ಪ್ರೇಮಪಾಶ-ಈ ಕೃತಿ ಕುರಿತು ಹಾರೈಸಿದ ರಾಜಶೇಖರಾನಂದ ಸ್ವಾಮೀಜಿ ಅವರು”‘ಲವ್ ಜಿಹಾದ್’ ಇದರ ಮೂರ್ತರೂಪ - ’ಪ್ರೇಮ ಪಾಶ’, ಪ್ರೀತಿ ಎನ್ನುವುದು ನಾಟಕವಲ್ಲ. ಅದೊಂದು ಹೃದಯದ ಭಾಷೆ. ಅಂತರಂಗದ ಸವಿನುಡಿ. ಅದು ಯಾಕೆ ಪಾಶವಾಗುತ್ತದೆ. ‘ಪಾಶ’ ಎಂದರೆ ‘ಉರುಳು’, ಪ್ರೀತಿ ಯಾಕೆ ಉರುಳಾಗುತ್ತಿದೆ ಎಂದರೆ ಲವ್ ಜಿಹಾದ್‌ನ ಉರುಳಿಗೆ ಕೊರಳೊಡ್ಡುವ ಹುಡುಗಿಯರ ಆರ್ತನಾದದ ನೈಜ ಚಿತ್ರಣದ ಹೂರಣ ಈ ಪುಸ್ತಕ, ಸಮಾಜದಲ್ಲಿ ಹುಡುಗಿ ಎಂದರೆ ಅದು ಸಂಪತ್ತು ಎಂಬ ಭಾವನೆ ಇದೆ. ಯಾಕೆಂದರೆ ಈ ದೇಶವನ್ನು ಕಾಣುವುದು ತಾಯಿಯ ರೂಪದಲ್ಲಿ, ನಮ್ಮ ಸಂಸ್ಕೃತಿ ಮಿಳಿತವಾಗಿರುವುದು ಮಾತೃರೂಪದಲ್ಲಿ. “ಮಾತೃವತ್ ಪರದಾರೇಷ* ತಾಯಿಯನ್ನು ಅಥವಾ ಹೆಣ್ಣನ್ನು ಯಾವತ್ತು ಕೆಟ್ಟ ಚಿಂತನೆಯಿಂದ ನೋಡ ಬಾರದೆನ್ನುತ್ತದೆ ಶಾಸ್ತ್ರ, ಮುಂದುವರಿದು ಹೆಣ್ಣು ಎಂದೆಂದಿಗೂ ಸಂಸಾರದ ಕಣ್ಣು ಎನ್ನುತ್ತದೆ. ಅಂತಹ ಹೆಣ್ಣನ್ನು ಪ್ರೇಮ ಪ್ರೀತಿಯ ನಾಟಕದ ಬಲೆಯಲ್ಲಿ ಹೆಣೆದು ಅನಾಥೆಯಾಗಿಸುವ ಒಂದು ರಾಕ್ಷಸೀ ಪ್ರವೃತ್ತಿಯೆ ’ಲವ್ ಜಿಹಾದ್’-ಕಾದಂಬರಿಯ ತಿರುಳು” ಎಂದು ಶ್ಲಾಘಿಸಿದ್ದಾರೆ.
ಚೈತ್ರಾ ಕುಂದಾಪುರ ಅವರು ಮೂಲತಃ ಕುಂದಾಪುರದವರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಧರೆ. ರಾಷ್ಟ್ರೀಯ ಹಿಂದೂಪರ ಚಿಂತನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಅಖಿಲ ಭಾರತಿಯ ವಿದ್ಯಾರ್ಥಿ ಪರಿಷತ್‌ನಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ, ಕೇಂದ್ರೀಯ ಕಾರ್ಯ ಸಮಿತಿ ಸದಸ್ಯರಾಗಿ ಜವಾಬ್ದಾರಿ ನಿರ್ವಹಿಸುತ್ತಾ ಹಲವು ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಉದಯವಾಣಿ ಪತ್ರಿಕೆಯಲ್ಲಿ ಉಪಸಂಪಾದಕರಾಗಿ, ಸ್ಪಂದನ ಸುದ್ದಿ ವಾಹಿನಿಯಲ್ಲಿ, ಉಡುಪಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಜ್ಜರ ಕಾಡಿನಲ್ಲಿ ಪತ್ರಿಕೋದ್ಯಮ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ‘ಯುವ ಮಾಧ್ಯಮ ರತ್ನ ಪ್ರಶಸ್ತಿ’ಗೆ ಭಾಜನರಾಗಿರುವ ಅವರು ತಮ್ಮ ವಾಕ್ಚತುರ್ಯದಿಂದ ಕರ್ನಾಟಕದಲ್ಲಿ ಮನೆಮಾತಾಗಿದ್ದಾರೆ. ‘ಪ್ರೇಮ ಪಾಶ’ ಅವರ ಚೊಚ್ಚಲ ...
READ MORE