ಶಿವರಾತ್ರಿ ಬೆಟ್ಟ

Author : ಗೀತಾ ಡಿ. ಎನ್.

Pages 168

₹ 190.00
Year of Publication: 2022
Published by: ಶ್ರಿ ವಿಜಯನಾಗ ಎಂಟರ್ ಪ್ರೈಸಸ್ಸ್
Address: #5,1,3ನೇ ಕ್ರಾಸ್, 1 `ಬಿ’ ಮೈನ್ ಗೌಡನಾಪಾಳ್ಯ, ಸುಬ್ರಹ್ಮಣ್ಯಪುರ ರೋಡ್, ಬೆಂಗಳೂರು

Synopsys

‘ಶಿವರಾತ್ರಿ ಬೆಟ್ಟ’ ಶೀರ್ಷಿಕೆಯೇ ಭಿನ್ನವಾಗಿದೆ. ಡಿ.ಎನ್. ಗೀತಾ ಅವರ ಈ ಕೃತಿಯು ಮಲೆನಾಡಿನ ಬೆಟ್ಟಗಳಲ್ಲಿ ನಡೆಯುವ ಕುತೂಹಲ ವಿಚಾರಗಳನ್ನು ಕಟ್ಟಿಕೊಡುತ್ತದೆ. ಮಲೆನಾಡಿನ ಮಡಿಲಲ್ಲಿರುವ ಬೆಟ್ಟದಲ್ಲಿ ಆಗುವ ವಿಪತ್ತುಗಳು ಹತ್ತು ಹಲವು ಎಂದು ಇಲ್ಲಿ ಲೇಖಕರು ತಿಳಿಸಿದ್ದಾರೆ. ಕೆಲವು ಅರ್ಚಕರ ಆತ್ಮಹತ್ಯೆ, ಬೆಟ್ಟದಲ್ಲಿನ ಆಸ್ಟೋಟ, ಪುಟ್ಟಮಕ್ಕಳ ಸರಣಿ ಕೊಲೆ, ಶ್ವೇತ ನಾಗಗಳ ಹರಿದಾಟ, ಹರಕೆ ಬನಕ್ಕೆ ಹೋದವರ ನಾಪತ್ತೆ ಪ್ರಕರಣಗಳು. ಹೀಗೆ ಹಲವಾರು ವಿಚಾರಗಳನ್ನು ಕಟ್ಟಿಕೊಡಲಾಗಿದೆ. ಇನ್ನು ಪತ್ತೇದಾರಿ ಸಾಹಿತ್ಯ ಬಹಳಷ್ಟು ಅಂಶಗಳನ್ನು ಬೇಡುತ್ತದೆ ಎನ್ನುವುದನ್ನು ತಿಳಿಸುತ್ತದೆ. ಆರಂಭದ ಪುಟದಿಂದ ಹಿಡಿದು ಕೊನೆಯವರೆಗೂ ಹಿಡಿದಿಡಬೇಕಾದ ಕುತೂಹಲ, ರೋಚಕ ತಂತ್ರಗಳು, ಪುಟಪುಟಕ್ಕೂ ತಿರುವುಗಳು, ತಾರ್ಕಿಕತೆ, ಹೇಳಬೇಕಾದ ಅಂಶಗಳ ಬಗ್ಗೆ ಸ್ಪಷ್ಟತೆ ಮತ್ತು ಅದರ ಬಗ್ಗೆ ಅಧ್ಯಯನ, ಹೀಗೆ ಈ ಎಲ್ಲಾ ಅಂಶಗಳಿಂದ ಈ ಕಾದಂಬರಿಯು ವಿಶಿಷ್ಟವೆನ್ನಿಸಿದೆ.

About the Author

ಗೀತಾ ಡಿ. ಎನ್.
(07 January 1971)

ಕವಯತ್ರಿಯಾದ ಗೀತಾ ಡಿ.ಎನ್. ಅವರು ಓದಿದ್ದು ವಿಜ್ಞಾನವಾದರು ಸಾಹಿತ್ಯಾಸಕ್ತರು. 1971 ಜನವರಿ 07 ರಂದು ಬಿದರಗೋಡಿನ ಶೃಂಗೇರಿಯಲ್ಲಿ ಜನಿಸಿದ ಇವರ ಆಸಕ್ತಿಯನ್ನು ಕುಡಿಯೊಡೆದಿದ್ದು ಸಾಹಿತ್ಯದಲ್ಲಿ. 1995 ರಲ್ಲಿ ‘ನನ್ನೊಳಗಿನ ಕವಿತೆಗಳು’ ಕವನ ಸಂಕಲನವನ್ನು ಹೊರತಂದರು. ...

READ MORE

Related Books