ಬೀಸಿ ಬಂತು ತಂಗಾಳಿ

Author : ವೇದಾಮಂಜುನಾಥನ್ ಬೆಳಗೆರೆ

₹ 65.00
Published by: ಹೇಮಂತ ಸಾಹಿತ್ಯ
Phone: 9741092721

Synopsys

ವೇದಾಮಂಜುನಾಥನ್ ಅವರ ಪ್ರಥಮ ಪ್ರಕಟಿತ ಕಾದಂಬರಿ ‘ಬೀಸಿ ಬಂತು ತಂಗಾಳಿ’. ಈ ಕಾದಂಬರಿಯು ಹದಿನೈದು ವರ್ಷಗಳ ಹಿಂದೆ ಪ್ರಥಮ ಮುದ್ರಣವನ್ನು ಕಂಡಿತ್ತು. ಹಂಸರಾಗ ಮಾಸಪತ್ರಿಕೆಯ ಸಂಪಾದಕರಾದ ಶ್ರೀಯುತ.ಕೆ.ಶ್ರೀನಿವಾಸನ್ ರವರು ತಮ್ಮ ಮಾಸಪತ್ರಿಕೆಯಲ್ಲಿ ಈ ಕಾದಂಬರಿಯನ್ನು ಪ್ರಕಟಿಸಿದ್ದರು. ಬೀಸಿ ಬಂತು ತಂಗಾಳಿ ಕಾದಂಬರಿಯಲ್ಲಿ ಮೂರು ಜನ ವಿಭಿನ್ನ ವ್ಯಕ್ತಿತ್ವಗಳುಳ್ಳ ಹೆಣ್ಣುಮಕ್ಕಳ ಚಿತ್ರಣವಿದೆ. ಸಂಹಿತಾ ಅಪ್ಪಟ ಸಂಪ್ರದಾಯವಾದಿ. ತಂದೆ ತಾಯಿ ನೋಡಿದ ವರನನ್ನು ವಿವಾಹವಾಗುತ್ತಾಳೆ. ಸುಖ ಸಂಸಾರ ತನ್ನದಾಯಿತು ಎಂದುಕೊಳ್ಳುವಾಗ, ಮಕ್ಕಳಾಗದ ಸಮಸ್ಯೆ ಆ ದಂಪತಿಗಳನ್ನು ಬಾಧಿಸುತ್ತದೆ. ಇನ್ನು ಸಂಹಿತಾಳ ತಂಗಿ ಸ್ಮೃತಿ ವೈದ್ಯಕೀಯ ಶಿಕ್ಷಣ ಪಡೆಯುತ್ತಾಳೆ. ಅಕ್ಕನ ವ್ಯಕ್ತಿತ್ವಕ್ಕೆ ವಿರುದ್ಧವಾದವಳು. ಸಂಹಿತಾಳ ಮಕ್ಕಳಿಲ್ಲದ ಸಮಸ್ಯೆಗೆ ಪರಿಹಾರ ಮಾರ್ಗ ಸೂಚಿಸುತ್ತಾಳೆ. ಚಂದನಾ ಸಂಹಾತಾಳ ಆತ್ಮೀಯ ಗೆಳತಿ. ಬಡತನದ ನಡುವೆಯೂ ವಕೀಲ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾಳೆ. ಆದರೆ ಇವಳ ತಮ್ಮ ಒಬ್ಬ ಕ್ರಿಮಿನಲ್ ಆದದ್ದು ಅವಳಿಗೆ ಘಾಸಿಯನ್ನು ಉಂಟು ಮಾಡುತ್ತದೆ. ಮೂರೂ ಜನ ಅದೊಂದು ಸಂಜೆ ತಮ್ಮ ತಮ್ಮ ಮುಂದಿನ ನಿರ್ಧಾರಗಳ ಕುರಿತು ಪರಸ್ಪರ ಹಂಚಿಕೊಳ್ಳುತ್ತಾರೆ. ಒಬ್ಬರ ನಿರ್ಧಾರ ಮತ್ತೊಬ್ಬರಿಗೆ ಸರಿ ಎನಿಸುತ್ತದೆ. ಭವಿಷ್ಯದಲ್ಲಿ ಅವರು ಕೈಗೊಂಡ ಆ ನಿರ್ಧಾರಗಳಿಂದ ಕಾದಂಬರಿ ಮುಕ್ತಾಯವಾಗುತ್ತದೆ.

About the Author

ವೇದಾಮಂಜುನಾಥನ್ ಬೆಳಗೆರೆ

ಬೆಳಗೆರೆಯಂತಹ ಸಾಹಿತ್ಯ ವಾತಾವರಣದಿಂದ ಬಂದ ವೇದಾರವರು, ಬಾಲ್ಯದಿಂದಲೇ ಬರವಣಿಗೆಯನ್ನು ರೂಢಿಸಿಕೊಂಡವರು. ಪದವಿ ವ್ಯಾಸಂಗದಲ್ಲಿ ಕನ್ನಡ ಐಚ್ಛಿಕ ವಿಷಯವಾಗಿ ತೆಗೆದುಕೊಂಡಿರುತ್ತಾರೆ. ಇದಲ್ಲದೆ, ಕನ್ನಡ ಸಾಹಿತ್ಯ ಪರಿಷತ್ತಿನವರು ನಡೆಸುವ ಕನ್ನಡ ಜಾಣ ಹಾಗು ರತ್ನ ಪರೀಕ್ಷೆಗಳಲ್ಲಿ ಕರ್ನಾಟಕ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಗಳಿಸಿರುತ್ತಾರೆ.  ಕತೆ, ಕವನ ಕಾದಂಬರಿ, ಲೇಖನ, ಹಾಸ್ಯ ಬರೆಯುವ ವೇದಾರವರು ಇದುವರೆಗೂ 30 ಕೃತಿಗಳನ್ನು ರಚಿಸಿದ್ದಾರೆ. ಇವರ ಬರವಣಿಗೆಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.  ಇದಲ್ಲದೆ ವೇದಾರವರು ಟಿವಿ ಧಾರಾವಾಹಿ ಹಾಗು ಕಿರುಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಬರೆದಿರುತ್ತಾರೆ. ಇವರ ಕಥೆಗಳು ಆಕಾಶವಾಣಿಯಲ್ಲಿಯೂ ಬಿತ್ತರಗೊಂಡಿವೆ. ವೇದಾಮಂಜುನಾಥನ್ ರವರ ಮಕ್ಕಳ ...

READ MORE

Related Books