ಹಾವು ಏಣಿ

Author : ಪಾರ್ವತಿ ಪಿಟಗಿ

Pages 160

₹ 100.00




Year of Publication: 2014
Published by: ಸಾಹಿತ್ಯ ನಂದನ
Address: ನಂ.9, 4ನೇ ‘ಇ’ ವಿಭಾಗ, 10 ‘ಎ’ ಮುಖ್ಯರಸ್ತೆ, ರಾಜಾಜಿನಗರ, ಬೆಂಗಳೂರು-560010
Phone: 080-23354619

Synopsys

ಗುಜ್ಜರ ಮದುವೆ ಎಂಬ ಹೆಸರಿನಲ್ಲಿ ಹೆಣ್ಣುಗಳ ಮಾರಾಟ ಮತ್ತು ಮರಳು ಮಾಫಿಯಾದಂತಹ ಪ್ರಮುಖ ವಿಷಯ ವಸ್ತುವನ್ನು ಈ ಕಾದಂಬರಿ ಹೊಂದಿದೆ. ಕಥಾನಾಯಕಿ ಸಾಕಷ್ಟು ವಿದ್ಯಾರ್ಥಿಗಳಿಗೆ ಪಾಠ ಮಾಡುವ ಕಾಲೇಜು ಉಪನ್ಯಾಸಕಿ, ಅಡ್ಡ ದಾರಿಯಲ್ಲಿ ಸಾಗುತ್ತಿದ್ದ ಸಾಕಷ್ಟು ವಿದ್ಯಾರ್ಥಿಗಳನ್ನು ಸರಿದಾರಿಗೆ ತರಲು ಯತ್ನಿಸಿದಾಗ , ಗಂಡನ ಅಕಾಲ ಮರಣದಿಂದ  ನಾಯಕಿ ತತ್ತರಿಸಿ ಹೋಗಿ ಬದುಕೇ ಬೇಡವೆಂಬ ಸ್ಥಿತಿಯಲ್ಲಿದ್ದಾಗ ಆಕೆಯ ಶಿಷ್ಯನೇ ಆಕೆಗೆ ನೆರಳಾಗುತ್ತಾನೆ. ಸುತ್ತಲೂ ಕತ್ತಲು ಕಗ್ಗತ್ತಲು, ಜೋರು ಮಳೆ ಗಾಳಿ. ರಾಘವ ಕೈಯಲ್ಲಿ ಟಾರ್ಚ್ ಹಿಡಿದಿದ್ದೆ. ಟಾರ್ಚಿನ ಮಬ್ಬು ಬೆಳಕಿನಲ್ಲಿ ದಾರಿ ಸ್ಪಷ್ಟವಾಗಿರಲಿಲ್ಲ. ಸ್ವಲ್ಪವಷ್ಟೇ ಮುಂದೆ ಸಾಗಿದ್ದೆವು, ಖಡಲ್ ಖಡಲ್ ಗುಡುಗುಗಳ ನಡುವೆ ಫಳಕ್ ಎಂದು ಮಿಂಚು ಹರಿದು ಒಂದೇ ಕ್ಷಣದಲ್ಲಿ ಇಡೀ ಬ್ರಹ್ಮಾಂಡವೇ ಗೋಚರವಾಯಿತು. ಆ ಮಿಂಚು ತೋರಿದ ಬೆಳಕಿನಲ್ಲಿ ನಾನು ದಾಪುಗಾಲು ಹಾಕಿ ರಾಘವನನ್ನು ದಾಟಿ ಮುಂದೆ ಗಟ್ಟಿಹೆಜ್ಜೆ ಇಡತೊಡಗಿದೆ. ಹೀಗೆ ಕಾದಂಬರಿಯೂ ಮುಂದುವರೆಯುತ್ತಿದೆ.

About the Author

ಪಾರ್ವತಿ ಪಿಟಗಿ
(02 June 1975)

ಬೆಳಗಾವಿ ತಾಲ್ಲೂಕು ಸುಳೇಭಾವಿಯಯವರಾದ ಪಾರ್ವತಿ ಅವರು ಗ್ರಾಮ ಪಂಚಾಯಿತಿ ಆಡಳಿತ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೈಸೂರಿನ ಶಾಂಗ್ರೀ- ಲಾ ಅಕಾಡೆಮಿ ನಿರ್ದೇಶಕಿಯಾಗಿ ಸಾಮಾಜಿಕ ಮತ್ತು ಸಾಹಿತ್ಯಕ ಚಟುವಟಿಕೆಯಲ್ಲಿ ತೊಡಗಿದ್ದಾರೆ. ನೇಕಾರರ ಬದುಕು ಬವಣೆಯನ್ನು 'ಮಿಲನ' ಕಾದಂಬರಿಯಲ್ಲಿ ನೈಜವಾಗಿ, ಕಲಾತ್ಮಕವಾಗಿ ಕಟ್ಟಿಕೊಟ್ಟ ಪಾರ್ವತಿ ಪಿಟಗಿ ಐದು ಕಾದಂಬರಿ, ಒಂದು ಕಥಾ ಸಂಕಲನ, ಲೇಖನ ಸಂಕಲನ ಪ್ರಕಟಿಸಿದ್ದಾರೆ.  ಅವರ ಹಲವು ಕಥೆ, ಕಾದಂಬರಿ, ಲೇಖನಗಳು  ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. `ಮಿಲನ' ಕಾದಂಬರಿಗೆ ದೇವರ ದಾಸಿಮಯ್ಯ ಸಾಹಿತ್ಯ ಶ್ರೀ ಪ್ರಶಸ್ತಿ ಸಂದಿದೆ. ಅವರ ಬಹುತೇಕ ಕಥೆ, ಕಾದಂಬರಿಗೆ ಪ್ರಶಸ್ತಿಗಳು ಸಂದಿವೆ. ಬೆಳಗಾವಿ ಜಿಲ್ಲೆಯ ಆಡುಭಾಷೆಯಲ್ಲಿ ...

READ MORE

Related Books