ಕಾಡು ಕರೆಯಿತು

Author : ಎ.ಪಿ. ಮಾಲತಿ

Pages 188

₹ 18.00




Year of Publication: 1987
Published by: ಗೀತಾ ಬುಕ್ ಹೌಸ್
Address: ಕೆ.ಆರ್.ವೃತ್ತ, ಮೈಸೂರು-570001

Synopsys

ಎ.ಪಿ.ಮಾಲತಿ ಅವರು ಬರೆದ ಕಾದಂಬರಿ- ಕಾಡು ಕರೆಯಿತು. ಕಥಾನಾಯಕ ಕರ್ತವ್ಯನಿಷ್ಠೆಯ ಹಾಗೂ ಸಮರ್ಪಣಾ ಭಾವದ ಮನುಷ್ಯ. ಕಾಡು ಹಾಳಾಗುವುದನ್ನು, ಕೆಡಕಿನತ್ತ ಸಮಾಜ ಬದಲಾಗುತ್ತಿರುವುದನ್ನೂ ನೋಡುತ್ತಾನೆ. ಆದರೆ, ಏನೂ ಮಾಡದ ಅಸಹಾಯಕತೆ. ಸ್ವಂತ ಮಗನು ಆಧುನಿಕತೆಯ ಮನೋಭಾವದವನು. ಕೆಟ್ಟದ್ದನ್ನೂ ಯೋಚಿಸದ ಕಥಾನಾಯಕ ತನ್ನ ಮಗನಿಗೂ ಏನೊಂದು ಹೇಳದ ಸ್ಥಿತಿ. ತಾನು ನಂಬಿದ ಹಳೆಯ ಮೌಲ್ಯಗಳಿಂದ ಯಾವ ಲಾಭವೂ ಇಲ್ಲದೇ, ಸುತ್ತಣ ಜನರಿಂದ ಅವಮಾನ ಅನುಭವಿಸುತ್ತಾ ಬದುಕು ಸವೆಸುವ ದಾರುಣ ಚಿತ್ರಣದ ವಸ್ತುವೇ ಕಾದಂಬರಿ.

About the Author

ಎ.ಪಿ. ಮಾಲತಿ
(06 May 1944)

ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಸ್ಥಾನ ಹೊಂದಿರುವ ಪ್ರಸಿದ್ಧ ಕತೆ, ಕಾದಂಬರಿಕಾರ್ತಿ ಎ. ಪಿ. ಮಾಲತಿಯವರು ಹುಟ್ಟಿದ್ದು ಭಟ್ಕಳದಲ್ಲಿ 1944 ರ ಮೇ 6 ರಂದು. ಅವರ ಎರಡು ಪತ್ತೆದಾರಿ ಕಾದಂಬರಿಗಳು ಹೊರಬಂದಾದ ಕೇವಲ ಹದಿನೈದರ ವಯಸ್ಸು. ಹಿಂದಿ ಭಾಷೆ ಕಲಿತು ಓದಿದ್ದು ಪ್ರೇಮಚಂದರ ಕಥೆ, ಠಾಕೂರರ ಬಂಗಾಲಿ ಅನುವಾದಗಳು. ಅಧ್ಯಾಪಕರು, ಸಾಹಿತ್ಯಾಸಕ್ತರು, ವಿದ್ಯಾವಂತರಾದ ಪತಿ, ಎ.ಪಿ. ಗೋವಿಂದಭಟ್ಟರಿಂದ ದೊರೆತ ಪ್ರೋತ್ಸಾಹ. ಕೃಷಿ ಜೀವನದ ಜೊತೆಗೆ ಹಳ್ಳಿಯ  ಹೆಂಗಸರು ಭತ್ತ ಕುಟ್ಟಲು ಪಡುತ್ತಿದ್ದ ಭವಣೆ ನೋಡಿ ಪ್ರಾರಂಭಿಸಿದ ರೈಸ್‌ಮಿಲ್‌, ಜೊತೆಗೆ ಹಾಲಿನ ವ್ಯಾಪಾರ. ಜನರೊಡನೆ ಬೆರೆಯುತ್ತಾ ಹೋದಂತೆಲ್ಲ ...

READ MORE

Related Books