ವೀರರಾಣಿ ಕಿತ್ತೂರು ಚೆನ್ನಮ್ಮ ಮತ್ತು ಯಲಹಂಕ ಭೂಪಾಲ

Author : ಅ.ನ.ಕೃ (ಅ.ನ. ಕೃಷ್ಣರಾಯ)

Pages 216

₹ 158.00




Year of Publication: 2020
Published by: ಹೇಮಂತ ಸಾಹಿತ್ಯ
Address: # 972-ಸಿ, 62ನೇ ಅಡ್ಡರಸ್ತೆ, 10ನೇ ಮುಖ್ಯರಸ್ತೆ, 63ನೇ ಅಡ್ಡರಸ್ತೆ, 4ನೇ ಎಂ. ಬ್ಲಾಕ್, 4ನೇ ಇ-ಬ್ಲಾಕ್, ಮಂಜುನಾಥ ನಗರ, ರಾಜಾಜಿ ನಗರ, ಬೆಂಗಳೂರು-560010

Synopsys

ಖ್ಯಾತ ಸಾಹಿತಿ ಹಾಗೂ ಕಾದಂಬರಿಕಾರ ಅ.ನ.ಕೃಷ್ಣರಾಯರ ಎರಡು ಕಾದಂಬರಿಗಳ ಸಂಯುಕ್ತ ಸಂಪುಟವಿದು- ವೀರ ರಾಣಿ ಕಿತ್ತೂರು ಚೆನ್ನಮ್ಮ ಮತ್ತು ಯಲಹಂಕ ಭೂಪಾಲ (ಮಾಗಡಿ ಕೆಂಪೇಗೌಡ). ಬ್ರಿಟಿಷ್ ರ ವಿರುದ್ಧ ಹೋರಾಡಿದ ಕಿತ್ತೂರು ರಾಣಿಯ ವೀರ ಚರಿತ್ರೆ ಇದ್ದರೆ, ಬೆಂಗಳೂರು ನಿರ್ಮಾತೃ ಕೆಂಪೇಗೌಡನ ಬದುಕು-ಹೋರಾಟದ ಚಿತ್ರಣವನ್ನು ಇಲ್ಲಿ ಲೇಖಕರು ಕಟ್ಟಿಕೊಟ್ಟಿದ್ದಾರೆ. ಲೇಖಕರ ನಿರೂಪಣಾ ಶೈಲಿ ಗಮನ ಸೆಳೆಯುತ್ತದೆ. ಈ ಎರಡೂ ಸಂಸ್ಥಾನಗಳ ಐತಿಹಾಸಿಕ ಅಧ್ಯಯನಕ್ಕೂ ಕೃತಿಗಳು ಉಪಯುಕ್ತವಾಗಿವೆ. ಐತಿಹಾಸಿಕ ವಿಷಯ ವಸ್ತುವನ್ನು ಸಾಹಿತ್ಯಕವಾಗಿ ಪರಿವರ್ತಿಸುವಾಗಿನ ಕಲಾತ್ಮಕತೆಯನ್ನು ಇಲ್ಲಿಯ ಕಾದಂಬರಿಗಳ ಮೂಲಕ ತಿಳಿಯಬಹುದು.

About the Author

ಅ.ನ.ಕೃ (ಅ.ನ. ಕೃಷ್ಣರಾಯ)
(09 May 1908 - 04 July 1971)

‘ಅನಕೃ’ ಎಂದೇ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅವರು ಹೆಸರಾಂತ ಕಾದಂಬರಿಕಾರರು. ‘ಕಾದಂಬರಿ ಸಾರ್ವಭೌಮ’ ಎನಿಸಿಕೊಂಡಿದ್ದ ಅವರು ಕನ್ನಡದ ಜನಪ್ರಿಯ ಕಾದಂಬರಿಕಾರರು. ಪ್ರಗತಿಶೀಲ ಸಾಹಿತ್ಯದ ಪ್ರಮುಖ ಲೇಖಕರು. ತಂದೆ ನರಸಿಂಗರಾವ್, ತಾಯಿ ಅನ್ನಪೂರ್ಣಮ್ಮ. 1908ರ ಮೇ 9ರಂದು ಜನಿಸಿದ ಅವರುಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿದರು. ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ದೇಶೀಯ ವಿದ್ಯಾಶಾಲೆಯಲ್ಲಿ ಪಡೆದರು. ಮೆಟ್ರಿಕ್ ಓದುತ್ತಿದ್ದಾಗ ಶಾಂತಿನಿಕೇತನಕ್ಕೆ ಹೋಗಿ ಬಂದರು. ಬರಹ ಮಾಡಿಯೇ ಬದುಕಿದವರು ಅನಕೃ. ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕಥಾಂಜಲಿ, ಬಾಂಬೆ ಕ್ರಾನಿಕಲ್, ವಿಶ್ವವಾಣಿ ಪತ್ರಿಕೆಗಳನ್ನು ...

READ MORE

Related Books