ಬಾಳ ಸಂಕೋಲೆ

Author : ವೇದಾಮಂಜುನಾಥನ್ ಬೆಳಗೆರೆ

Pages 248

₹ 200.00
Year of Publication: 2021
Published by: ಸಹನಾ ಪ್ರಕಾಶನ
Address: ನಂ.18, ಶ್ರೀನಿಧಿ, 2ನೆ ಬಿ ಕ್ರಾಸ್, ವಿದ್ಯಾಪೀಠ ಸರ್ಕಲ್ ಹತ್ತಿರ, ಟಿ.ಆರ್. ನಗರ ಅಂಚೆ, ಬೆಂಗಳೂರು- 560 028
Phone: 9741092721

Synopsys

ಲೇಖಕಿ ವೇದಾಮಂಜುನಾಥನ್ ಅವರ ಕಿರು ಕಾದಂಬರಿ ಬಾಳ ಸಂಕೋಲೆ. ಇದರಲ್ಲಿ ಒಟ್ಟು ನಾಲ್ಕು ಕಿರು ಕಾದಂಬರಿಗಳು ಇವೆ. ಬಾಳ ಸಂಕೋಲೆ, ಪ್ರೀತಿ ಎಂದರೇ.., ಮಿಂಚಿ ಹೋದ ಘಳಿಗೆ, ಹೊಂಗಿರಣ. ಬಾಳ ಸಂಕೋಲೆ ಇದೊಂದು ಸಂಪೂರ್ಣ ಸಾಮಾಜಿಕ ಕಾದಂಬರಿ. ನಾಯಕಿ ಪಾವನಿ ಅಪ್ಪಟ ಸಂಪ್ರದಾಯಬದ್ಧ ಮನೆಯ ಹುಡುಗಿ. ಕಾಲೇಜಿನ ದಿನಗಳಲ್ಲಿ ರೌಢಿ ಮಹೇಂದ್ರನಿಂದ ಆದ ಒಂದು ಸಣ್ಣ ವಿಷಯದ ಘಟನೆ ತಾರಕಕ್ಕೆ ಏರಿ, ಅವಳ ಬದುಕಿನ ಪಥವನ್ನೇ ಬದಲಾಯಿಸುತ್ತದೆ. ಜೈಲಿಗೆ ಹೋಗಿ ಬಂದ ಅವಳನ್ನು ತಂದೆ ಮನೆಗೆ ಸೇರಿಸದಿದ್ದಾಗ, ಪಾವನಿ ರಾಮದೇವರ ದೇವಸ್ಥಾನದ ಅರ್ಚಕರ ಆಶ್ರಯ ಪಡೆಯುತ್ತಾಳೆ. ದೇವಸ್ಥಾನಕ್ಕೆ ಬರುತ್ತಿದ್ದ ಜಸ್ಟೀಸ್ ವಿಜಯಲಕ್ಷ್ಮಿಯವರ ನೆರವಿನಿಂದ ಓದಿ, ಡೆಪ್ಯುಟಿ ಕಮೀಷನರ್ ಆಗುತ್ತಾಳೆ ಪಾವನಿ. ಇತ್ತ ಮಹೇಂದ್ರ ರಾಜಕೀಯ ಪುಡಾರಿಯಾಗಿದ್ದು, ಹಲವಾರು ವೇದಿಕೆಗಳಲ್ಲಿ ಇಬ್ಬರ ಭೇಟಿಯಾಗುತ್ತದೆ. ಹೇಗಾದರೂ ಮಾಡಿ ಮಹೇಂದ್ರನನ್ನು ಮಟ್ಟ ಹಾಕಬೇಕು ಎಂದು ಯೋಚಿಸುವ ಪಾವನಿ. ಇದರ ನಡುವೆ ಸಾಧು ಸಂತನಂತಿರುವ ಪತಂಜಲಿಯ ಪರಿಚಯವಾಗುತ್ತದೆ. ಆತ ಒಪ್ಪಿದರೆ, ಗೃಹಸ್ಥಾಶ್ರಮ ಸ್ವೀಕರಿಸುವುದಾದರೆ ತಾನು ಮದುವೆಯಾಗಲು ಸಿದ್ಧ ಎನ್ನುವ ಪಾವನಿ. ಆದರೆ ಎಲ್ಲವೂ ವ್ಯತಿರಿಕ್ತವಾಗಿ ಪರಿಣಮಿಸುತ್ತವೆ. ಆದರೂ ಪಾವನಿ ದಿಟ್ಟತನದಿಂದ ಹೋರಾಡುತ್ತಾಳೆ. ಮಹೇಂದ್ರನನ್ನು ಕೊನೆಗೆ ಮಟ್ಟ ಹಾಕುತ್ತಾಳೆ. ಆದರೆ ಈ ಪತಂಜಲಿ ಯಾರು? ಎಂಥವನು? ಪಾವನಿ ಅವನನ್ನು ಮದುವೆಯಾದಳೇ, ಇಲ್ಲವೇ ಎಂಬುದೇ ಅಂತ್ಯದ ಕುತೂಹಲ. ಇನ್ನೊಂದು ಕಿರು ಕಾದಂಬರಿ ಪ್ರೀತಿ ಎಂದರೇ.. ಸಾಧನ ಎನ್ನುವ ಶಾಲಾಶಿಕ್ಷಕಿ ದುಶ್ಚಟಗಳ ಭೂಪನನ್ನು ಮದುವೆಯಾಗಿ ಕಷ್ಟ ಅನುಭವಿಸುತ್ತಾಳೆ. ಜಾತಕ ನೋಡಿ ಮಾಡಿದ ಮದುವೆ ಮುರಿದು ಹೋಗಿ, ಜಾತಕ ಸರಿಯಿಲ್ಲವೆಂದು ನಿರಾಕರಿಸಿದ ಗಂಡನ್ನು ಮದುವೆಯಾಗುತ್ತಾಳೆ. ಪ್ರೀತಿ ಎಂಬುದಕ್ಕೆ ನಿಜವಾದ ಅರ್ಥ ದೊರೆಯುತ್ತದೆ. ಮಿಂಚಿ ಹೋದ ಘಳಿಗೆ.. ಪ್ರೀತಿ ಪ್ರೇಮಗಳ ತಾಕಲಾಟದಲ್ಲಿ ಹದಿಹರೆಯದ ವಯಸ್ಸಿನ ಯುವಕ ಯುವತಿಯ ಕಥೆ. ಕಷ್ಟಪಟ್ಟು ಹುಡುಗಿಯ ಮನ ಒಲಿಸಿದ ಹುಡುಗನಿಗೆ ಕೊನೆಗೆ ದೊರೆತದ್ದು ನೋವು, ಯಾತನೆ. ಆ ಒಂದು ಸಮಯ ಎಂಬುದು ಕಳೆದು ಹೋಗಿಬಿಟ್ಟರೆ, ಮತ್ತೆ ಬಾರದು. ಜೀವನದ ಕೆಲವು ಕ್ಷಣಗಳು ಮಹತ್ವಪೂರ್ಣವಾಗಿರುತ್ತವೆ. ಇಲ್ಲಿ ಸಮಯ ಮಿಂಚಿ ಹೋಗಿರುತ್ತದೆ. ನೋವು, ಹತಾಶೆ ಕಾಡುತ್ತದೆ!! ಮತ್ತೊಂದು ಕಿರು ಕಾದಂಬರಿ ಹೊಂಗಿರಣ. ಶ್ರೀಮಂತರ ಮಗಳನ್ನು ಮದುವೆಯಾದ ಬಡಹುಡುಗ. ಆರ್ಥಿಕ ಸಮಸ್ಯೆ ಕಿತ್ತು ತಿನ್ನುವಾಗ, ಅವನಿಗೆ ಮಾರಕ ರೋಗವೂ ಕಾಣಿಸಿಕೊಳ್ಳುತ್ತದೆ. ತನ್ನ ಗಂಡನ ಚಿಕಿತ್ಸೆಗೆ ಹಣಕ್ಕಾಗಿ ಪರದಾಡುತ್ತಾಳೆ. ಬಾಸ್ ನ ಹತ್ತಿರ ಸಾಲ ಕೇಳಿದಾಗ, ಅವನು ಅವಕಾಶ ದುರುಪಯೋಗ ಪಡಿಸಿಕೊಳ್ಳಲು ಯತ್ನಿಸುತ್ತಾನೆ. ಕೊನೆಗೆ ಆ ಪ್ರೀತಿಸಿದ ಜೋಡಿಗೆ ಸುಖಾಂತ್ಯವಾಯಿತೇ ಎಂಬ ಮುಕ್ತಾಯದಲ್ಲಿ ಕಥೆ ಕೊನೆಗೊಳ್ಳುತ್ತದೆ.

