ಮತ್ತೆ ಮಡಿಲಿಗೆ

Author : ಉಷಾ ನವರತ್ನರಾಂ

Pages 144

₹ 70.00




Year of Publication: 2018
Published by: ಇಂದಿರಾ ಪ್ರಕಾಶನ
Address: ನಂ.972-ಸಿ, 4ನೇ ಇ ಬ್ಲಾಕ್, ರಾಜಾಜಿನಗರ, ಬೆಂಗಳೂರು- 560010
Phone: 9448064619

Synopsys

‘ಮತ್ತೆ ಮಡಿಲಿಗೆ’ ಉಷಾನವರತ್ನರಾಂ ಅವರ ಕಾದಂಬರಿಯಾಗಿದೆ. ಬಹುಕಾಲ ನೆನಪಿನಲ್ಲಿ ಉಳಿದು ಬಿಡುವ, ಪದೇಪದೇ ಓದಬೇಕೆನಿಸುವ, ಅಂತಃಕರಣ ಕಲಕುವ, ವಿಶ್ವಾಂಬರದಷ್ಟೇ ವರ್ಣವೈವಿಧ್ಯತೆ, ಕಥೆ-ಕವನ; ಪಾತ್ರ ಚಿತ್ರಣ ಓರಣ ಸಾಮಾಜಿಕ-ಸಮಕಾಲೀನ ಇತಿವೃತ್ತ-ವಿಷಯ ಚಿಂತನ ಮಂಥನ, ಮಾನವ ಸಹಜ ತುಡಿತ ಸಂಬಂಧಗಳ ಒಳತೋಟಿ; ತಂಬೆಲರಿನ ತಂಪು; ಮೋಹನ ಮುರಳಿಯ ಮೋಹಕತೆ, ಪಯಸ್ವಿನಿಯ ಮಧುರ ನಿನಾದ, ಸ್ವಾದಿಸಿದಾಗ ಆಗುವ ಹರುಷ. ಉಷಾ ನವರತ್ನರಾಮ್ ಕಾದಂಬರಿಗಳನ್ನು ಓದಿದಾಗ ಓದುಗರಿಗಾಗುವ ಗಾಢ ಅನುಭವ, ಅನುರಕ್ತಿ, ಅನುಭೂತಿಗಳಿವು. ಎಂತಲೇ ಇವರ ಕಾದಂಬರಿಗಳು ಜನಪ್ರಿಯ-ಹಲವು ಆವೃತ್ತಿಗಳನ್ನು ಕಾಣುವುದಕ್ಕೆ ಕಾರಣ. ಹಲವು ಕಾದಂಬರಿಗಳು ಬೆಳ್ಳಿ ತೆರೆಯ ಮೇಲೆ ಪಡಿಮೂಡಿದ ಹೆಗ್ಗಳಿಕೆ ಇವರದು. ವಿಸ್ತೃತ ಅನುಭವ, ಪರಿಪಕ್ವ ಮನಸ್ಸಿನ ಸೃಜನಶೀಲ ಬರವಣಿಗೆ, ಸದಭಿರುಚಿಯ ಸಾಹಿತ್ಯ ಚಿಂತನೆ-ಜೀವನ ಸಾಧನೆ.

About the Author

ಉಷಾ ನವರತ್ನರಾಂ
(23 November 1939 - 10 October 2000)

ಲೇಖಕಿ ಉಷಾ ನವರತ್ನರಾಂ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ- ಎಂ.ವಿ. ಸುಬ್ಬರಾವ್. ತಾಯಿ- ಶಾಂತಾ. ಪ್ರಾರಂಭಿಕ ಶಿಕ್ಷಣವನ್ನು ಶಿವಮೊಗ್ಗದ ಮೇರಿ ಇಮ್ಯಾಕುಲೇಟ್ ಕಾನ್ವೆಂಟ್ ಹಾಗೂ ಬೆಂಗಳೂರಿನ ಮಹಿಳಾ ಸೇವಾ ಸಮಾಜದಲ್ಲಿ ಪೂರ್ಣಗೊಳಿಸಿದರು. ಆನಂತರ ಮೌಂಟ್ ಕಾರ್ಮಲ್ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯ ಹಾಗೂ ಇತಿಹಾಸದಲ್ಲಿ ಪದವಿ ಪಡೆದರು. ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪೂರೈಸಿದರು. ವಿದ್ಯಾರ್ಥಿನಿಯಾಗಿದ್ದಾಗಲೇ ಹಲವು ಲೇಖನಗಳನ್ನು ಪ್ರಕಟಿಸಿದರು. ಇಂಗ್ಲಿಷ್ ಮತ್ತು ಕನ್ನಡ ಪತ್ರಿಕೆಗಳ ಅಂಕಣಗಾರ್ತಿಯಾಗಿದ್ದು, ಗೆಳತಿ ಮತ್ತು ಉಷಾ ಪತ್ರಿಕೆಗಳ ಸಂಪಾದಕಿಯಾಗಿದ್ದರು. ಮಹಿಳಾ ಸೇವಾ ಸಮಾಜದಲ್ಲಿ ಅಧ್ಯಾಪಕಿಯಾಗಿ 27 ವರ್ಷ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದರು. ನಾಲ್ಕು ವರ್ಷ ರೀಜನಲ್ ಫಿಲಂ ಸೆನ್ಸಾರ್ ...

READ MORE

Related Books