ಬಸವಿ

Author : ಆರ್‍ಯಾಂಬ ಪಟ್ಟಾಭಿ

Pages 191

₹ 110.00




Published by: ತ್ರಿವೇಣಿ ಪಬ್ಲಿಕೇಷನ್
Address: ಮೈಸೂರು

Synopsys

ಆರ್ಯಂಬ ಪಟ್ಟಾಭಿ ಯವರ ಕಾದಂಬರಿ ಬಸವಿ. ಬಸವಿ ಅಂದರೆ ದೇವದಾಸಿ. ನೂರಾರು ವರ್ಷಗಳಿಂದ ನಡೆದು ಬಂದ ಈ ಪದ್ಧತಿ ನಂತರ ಈ ಪದ್ಧತಿ ಈಗ ಇಲ್ಲ ದೇವದಾಸಿ ಪದ್ಧತಿ ಭಾರತ ದೇಶದಲ್ಲಿ ನಾನಾ ಕಡೆ ವಿಧವಿಧವಾಗಿ ಆಚರಣೆಯಲ್ಲಿ ಇದ್ದವು ಇದು ಅವಿದ್ಯಾವಂತರ ಒಂದು ನಂಬಿಕೆ ಧರ್ಮ.ಜಾತಿಯ ಸ್ಪರ್ಶ ಕೊಟ್ಟು ಈ ದೇವದಾಸಿ ಪದ್ಧತಿಯಿಂದ ಅದೆಷ್ಟೋ ಹೆಣ್ಣು ಮಕ್ಕಳ ಜೀವನ ದುಃಖದಲ್ಲಿ ಅಂತ್ಯ ಕಂಡಿದೆ. ದೇವದಾಸಿ ಪದ್ಧತಿ, ಮಾನವ ಯಾವಾಗ ಮೇಲ್ಜಾತಿ ಕೆಳಜಾತಿ ಅಂತ ಪಂಗಡ ಮಾಡಿ ಬಡ ಜನಗಳನ್ನು ಶೋಷಣೆಗೆ ಗುರಿ ಮಾಡಿ.ಕಾರಣಂತರದಿಂದ ತಂದೆ ತಾಯಿ ತಮ್ಮ ಹೆಣ್ಣು ಮಗಳನ್ನು ದೇವಸ್ಥಾನದಲ್ಲಿ ದೇವದಾಸಿಯಾಗಿ ಮಾಡಿ ಊರ ಗೌಡನಿಗೆ ಅರ್ಪಿತವಾಗುತ್ತಾಳೆ. ಆದರೆ ದೇವದಾಸಿಗೆ ಮದುವೆ ಅನ್ನೊದು ಅವರ ಜೀವನದಲ್ಲಿ ಇಲ್ಲ.ಕಾಲಾನಂತರ ಅವರಲ್ಲೂ ವಿದ್ಯಾವಂತರು.ವಿಚಾರವಂತರು ಈ ಪದ್ಧತಿಯನ್ನು ಖಂಡಿಸಿ ಅವಿದ್ಯಾವಂತರಿಗೆ ಇದು ತಪ್ಪು ಅಂತ ತಿಳಿವಳಿಕೆ ನೀಡಿ ಕಾಲ ಬದಲದಂತೆ ಜನರು ಬದಲಾಗಿ ಈ ಪದ್ಧತಿಯಿಂದ ದೂರ ಸರಿದು ವಿದ್ಯಾವಂತರಾಗಿ ನಾನಾ ಕಡೆ ನೆಲೆಸಿದ್ದಾರೆ.

About the Author

ಆರ್‍ಯಾಂಬ ಪಟ್ಟಾಭಿ
(12 March 1936)

ಕಾದಂಬರಿಗಾರ್ತಿ ಆರ್‍ಯಾಂಬ ಪಟ್ಟಾಭಿ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ. 1936 ಮಾರ್ಚ್‌ 12 ರಂದು ಮಂಡ್ಯದಲ್ಲಿ ಜನಿಸಿದರು. ತಂದೆ ಬಿ. ಎಂ. ಕೃಷ್ಣಸ್ವಾಮಿ, ತಾಯಿ ತಂಗಮ್ಮ. ’ಹೊಂಗನಸು, ಆರಾಧನೆ, ಸವತಿಯ ನೆರಳು, ಕಪ್ಪು-ಬಿಳುಪು, ನನ್ನವಳು’ ಅವರ ಕಥಾಸಂಕಲನಗಳು. ’ಅನುರಾಗ’, ನರಭಿಕ್ಷುಕ ಕಾದಂಬರಿಗಳನ್ನುಹಾಗೂ ಮಕ್ಕಳ ಮತ್ತು ಕ್ರೀಡೆಗೆ ಸಂಬಂಧಿಸಿದ ಕೃತಿಗಳನ್ನು ರಚಿಸಿದ್ದಾರೆ. 'ಟೆನ್ನಿಸ್'’ ಕೃತಿಗೆ ಮಲ್ಲಿಕಾ ಪ್ರಶಸ್ತಿ, ಬಿ. ಸರೋಜದೇವಿ ಶ್ರೀಹರ್ಷ ಪ್ರಶಸ್ತಿ ಸಂದಿವೆ. ...

READ MORE

Related Books