ಸೀಮಂತಿನಿ

Author : ಸೂರ್ಯನಾರಾಯಣ ಚಡಗ

Pages 184

₹ 90.00
Year of Publication: 2011
Published by: ಇಂದಿರಾ ಪ್ರಕಾಶನ
Address: ಬೆಂಗಳೂರು

Synopsys

ಕಳೆದ ಶತಮಾನದ ಉತ್ತರಾರ್ಧದ ಜನಪ್ರಿಯ ಲೇಖಕರಲ್ಲಿ ಒಬ್ಬರಾದ ಸೂರ್ಯನಾರಾಯಣ ಚಡಗ ಅವರು ಐವತ್ತಕ್ಕೂ ಮಿಕ್ಕಿದ ಕಾದಂಬರಿಗಳನ್ನು ಬರೆದಿದ್ದಾರೆ. ಮನೆತನ, ಸ್ವರ್ಗದ ಬಾಗಿಲು, ಮನೆಗೆ ಬಂದ ಸೊಸೆ - ಅವರು ಬರೆದ ಕೆಲವು ಕಾದಂಬರಿಗಳು.ಇವರ ಪುಸ್ತಕಗಳಲ್ಲಿ ಮಂಗಳೂರು,ಉಡುಪಿ, ಕುಂದಾಪುರ, ಕೋಟೇಶ್ವರ ಮೊದಲಾದೆಡೆ ಅಂದಿನ ದಿನಗಳಲ್ಲಿ ಆಡುತ್ತಿದ್ದ ಭಾಷೆಯ ಸೊಗಡು, ಪ್ರಕೃತಿಯ ಸುಂದರ ವಿವರಣೆ, ಜನರ ಜೀವನದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡ ಆಚಾರ ವಿಚಾರಗಳು, ಕುಲಕಸುಬುಗಳು, ಕಲೆಗಳು,ಕ್ರೀಡೆಗಳು ಕಥೆಯ ಹರಿವಿನೊಂದಿಗೆ ಸೇರಿ ಮನರಂಜನೆ ಹಾಗೂ ಮಾಹಿತಿ ಎರಡೂ ಸಿಗುತ್ತವೆ. ಇದಕ್ಕೆ ಪುರಾವೆಯಂತಿದೆ ಇಲ್ಲಿರುವ ಕಾದಂಬರಿ. ಯಕ್ಷಗಾನ ಬಯಲಾಟವೆಂಬುದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು,ಉಡುಪಿ ಮತ್ತು ಕುಂದಾಪುರದ ಸುತ್ತಲಿನ ಊರುಗಳಲ್ಲಿ ಪ್ರಚಲಿತವಿದ್ದ , ಈಗಲೂ ಇರುವ ಕಲೆ. ವೀರನಾಯ್ಕನೆಂಬ ಕಲಾವಿದನ ಯಕ್ಷಗಾನ ಬಯಲಾಟದ ವ್ಯಾಮೋಹ, ಅದನ್ನು ಕಲಿತು ಪಾರಂಗತನಾಗಲು ಮನೆ ಮತ್ತು ಹೆತ್ತವರನ್ನು ಬಿಟ್ಟು ದೂರ ಹೋಗಿ ಸಾಧನೆ ಮಾಡುವ ಆತನ ಧ್ಯೇಯ ಈ ಕಥೆಯಲ್ಲಿ ಸುಂದರವಾಗಿ ಚಿತ್ರಿಸಲಾಗಿದೆ.

About the Author

ಸೂರ್ಯನಾರಾಯಣ ಚಡಗ
(13 April 1932 - 02 November 2006)

ದಕ್ಷಿಣ ಕನ್ನಡ ಜಿಲ್ಲೆಯ ಕೋಟ್ಟೇಶ್ವರದಲ್ಲಿ 1932 ಏಪ್ರಿಲ್‌ 13 ಜನಿಸಿದ ಸೂರ್ಯನಾರಾಯಣರಾವ್ ಚಡಗ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಚಿರಪರಿಚಿತರು. ತಂದೆ ನಾರಾಯಣ ಚಡಗ, ತಾಯಿ ಶೇಷಮ್ಮ.   30ಕ್ಕೂ ಹೆಚ್ಚು ಕಾದಂಬರಿ, 3 ಸಣ್ಣ ಕಥಾ ಸಂಕಲನ, ಕಾಮಧೇನು, ನಗೆ ನಂದನ, ಸುಹಾಸ, ದಿಗಂತ ಮತ್ತು ಮೆಚ್ಚಿನ ಕನ್ನಡ ಬರಹಗಾರರು ಹಾಗೂ ಮೂರು ಅಭಿನಂದನಾ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಕಾವೇರಿ, ಕ್ಷಮೆ ಇರಲಿ ಪ್ರಭುವೆ, ಸೀಮಂತಿ, ಅಮರಸರಸ್ವತಿ, ಬಂಗಾಲಕ್ಷ್ಮೀ ಧರ್ಮ, ಕರ್ಮ, ಹೃದಯರಾಣಿ ಕಾದಂಬರಿಗಳು. ‘ಕಾಮಧೇನು, ನಗೆನಂದನ’ - ಅವರ ಸಂಪಾದಿತ ಕೃತಿ. ‘ಜಯದೇವಿತಾಯಿ’ (ಜಯದೇವಿತಾಯಿ ಲಿಗಾಡೆ), ‘ಕಾರಂತ ಕೊಂಗಾಟೆ (ಶಿವರಾಮ ಕಾರಂತರು), ‘ಸೃಜನ’ (ಡಿ. ವೀರೇಂದ್ರ ಹೆಗಡೆ) ಸಂಭಾವನ ...

READ MORE

Related Books