ಕಾಂಚನಗೀತ

Author : ಇಂದಿರಾತನಯ (ವಿ.ಆರ್.ಶ್ಯಾಂ)

Pages 313
Year of Publication: 1952
Published by: ವಾಹಿನಿ ಪ್ರಕಾಶನ
Address: ಜಯಚಾಮರಾಜ ರಸ್ತೆ, ಬೆಂಗಳೂರು.

Synopsys

ಇಂದಿರಾತನಯ ಕಾವ್ಯನಾಮದಿಂದ ಬರೆದ ಲೇಖಕ ವಿ.ಆರ್. ಶ್ಯಾಂ ಅವರ ಕಾದಂಬರಿ-ಕಾಂಚನಗೀತ. ವರದಕ್ಷಿಣೆ ಎಂಬ ಅನಿಷ್ಟ ಪದ್ಧತಿ ವಿರೋಧಿಸಿರುವುದು ಈ ಕಾದಂಬರಿಯ ವಸ್ತು. ವರದಕ್ಷಿಣೆಯು ಸಮಾಜದಲ್ಲಿ ಹತ್ತು ಹಲವು ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಮಾತ್ರವಲ್ಲ; ಸಮಾಜವನ್ನು ಮತ್ತಷ್ಟು ಸಂಕುಚಿತಗೊಳಿಸುತ್ತದೆ. ಅದು ಅಮಾನವೀಯತೆಯಿಂದ ನಡೆದುಕೊಳ್ಳುವಂತೆ ಬಲವಂತ ಮಾಡುತ್ತದೆ. ವರದಕ್ಷಿಣೆಯು ನಾಗರಿಕ ಸಮಾಜಕ್ಕೆ ಅಂಟಿದ ಒಂದು ಕಳಂಕ. ಪ್ರಜ್ಞಾವಂತರು ಈ ಕಳಂಕವನ್ನು ನಿವಾರಿಸುವ ಅಗತ್ಯ ಹಾಗೂ ಅನಿವಾರ್ಯತೆ ಇದೆ ಎಂಬ ಸಂದೇಶ ಇಲ್ಲಿದೆ.

About the Author

ಇಂದಿರಾತನಯ (ವಿ.ಆರ್.ಶ್ಯಾಂ)

ತಮ್ಮ ಮಾಂತ್ರಿಕ ಬರಹದಿಂದ ಓದುಗ ಬಳಗವನ್ನು ಸೃಷ್ಟಿಸಿಕೊಂಡ ಲೇಖಕ ವಿ.ಆರ್.ಶ್ಯಾಂ. ಇಂದಿರಾತನಯ ಎಂಬ ಕಾವ್ಯನಾಮದಲ್ಲಿ ಕಾದಂಬರಿಗಳನ್ನು ಬರೆದ ಇವರು ಸುಮಾರು 50ಕ್ಕೂ ಹೆಚ್ಚು ಕಾದಂಬರಿ ಹಾಗೂ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ.ತಾಂತ್ರಿಕ ವಿಷಯದ ಬಗ್ಗೆ ಕುತೂಹಲಕಾರಿ ಕಾದಂಬರಿಗಳನ್ನು ರಚಿಸಿರುವ ಇಂದಿರಾತನಯ ತಮ್ಮ ಪ್ರಯೋಗಶೀಲತೆಯಿಂದ ಕನ್ನಡ ಕಥಾ ಸಾಹಿತ್ಯಕ್ಕೆ ಹೊಸ ಆಯಾಮ ಮೂಡಿಸಿದವರು. ಅವರ ಶಾಕ್ತ್ಯಪಂಥದ ಪ್ರಯೋಗಶೀಲ ಕೃತಿಗಳಾದ ‘ಮಂತ್ರಶಕ್ತಿ’, ಶಕ್ತಿಪೂಜೆ, ಸೇಡಿನಕಿಡಿ, ಹಾಗೂ ಪೂಜಾತಂತ್ರ ಅತ್ಯಂತ ಜನಪ್ರಿಯ ಕಾದಂಬರಿಗಳು. ಅವರ ‘ಚಕ್ರಾಯಣ’ ಸ್ವಾಮಿ ರಮಾನಂದರ ಹಿಮಾಲಯದ ತಪ್ಪಲಿನಲ್ಲಿ ಕೃತಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ...

READ MORE

Related Books