"ಲೆಸ್ಬಿಯನ್ ತರಹದ ಮೈಲಿಗೆ ವಸ್ತು ಆರಿಸಿಕೊಂಡು ಕೃತಿ ರಚಿಸಿದ್ದಕ್ಕೆ ಮೊದಲು ಅಬಿನಂದನೆ ಹೇಳುವೆ.." ಇದು ಬೆನ್ನುಡಿ ಬರೆದ ವಸುಧೇಂದ್ರರ ಸಾಲು. ಈ ಕೃತಿ ಲೆಸ್ಬಿಯನ್ ಕಥಾ ಹಂದರ ಹೊಮ್ದಿದೆ..ಇಂದಿಗೂ ಟಾಬೂ ಆಗಿರುವ ಈ ತರಹದ ಸಂಬಂಧ ಅದರ ಫಲಾಫಲಗಳೇನು ಹಾಗೂ ಇದು ಯಾಕೆ ಇನ್ನೂ ಸ್ವೀಕೃತವಾಗಿಲ್ಲ ಇತ್ಯಾದಿ ವಸ್ತು ಒಳಗೊಂಡಂತಹ ಪುಸ್ತಕ ಇದು,
ಹುಬ್ಬಳ್ಳಿಯಲ್ಲಿ ಜನಿಸಿದ ಉಮೇಶ ದೇಸಾಯಿ ಸದ್ಯ ಬೆಂಗಳೂರಿನಲ್ಲಿ ಲೆಕ್ಕಿಗನಾಗಿ ಕೆಲಸ ಮಾಡುತ್ತಿದ್ದಾರೆ. ಮೊದಲಿಂದಲೂ ಸಾಹಿತ್ಯದಲ್ಲಿ ಆಸಕ್ತಿ. ’ಚೌಕಟ್ಟಿನಾಚೆ’ ಎಂಬ ಕಥಾಸಂಕಲನ ಹಾಗೂ ’ಭಿನ್ನ’ ಎಂಬ ಕಾದಂಬರಿ ಪ್ರಕಟಿಸಿದ್ದಾರೆ. ಸದ್ಯದಲ್ಲಿಯೇ ’ಅನಂತಯಾನ’ ಎನ್ನುವ ಕಾದಂಬರಿ ಬರಲಿದೆ. ಸ್ವತಃ ಪ್ರಕಾಶನ ಸಂಸ್ಥೆ ನಡೆಸುತ್ತಿದ್ದು ಅನೇಕ ಹೊಸಬರ ಕೃತಿ ಪ್ರಕಟಣೆ ಮಾಡುತ್ತಿದ್ದಾರೆ. ...
READ MORE