ಮೌನಗರ್ಭ

Author : ಸಂಧ್ಯಾ ಶರ್ಮ ವೈ.ಕೆ

Pages 172

₹ 100.00
Year of Publication: 2011
Published by: ಅಭಿನವ ಪ್ರಕಾಶನ
Address: ನಂ. 365,11ನೇ ಅಡ್ಡರಸ್ತೆ, 2ನೇ ಬ್ಲಾಕ್, ಜಯನಗರ, ಬೆಂಗಳೂರು - 560 011
Phone: 9448094949

Synopsys

ಸಂಧ್ಯಾ ಶರ್ಮ ವೈ.ಕೆ ಅವರ ಕಾದಂಬರಿ ಮೌನಗರ್ಭ. ಸಾತ್ವಿಕ ಸ್ವಭಾವದ ಕೃಷ್ಣಾ, ಬಡತನದ ಪರಿಸರದಿಂದ ಚಿಕ್ಕಪ್ಪ ವ್ಯಾಸಾಚಾರರಿಗೆ ದತ್ತಕವಾಗಿ ಬಂದವನು, ಊರಿನ ಸುಧಾರಣೆಗಾಗಿ ಆದರ್ಶ ಹೊತ್ತು ಶ್ರಮಿಸುತ್ತಾನೆ. ಆದರೆ ಅಲ್ಲಿನ ದುಷ್ಟಶಕ್ತಿಗಳನ್ನು ಎದುರಿಸಲಾರದೆ ಆಘಾತಗೊಳ್ಳುತ್ತಾನೆ. ನಡೆದ ಅನೇಕ ಅನೂಹ್ಯ ಘಟನೆಗಳಿಂದ ಬೆಳವಣಿಗೆಗಳಿಂದ ಅಂತರ್ಮುಖಿಯಾಗಿ ಮೌನಗರ್ಭ ಸೇರುವನು. ಶತ್ರುಗಳನ್ನೂ ದ್ವೇಷಿಸದಂಥ ಅವನ ಅತ್ಯಂತ ಮೃದುಗುಣವೇ ಅವನಿಗೆ ಸಮಸ್ಯೆಯನ್ನುಂಟು ಮಾಡುತ್ತದೆ. ಇಂಥ ಪರಿಸ್ಥಿತಿಯಲ್ಲೂ ಅವನು ತೋರುವ ಔದಾರ-ಕ್ಷಮಾಗುಣಗಳಿಂದ ಅವನ ಪಾತ್ರ ಔನ್ನತ್ಯಕ್ಕೇರುತ್ತದೆ. ಬಹಳ ವರ್ಷಗಳ ಹಿಂದಿನ ನಿಜ ಜೀವನದ ಕಥಾನಕವಿದು.

About the Author

ಸಂಧ್ಯಾ ಶರ್ಮ ವೈ.ಕೆ
(01 June 1955)

ಕಳೆದ 52 ವರ್ಷಗಳಿಂದ ಕನ್ನಡ ಸಾರಸ್ವತಲೋಕದಲ್ಲಿ ಜನಪ್ರಿಯ ಲೇಖಕಿಯಾಗಿ  ಖ್ಯಾತಿ ಪಡೆದಿರುವ ವೈ.ಕೆ.ಸಂಧ್ಯಾ ಶರ್ಮ ಅವರು ವೈ.ಕೆ. ಕೇಶವಮೂರ್ತಿ ಮತ್ತು ವೈ.ಕೆ. ಅಂಬಾಬಾಯಿಯವರ ಪುತ್ರಿಯಾಗಿ ಬೆಂಗಳೂರಿನಲ್ಲಿ ಜನಿಸಿದರು. ಪ್ರೌಢಶಾಲೆಯಲ್ಲಿದ್ದಾಗಲೇ ಬರವಣಿಗೆ ಆರಂಭಿಸಿದ ಇವರು, ಬೆಂಗಳೂರಿನ ಕರ್ನಾಟಕ ವಾರ್ತಾ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಫ್ರೀಲಾನ್ಸ್ ಜರ್ನಲಿಸ್ಟ್ ಆಗಿ ವಿವಿಧ ಪತ್ರಿಕೆಗಳಲ್ಲಿ ನೃತ್ಯ-ನಾಟಕಗಳ ಕಲಾ ವಿಮರ್ಶಕಿಯಾಗಿ, ಅಂಕಣ ಬರಹಗಾರ್ತಿಯಾಗಿ ಕಾರ್ಯನಿರತರಾಗಿದ್ದಾರೆ. ಪ್ರಜಾಮತ ವಾರಪತ್ರಿಕೆ (1975-76) , ಪ್ರಜಾಪ್ರಭುತ್ವ  ವಾರಪತ್ರಿಕೆಗಳಲ್ಲಿ (1977-1980) ಮತ್ತು ಇಂಚರ (1980-82) ಮಾಸಪತ್ರಿಕೆಯಲ್ಲಿ ಸಹಾಯಕ ಸಂಪಾದಕಿಯಾಗಿ ಸೇವೆ ಸಲ್ಲಿಸಿರುವ ಅನುಭವ ಇವರಿಗಿದೆ. ಪ್ರಸ್ತುತ ಅಂತರ್ಜಾಲದ ‘’ ...

READ MORE

Related Books