ಗಮ್ಯ

Author : ಬಿ. ಜನಾರ್ದನ ಭಟ್

Pages 232

₹ 250.00
Year of Publication: 2022
Published by: ಅಂಕಿತ ಪುಸ್ತಕ
Address: ಗಾಂಧಿ ಬಜಾರ್‌ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು 560004

Synopsys

ಕನ್ನಡಕ್ಕೆ ವಿಶಿಷ್ಟ ಕಾದಂಬರಿಗಳನ್ನು ನೀಡುತ್ತಿರುವ ಡಾ. ಬಿ. ಜನಾರ್ದನ ಭಟ್ ಅವರ ಏಳನೆಯ ಕಾದಂಬರಿ 'ಗಮ್ಯ’. ಮನುಷ್ಯ ಸಹಜವಾದ ಜೀವನ ಪ್ರೀತಿಯನ್ನು ನೀಡುವ ಸುಂದರ ಕಾದಂಬರಿಯಿದು, ಮಲಯಾಳಂ, ಕನ್ನಡ ಮತ್ತು ತುಳು ಈ ಮೂರೂ ಸಂಸ್ಕೃತಿಯ ವಿವಿಧ ಆಯಾಮಗಳನ್ನು ಹೊಂದಿದ ಪಾತ್ರಗಳು ಓದುಗರನ್ನು ಆಕರ್ಷಿಸುತ್ತವೆ. ಹಳ್ಳಿಯಲ್ಲಿ ಅಧ್ಯಾಪಕನಾಗಿರುವ ರಾಜೇಶ್‌ನಂತಹ ಪ್ರತಿಭಾವಂತ ಸುಂದರ ತರುಣ, ರಾಗಿಣಿಯಂತಹ ಆಧುನಿಕ ಬದುಕನ್ನು ಇಷ್ಟಪಟ್ಟ ಯುವತಿ, ಸಾಂಪ್ರದಾಯಿಕ ಚೌಕಟ್ಟಿನ ನಡುವೆ ಇದ್ದುಕೊಂಡೂ ಕಥೆಗೊಂದು ಸುಂದರ ಅಂತ್ಯವನ್ನು ನೀಡುವ ಕಲ್ಯಾಣಿ – ಈ ಮೂರು ಪ್ರಧಾನ ಪಾತ್ರಗಳು ಕಾದಂಬರಿಯನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಕಾಲಕ್ಕೆ ಸಂದುಹೋಗುವ ಸಮಾಜವನ್ನು ಹೊಸದಾಗಿಸಿಕೊಳ್ಳುತ್ತಾ ಹೋಗುತ್ತವೆ. ದಿನನಿತ್ಯದ ಬದುಕು, ಜಿಜ್ಞಾಸೆಯಲ್ಲಿ ಆಧುನಿಕತೆಯ ಸ್ವರೂಪ ತೆರೆದುಕೊಳ್ಳುತ್ತಾ ಹೋಗುತ್ತದೆ. ವರ್ತಮಾನದಿಂದ ಆಚೆಗೆ ನೋಡುವ ಮನುಷ್ಯ ಸಹಜವಾದ ಪ್ರೀತಿ ಮತ್ತು ದೌರ್ಬಲ್ಯ ಎರಡನ್ನೂ ಇಲ್ಲಿ ಕಾಣಬಹುದಾಗಿದೆ.

About the Author

ಬಿ. ಜನಾರ್ದನ ಭಟ್

ಸಾಹಿತಿ ಡಾ. ಬಿ.ಜನಾರ್ದನ ಭಟ್ ಅವರದು ಬಹುಮುಖ ಪ್ರತಿಭೆ. ಅವರು ಕಾದಂಬರಿಕಾರರಾಗಿ, ಕಥೆಗಾರರಾಗಿ, ವಿಮರ್ಶಕರಾಗಿ, ಅಂಕಣಕಾರರಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರ ಸಾಹಿತ್ಯಾನುಸಂಧಾನ ಬಹುಸೂಕ್ಷ್ಮವಾದುದು. ಬಹುಭಾಷಿಕ, ಬಹುಶ್ರುತ ವಿದ್ವಾಂಸರೂ ಸೃಜನಶೀಲ ಲೇಖಕರೂ ಆಗಿರುವ ಭಟ್ ಅವರದು ಸ್ಪೋಪಜ್ಞತೆಯ ಹಾದಿ. ತಮ್ಮ ಕೃತಿಗಳಲ್ಲಿ ಹೆಚ್ಚಿನ ಸ್ವಂತಿಕೆಯ ಛಾಪನ್ನು ಒತ್ತುತ್ತಾ ಬಂದಿರುವ ಡಾ. ಜನಾರ್ದನ ಭಟ್ ಅವರು ಸಮಕಾಲೀನ ಕನ್ನಡದ ಹೆಸರಾಂತ ಲೇಖಕರಲ್ಲಿ ಒಬ್ಬರು. ಭಟ್ ಅವರ ಹೆಚ್ಚಿನ ಕೃತಿಗಳು ಆಳ ಮತ್ತು ಸಂಕೀರ್ಣತೆಯನ್ನು ಹೊಂದಿರುವುದು ವಿಶೇಷ. ವಿದ್ವತ್ತು ಮತ್ತು ಸೃಜನಶೀಲತೆ ಎರಡನ್ನೂ ಮೈಗೂಡಿಸಿಕೊಂಡಿರುವ ಬೆಳ್ಮಣ ನ ಡಾ. ಬಿ.ಜನಾರ್ದನ ...

READ MORE

Related Books