ಗೌತಮ ಬುದ್ದ

Author : ಸು. ರುದ್ರಮೂರ್ತಿ ಶಾಸ್ತ್ರಿ

Pages 528

₹ 395.00




Year of Publication: 2017
Published by: ಅಂಕಿತ ಪುಸ್ತಕ
Address: 53, ಗಾಂಧಿ ಬಜಾರ್‍ ಮುಖ್ಯರಸ್ತೆ, ಬಸವನಗುಡಿ , ಬೆಂಗಳೂರು -560004
Phone: 08026617100/ 26617755

Synopsys

ಲೇಖಕರಾದ ಸು. ರುದ್ರಮೂರ್ತಿ ಶಾಸ್ತ್ರಿ ಅವರ ಕಾದಂಬರಿ ’ಗೌತಮ ಬುದ್ದ’. ಲೇಖಕರ ಬದುಕಿನ ಅತ್ಯಂತ ತಳಮಳದ, ಅಶಾಂತಿಯ ದುರ್ಭರ ಸಂದರ್ಭದಲ್ಲಿ ಶಾಂತಿದೂತ ಬುದ್ದನನ್ನು ಕುರಿತು ಈ ಕೃತಿಯನ್ನು ರಚಿಸಿದ್ದಾರೆ.

ತಮ್ಮ ವೈಯಕ್ತಿಕ ಸಂಕಟದ ತೀವ್ರತೆಯನ್ನು ಬುದ್ದ ಬಹಳಷ್ಟು ಕಡಿಮೆ ಮಾಡಿದುದರ ಬಗ್ಗೆ ಈ ಕೃತಿಯಲ್ಲಿ ವಿವರಿಸುತ್ತಾರೆ. ಗೌತಮ ಬುದ್ದ ಇಡೀ ವಿ‌ಶ್ವದಲ್ಲಿ ಮನೆಮಾತಾದ ಮಹಾ ಸುಧಾರಕ, ಮತ್ತು ಮಾನವತಾವಾದಿ. ದೇವರು, ಪುರಾಣ, ಇತ್ಯಾದಿಗಳ ಗೊಡವೆಯಿಲ್ಲದೆ, ಶುದ್ದವಾದ ನಡವಳಿಕೆಯನ್ನು ಆಧರಿಸಿರುವ ಬುದ್ದನ ಧರ್ಮವನ್ನು ಕುರಿತಾದ ಪ್ರಸ್ತಾಪ ಈ ಕೃತಿಯಲ್ಲಿ ಮಾಡಲಾಗಿದೆ. ನೈತಿಕ ಜೀವನದ ಪರಿಶುದ್ದತೆ, ಅತಿಯಿಲ್ಲದ ಸರಳ ಜೀವನ, ಸ್ವಾರ್ಥ ರಹಿತ ಬದುಕು, ಅಹಂಕಾರಗಳಿಲ್ಲದ ಸಂತೃಪ್ತಿ ಬುದ್ದನ ಉಪದೇಶಗಳ ಸಾರವೆಂದು ತಿಳಿಸಿಕೊಡುವ ಕೃತಿ ಇದಾಗಿದೆ.

ಪೌರಾಣಿಕ ಪರಿವೇಷವನ್ನು ಕಳಚಿ ಸಾಧ್ಯವಾದಷ್ಟು ವಾಸ್ತವತೆಗೆ ಹತ್ತಿರವಾಗಿ ಬುದ್ದನ ಕತೆಯನ್ನು ಈ ಕಾದಂಬರಿ ಬಿತ್ತರಿಸುತ್ತದೆ. ಆತನ ಜನನ, ಬಾಲ್ಯ, ನಂತರದ ಘಟ್ಟಗಳು, ತಂದೆ-ತಾಯಿ, ಸೋದರರು, ಮಿತ್ರರು, ಅವನು ಎದುರಿಸಿದ ಸಂದರ್ಭಗಳು ಅವುಗಳೆಲ್ಲ ಅವನ ವ್ಯಕ್ತಿತ್ವದ ಮೇಲೆ ಬೀರಿದ ಪರಿಣಾಮಗಳು. ಇವೆಲ್ಲವನ್ನೂ ಸಹಜ ರೀತಿಯಲ್ಲಿ ಈ ಕೃತಿ ನಿರೂಪಿಸಿದೆ.

About the Author

ಸು. ರುದ್ರಮೂರ್ತಿ ಶಾಸ್ತ್ರಿ
(11 November 1948)

ಲೇಖಕ ರುದ್ರಮೂರ್ತಿ ಶಾಸ್ತ್ರಿ ಅವರು ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸುಗ್ಗನಹಳ್ಳಿಯವರು. ತಂದೆ-ಎಸ್.ಎನ್. ಶಿವರುದ್ರಯ್ಯ, ತಾಯಿ- ಸಿದ್ಧಗಂಗಮ್ಮ. ಪ್ರಾರಂಭಿಕ ಶಿಕ್ಷಣ ಹುಟ್ಟೂರಿನಲ್ಲಿ , ಪ್ರೌಢಶಾಲೆಯನ್ನು ರಾಮನಗರದಲ್ಲಿ ಪೂರ್ಣಗೊಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವೀಧರರು. ಬೆಂಗಳೂರಿನ ರೇಣುಕಾಚಾರ್ಯ ಸಂಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ನಂತರ ವೃತ್ತಿಗೆ ರಾಜೀನಾಮೆ ನೀಡಿ ಸಾಹಿತ್ಯ ಸೇವೆಯಲ್ಲಿ ತೋಡಗಿ, ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ‘ಭಾವ ಲಹರಿ’, ಪರಿ, ಅಂತರಂಗ-ಬಹಿರಂಗ, ಚಿತ್ರಕಲ್ಪನೆ, ರಾಗ, ನಾಡಗೀತೆಗಳು, ನಾದರೂಪಕ ಕವನ ಸಂಕಲನಗಳು. ಪ್ರಾಸ-ಪ್ರಯಾಸ, ಕೆಂಪಭಾರತಂ, ಕೆಂಪರಾಮಾಯಣಂ, ಕೆಂಪನ ವಚನಗಳು, ಅಲ್ಪಜ್ಞನ ವಚನಗಳು ಮುಂತಾದ ಹಾಸ್ಯ ಸಂಕಲನಗಳು ಸೇರಿ ಸುಮಾರು ...

READ MORE

Related Books