಾಣಬಹುದು.

‘ಅವಧಿ’ಯಲ್ಲಿ ಹಲವು ಸರಣಿಗಳಲ್ಲಿ ಮೂಡಿಬಂದಂತಹ ಕಾದಂಬರಿಯನ್ನು ಒತ್ತಟ್ಟಿಗೆ ಸೇರಿಸಿ ಈ ಪುಸ್ತಕ ಹೊರತರಲಾಗಿದೆ. ಜೀವನವನ್ನು ಯಾವುದೇ ನಿರ್ದಿಷ್ಟ ಬೇಲಿಯೊಳಗೆ ಸಿಲುಕಿಸದೇ, ಅದರ ನಿಜವಾದ ಪರಿಧಿಯನ್ನು ಅರ್ಥ ಮಾಡಿಕೊಂಡು ಬದುಕಿದಲ್ಲಿ ಮಾತ್ರ ಜೀವನದ ನಿಜವಾದ ಅರ್ಥ ನಮಗೆ ತಿಳಿಯುತ್ತದೆ ಎಂಬುದು ಈ ಕೃತಿಯ ನಿಲುವು.

ಮೇಲು ನೋಟಕ್ಕೆ ಚಿಟ್ಟಿಯ ಪಾತ್ರ ಕೇವಲ ಒಂದು ಚಿತ್ರಣದಂತೆ ಕಂಡರೂ, ಹಲವು ದಾರ್ಶನಿಕ ಮತ್ತು ತಾತ್ವಿಕತೆಯ ಗುಣಗಳನ್ನು ಮೈಗೂಡಿಸಿಕೊಂಡಿರುವ ಅಪರೂಪದ ಪಾತ್ರ ಇದು. ತಾನು ಕಾಣುತ್ತಿರುವ ಬದುಕಷ್ಟೇ ಬದುಕಲ್ಲ, ಇದರ ಪರಿಧಿ ಬಹಳ ವಿಶಾಲವಾಗಿದೆಯೆಂಬುದನ್ನು ಈ ಪುಸ್ತಕವು ಓದುಗರಿಗೆ ತಿಳಿಸಿಕೊಡುತ್ತದೆ.

About the Author

ಪಿ. ಚಂದ್ರಿಕಾ

ಚಿತ್ರದುರ್ಗ ಜಿಲ್ಲೆಯ ಚಳ್ಳೆಕೆರೆಯಲ್ಲಿ ಜನಿಸಿದ ಚಂದ್ರಿಕಾ ಅವರು, ಕುವೆಂಪು ವಿಶ್ವವಿದ್ಯಾಲಯದಲ್ಲಿ ತಮ್ಮ ವ್ಯಾಸಂಗವನ್ನು ನಡೆಸಿದರು. ‘ಕನ್ನಡ ಸಾಹಿತ್ಯ ವಿಮರ್ಶೆಯ ಐತಿಹಾಸಿಕ ಅಧ್ಯಯನ’ ಇವರ ಪಿಎಚ್. ಡಿ ಪ್ರಬಂಧ. ಹಲವಾರು ಕಿರುತೆರೆ ಧಾರಾವಾಹಿಗಳು ಮತ್ತು ಸಿನಿಮಾಗಳಿಗೆ ಕಥಾ ವಿಸ್ತರಣೆ, ಸಂಭಾಷಣೆ, ಕಿರುಚಿತ್ರಗಳ ನಿರ್ದೇಶನ, ನಿರ್ಮಾಣ, ನಿರ್ವಹಣೆ, ರಾಜ್ಯಮಟ್ಟದ ವಿಚಾರ ಸಂಕಿರಣ, ವಿಚಾರಗೋಷ್ಠಿಗಳಲ್ಲಿ ಪ್ರಬಂಧ ಮಂಡನೆ, ಕವಿತಾ ವಾಚನ, ಅಭಿನವ ಚಾತುರ್ಮಾಸಿಕ ಪತ್ರಿಕೆಯ ಸಹ ಸಂಪಾದಕಿಯಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯೆಯಾಗಿ ಕೆಲಸ ನಿರ್ವಹಣೆ ಮಾಡಿದ ಅನುಭವ ಲೇಖಕಿಯದು. ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ, ಸೂರ್ಯಗಂಧೀ ...

READ MORE

Related Books