ಕಲಾದರ್ಶಿ

Author : ಎಂ.ಕೆ. ಇಂದಿರಾ

₹ 100.00




Year of Publication: 2017
Published by: ಹೇಮಂತ ಸಾಹಿತ್ಯ
Address: ರಾಜಾಜಿನಗರ, ಬೆಂಗಳೂರು- 10

Synopsys

ಕಾದಂಬರಿಗಾರ್ತಿ ಎಂ.ಕೆ.ಇಂದಿರಾ ಅವರ ಕಾದಂಬರಿ `ಕಲಾದರ್ಶಿ’. ಈ ಕತೆಯ ನಾಯಕ ಒಬ್ಬ ಚಿತ್ರಕಾರ, ಪರಿಪೂರ್ಣ ಅಂಗಸೌಷ್ಟವದ ಸ್ತ್ರೀಯ ಚಿತ್ರ ಬಿಡಿಸಲು, ತನ್ನ ಕಲಾದರ್ಶಿಯ ನಿರೀಕ್ಷೆಯಲ್ಲಿರುತ್ತಾನೆ. ಕಣ್ಣಿಗೆ ಕಾಣುವ ಪ್ರತಿಯೊಬ್ಬ ಸ್ತ್ರೀಯರಲ್ಲೂ ತನ್ನ ಕಲಾದರ್ಶಿಯನ್ನು ಹುಡುಕಿ ಸೋತಿರುತ್ತಾನೆ‌. ತನ್ನ ಕಲ್ಪನೆಯಲ್ಲಿರುವ ಕಲಾದರ್ಶಿ ದೊರೆತರೆ, ಅವಳನ್ನು ಶಾಶ್ವತವಾಗಿ ತನ್ನ ಬಳಿ ಇರಿಸಿಕೊಳ್ಳಲು ತನ್ನ ಜೀವನಸಂಗಾತಿಯಾಗಿ ಅವಳನ್ನು ಸ್ವೀಕರಿಸುವ ಯೋಚನೆಯಲ್ಲಿರುತ್ತಾನೆ. ಮದುವೆಗೆ ಒತ್ತಡ ತರುವ ತಾಯಿ ಮತ್ತು ಅತ್ತಿಗೆಯರಿಗೆ, ನೆಪಗಳನ್ನು ಹೇಳುತ್ತಾ ಮದುವೆ ಮುಂದೂಡುತ್ತಾ ಬರುತ್ತಾನೆ ಎಂಬ ರೀತಿಯಲ್ಲಿ ಕತೆ ಸಾಗುತ್ತದೆ. ತನ್ನ ಮತ್ತು ಹಳ್ಳಿಯ ಆ ಮುಗ್ಧ ಹುಡುಗಿಯ ವಿವಾಹಕ್ಕೆ ಎರಡು ಮನೆಗಳಿಂದ ಬರುವ ಅಡ್ಡಿ ಆತಂಕಗಳನ್ನು ಯೋಚಿಸಿ, ನಾಲ್ಕು ವರ್ಷಗಳನ್ನು ಕಳೆಯುತ್ತಾನೆ. ತನ್ನ ಮನಸ್ಸಿನ ಭಾವನೆಯನ್ನು ಹೊರಗೆಡವಲು ಸೂಕ್ತ ಸಮಯಕ್ಕೆ ಕಾಯುತ್ತಿದ್ದ, ನಾಯಕ ತನ್ನ ಪ್ರೇಯಸಿಯನ್ನು ಜೀವನ ಸಂಗಾತಿಯಾಗಿ ಸ್ವೀಕರಿಸುವಲ್ಲಿ ಯಶಸ್ವಿಯಾದನೇ? ಎರಡು ಮನೆಯವರು ಒಪ್ಪಿದರೆ? ಯಾವುದೇ ಅಡ್ಡಿ ತಕರಾರುಗಳು ಬಂದೊದಗಿದವೇ? ಎಂಬುದನ್ನು ಎಂ.ಕೆ.ಇಂದಿರಾ ಅವರು ಈ ಕಾದಂಬರಿಯಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾರೆ.

About the Author

ಎಂ.ಕೆ. ಇಂದಿರಾ
(05 January 1917 - 15 March 1994)

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದ ಕಾದಂಬರಿಗಾರ್ತಿಯರಲ್ಲಿ ಒಬ್ಬರಾದ ಎಂ.ಕೆ.ಇಂದಿರ ಹುಟ್ಟಿದ್ದು 05-01-1917 ರಂದು. ಊರು ಮಲೆನಾಡಿನ ತೀರ್ಥಹಳ್ಳಿ. ತಂದೆ ತರೀಕೆರೆ ಸೂರ್ಯನಾರಾಯಣ, ತಾಯಿ ಬನಶಂಕರಮ್ಮ. ಇಂದಿರಾ ಓದಿದ್ದು, ಕನ್ನಡ ಮಾಧ್ಯಮಿಕ ಶಾಲೆಯ  2ನೇಯ ತರಗತಿವರೆಗೆ ಮಾತ್ರ. ತಮ್ಮ 12 ವರ್ಷಕ್ಕೆ ಮದುವೆಯಾಯಿತು. ಅವರು ಬರೆಯಲು ಆರಂಭಿಸಿದ್ದು 1963ರಲ್ಲಿ. ತುಂಗಭದ್ರ ಅವರ ಮೊದಲ ಕೃತಿ. ಮಲೆನಾಡಿನ ಸಹ್ಯಾದ್ರಿಶ್ರೇಣಿ, ಭೀಮವೃಕ್ಷರಾಜಿ, ಹಕ್ಕಿಗಳ ಇಂಚರ, ಹಸಿರು.ಇವೆಲ್ಲವೂ ಇಂದಿರ ಅವರ ಕಾದಂಬರಿಗಳಲ್ಲಿ ರಾರಾಜಿಸಿರುತ್ತವೆ. ಅವರ ಮೊಟ್ಟಮೊದಲ ಕಾದಂಬರಿ "ತುಂಗಭದ್ರ"."ತುಂಗಭದ್ರೆ"ಯನ್ನು ಮೆಚ್ಚಿಕೊಂಡು ಕೀರ್ತಿನಾಥ ಕುರ್ತಕೋಟಿಯವರು ಒಂದು ಧೀರ್ಘವಾದ ಮುನ್ನುಡಿ ಬರೆದರು.ಈ ಕಾದಂಬರಿ ವಿಶ್ವವಿದ್ಯಾನಿಲಯದ ಪದವಿ ...

READ MORE

Related Books