ಕಾಲಕೋಶ

Author : ಶಶಿಧರ ಹಾಲಾಡಿ

Pages 160

₹ 160.00
Year of Publication: 2021
Published by: ಅಂಕಿತ ಪ್ರಕಾಶನ
Address: #53 ಶಾಮಸಿಂಗ್ ಸಂಕೀರ್ಣ, ಗಾಂಧಿಬಜಾರ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560004
Phone: 0802661 7100

Synopsis

ಲೇಖಕ ಶಶಿಧರ ಹಾಲಾಡಿ ಅವರ ಕಾದಂಬರಿ-ಕಾಲಕೋಶ. ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರು ಕೃತಿಗೆ ಬರೆದ ಬೆನ್ನುಡಿಯಲ್ಲಿ ‘ಕೆಲವು ಕಾದಂಬರಿಗಳನ್ನು ಓದಿದ ಒಂದೆರಡು ದಿನಗಳ ತನಕ ಅದರ ಕಥೆಯು ರಿಂಗಣ ಗುಡುತ್ತಿರುತ್ತದೆ. ಈ ಕಾದಂಬರಿಯನ್ನು ಓದಿದಾದ ನನಗೂ ಹಾಗೆನಿಸಿತು. ದೆಹಲಿಯಲ್ಲಿ 1984ರ ಗಲಭೆ, 1947-48ರ ಸಮಯದಲ್ಲಿ ದೇಶ ವಿಭಜನೆಯ ದಳ್ಳುರಿಯಲ್ಲಿ ನಡೆದ ಹತ್ಯಾಕಾಂಡ, 1948ರಲ್ಲಿ ಮಹಾತ್ಮಗಾಂಧಿಯವರ ಕೊಲೆಯಾದಾಗ ಮುಂಬೈಯಲ್ಲಿ ನಡೆದ ಜನಾಂಗೀಯ ಗಲಭೆ ಮೊದಲಾದ ವಿವರಗಳನ್ನು ಇಲ್ಲಿಯ ಕಥೆಗಳಲ್ಲಿ ತರಲು ನಡೆಸಿದ ಪ್ರಯತ್ನ ಮೆಚ್ಚುಗೆಯಾಯಿತು. ನಮ್ಮ ದೇಶದ ಒಟ್ಟೂ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಹಣಿಕಿ ಹಾಕಿದ ಈ ರೀತಿಯ ಹತ್ಯಾಕಾಂಡಕ್ಕೆ ಕಾರಣ ಎನಿಸಿದವರು ಭಾರತದ ನಾಗರಿಕರು ಎಂಬ ಸತ್ಯವನ್ನು ಈ ಕಾದಂಬರಿ ಹೇಳಲು ಪ್ರಯತ್ನಿಸುತ್ತಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

About the Author

ಶಶಿಧರ ಹಾಲಾಡಿ

ಶಶಿಧರ ಹಾಲಾಡಿ ಅವರು ಲೇಖಕರು. ವಿಶ್ವವಾಣಿ ಪತ್ರಿಕೆಯ ಪುರವಣಿ ವಿಭಾಗದ ಮುಖ್ಯ ಉಪಸಂಪಾದಕರು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯವರು. ಮೈಸೂರು ವಿ.ವಿ.ಯಿಂದ ಎಂ.ಎ. (ಕನ್ನಡ)  ಚಿನ್ನದ ಪದಕದೊಂದಿಗೆ ಮೊದಲ ರ‍್ಯಾಂಕ್‍ ಪಡೆದಿದ್ದು, ಸಣ್ಣ ಕಥೆ, ಪ್ರವಾಸ ಕಥನ, ಕವನ, ನುಡಿಚಿತ್ರ, ಅಂಕಣ ಬರಹ ಮತ್ತು ಲೇಖನಗಳನ್ನು ಬರೆದಿದ್ದಾರೆ. ಶಿವಮೊಗ್ಗದ ನಾವಿಕ ದಿನಪತ್ರಿಕೆಯಲ್ಲಿ 12 ವರ್ಷ ಕಾಲ ಅಂಕಣಕಾರರು.  ಪರಿಸರ , ಪಕ್ಷಿವೀಕ್ಷಣೆ, ಚಾರಣ (ಹಿಮಾಲಯದಲ್ಲಿ ಚಾರಣ ನಡೆಸಿದ ಅನುಭವ ಛಾಯಾಗ್ರಹಣ (ರಾಜ್ಯ ಮಟ್ಟದ ಲ್ಯಾಂಡ್‍ಸ್ಕೇಪ್ ಛಾಯಾಚಿತ್ರ ಸ್ಪರ್ಧೆಯಲ್ಲಿ ಮೂರನೆಯ ಬಹುಮಾನ), ಅಂಕಣ ಬರಹ, ಸಣ್ಣ ಕಥೆ ರಚನೆ ಇವರ ಆಸಕ್ತಿಯ ಕ್ಷೇತ್ರಗಳು. ಕೃತಿಗಳು: ನ್ಯಾಯಾಶಾಸ್ತ್ರಜ್ಞ ಸರ್ ಬೆನಗಲ್ ನರಸಿಂಗ ರಾವ್ ಕುರಿತು ಜೀವನ ...

READ MORE

Related Books