About the Author

ವೇದಾಮಂಜುನಾಥನ್ ಬೆಳಗೆರೆ

ಬೆಳಗೆರೆಯಂತಹ ಸಾಹಿತ್ಯ ವಾತಾವರಣದಿಂದ ಬಂದ ವೇದಾರವರು, ಬಾಲ್ಯದಿಂದಲೇ ಬರವಣಿಗೆಯನ್ನು ರೂಢಿಸಿಕೊಂಡವರು. ಪದವಿ ವ್ಯಾಸಂಗದಲ್ಲಿ ಕನ್ನಡ ಐಚ್ಛಿಕ ವಿಷಯವಾಗಿ ತೆಗೆದುಕೊಂಡಿರುತ್ತಾರೆ. ಇದಲ್ಲದೆ, ಕನ್ನಡ ಸಾಹಿತ್ಯ ಪರಿಷತ್ತಿನವರು ನಡೆಸುವ ಕನ್ನಡ ಜಾಣ ಹಾಗು ರತ್ನ ಪರೀಕ್ಷೆಗಳಲ್ಲಿ ಕರ್ನಾಟಕ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಗಳಿಸಿರುತ್ತಾರೆ.  ಕತೆ, ಕವನ ಕಾದಂಬರಿ, ಲೇಖನ, ಹಾಸ್ಯ ಬರೆಯುವ ವೇದಾರವರು ಇದುವರೆಗೂ 30 ಕೃತಿಗಳನ್ನು ರಚಿಸಿದ್ದಾರೆ. ಇವರ ಬರವಣಿಗೆಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.  ಇದಲ್ಲದೆ ವೇದಾರವರು ಟಿವಿ ಧಾರಾವಾಹಿ ಹಾಗು ಕಿರುಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಬರೆದಿರುತ್ತಾರೆ. ಇವರ ಕಥೆಗಳು ಆಕಾಶವಾಣಿಯಲ್ಲಿಯೂ ಬಿತ್ತರಗೊಂಡಿವೆ. ವೇದಾಮಂಜುನಾಥನ್ ರವರ ಮಕ್ಕಳ ...

READ MORE

Related Books