ಎನ್ ಕೌಂಟರ್

Author : ಕುಂ. ವೀರಭದ್ರಪ್ಪ

Pages 300

₹ 295.00




Year of Publication: 2021
Published by: ಅಂಕಿತ ಪುಸ್ತಕ
Address: 53, ಶಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು- 560004
Phone: 0802661700

Synopsys

‘ಎನ್ ಕೌಂಟರ್’ ಕುಂ.ವೀರಭದ್ರಪ್ಪ ಅವರು ಬರೆದಿರುವ ನೈಜ ಘಟನೆಯಾಧಾರಿತ ಕಾದಂಬರಿ. ಈ ಕತೆಯ ಮೂಲ ಹುಟ್ಟಿದ್ದು ಐಪಿಎಸ್ ಅಧಿಕಾರಿ ಶಂಕರ ಬಿದರಿಯವರು ಹೇಳಿದ ನೈಜ ಘಟನೆಯೊಂದರಿಂದ ಎನ್ನುತ್ತಾರೆ ಕಾದಂಬರಿಕಾರ ಕುಂವೀ.

ಶಂಕರ ಬಿದರಿಯವರು ಬಳ್ಳಾರಿಯಲ್ಲಿ ಭೀಮ್ಲಾ ನಾಯಕ್ ಹೆಸರಿನ ಕುಖ್ಯಾತನನ್ನು ಎನ್ ಕೌಂಟರ್ ಮಾಡಿದ್ದು 1990, ಸೆಪ್ಟೆಂಬರ್ ಮಾಹೆಯಲ್ಲಿ. ಆ ಎನ್ ಕೌಂಟರ್ ನ ನೆನಪುಗಳನ್ನು ಲೇಖಕ ಕುಂ.ವೀರಭದ್ರಪ್ಪನವರಲ್ಲಿ ಹಂಚಿಕೊಂಡ ಬಿದರಿ ಅವರು ‘ಈ ಕುರಿತು ಬರೆಯಿರಿ ’ ಎಂದು ತಿಳಿಸಿದ ಕಾರಣದಿಂದ ಈ ಕಾದಂಬರಿಯನ್ನು ಬರೆದದ್ದಾಗಿಯೂ ಲೇಖಕರು ತಿಳಿಸಿದ್ದಾರೆ.

ಭೀಮ್ಲಾ ನಾಯಕ ಕ್ರಿಮಿನಲ್ ಕೃತ್ಯಗಳನ್ನು ಮೈಮೇಲೆಳೆದುಕೊಂಡು, ಚಂಡಮಾರುತದಂತೆ ಸುಳಿದಾಡಿದ, ನಿರ್ದಯಿ ಕೃತ್ಯಗಳಿಂದ ಅಧಿಕಾರಿಗಳ ಧನಿಕರ ನಿದ್ದೆಗೆಡೆಸಿದ, ಎನ್ ಕೌಂಟರ್ ಆಗಲೆಂದೇ ಹುಟ್ಟಿದ, ಎನ್ ಕೌಂಟರ್ ನಲ್ಲಿ ಸಾಯಲು ನಿಶ್ಚಯಿಸಿದ, ಕೊನೆಗೆ ಹಾಗೇ ಸತ್ತ ಮೇರಾವತ್ ಭೀಮ್ಲಾನಾಯಕ್. ಕೆಡುಕುತನದ ನಂಜು ಅವನ ದೇಹದ ತುಂಬೆಲ್ಲಾ ವ್ಯಾಪಿಸಿತ್ತು, ಅವನ ಮನಸ್ಸನ್ನು ಪ್ರಳಯಾಂತಕಾರಿಯಾಗಿಸಿತ್ತು. ಆದರೂ ಅವನಲ್ಲಿ ಎಳ್ಳುಗಾತ್ರದಷ್ಟು ಒಳ್ಳೆತನವಿತ್ತು, ಆ ಒಳ್ಳೆತನದ ಪ್ರತಿಬಿಂಬ ಈ ಕೃತಿ ಎನ್ನುತ್ತಾರೆ ಕುಂವೀ.

About the Author

ಕುಂ. ವೀರಭದ್ರಪ್ಪ
(01 October 1953)

ಕುಂ.ವೀ. ಎಂದೇ ಜನಪ್ರಿಯರಾಗಿರುವ ಕಾದಂಬರಿಕಾರ, ಕತೆಗಾರ ಕುಂ. ವೀರಭದ್ರಪ್ಪ ಅವರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನವರು. 1953ರ ಅಕ್ಟೋಬರ್ 1ರಂದು ಜನಿಸಿದರು. ‘ಬೇಲಿ ಮತ್ತು ಹೊಲ’ ಕಿರುಕಾದಂಬರಿಯ ಮೂಲಕ ಕನ್ನಡ ಸಾಹಿತ್ಯದ ಶಿಷ್ಟ ಪರಂಪರೆಯ ಬೇಲಿಗಳನ್ನು ಜಿಗಿದ ಕುಂ. ವೀರಭದ್ರಪ್ಪ, ಓದುಗರನ್ನು ಆಕರ್ಷಿಸಿದ್ದು ತಮ್ಮ ವಿಶಿಷ್ಟ ಭಾಷಾ ಪ್ರಯೋಗ ಮತ್ತು ನುಡಿಗಟ್ಟುಗಳಿಂದ. ಅವರ ಕತೆಗಳಲ್ಲಿ ಕಾದಂಬರಿಗಳಲ್ಲಿ ಕಾಣಿಸಿಕೊಂಡ ಭಾಷೆ ಅವರಿಗೆ ಸಾಹಿತ್ಯದಲ್ಲೊಂದು ಪ್ರತ್ಯೇಕ ಸ್ಥಾನ ಕಲ್ಪಿಸಿಕೊಟ್ಟಿತು. ’ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ’, ’ಕತ್ತಲಿಗೆ ತ್ರಿಶೂಲ ಹಿಡಿದ ಕತೆ’ಗಳ ಮೂಲಕ ಸಣ್ಣ ಕತೆಯ ದಿಕ್ಕನ್ನು ಬದಲಾಯಿಸಿದರು. ಶಿವರಾಜ್ ...

READ MORE

Conversation

Related Books