ಕಾಳ ಬೆಳದಿಂಗಳು

Author : ಅನಸೂಯಾದೇವಿ

Pages 272

₹ 150.00




Published by: ಸಹನಾ ಪ್ರಕಾಶನ

Synopsys

ಸಾಹಿತ್ಯ, ಸಂಗೀತ ಕ್ಷೇತ್ರಗಳಲ್ಲಿ ಆಳವಾದ ಪರಿಶ್ರಮ ಹೊಂದಿರುವವರು, ವೃತ್ತಿಯಲ್ಲಿ ಕನ್ನಡ ಪ್ರಾಧ್ಯಪಕಿ, ಪ್ರವೃತ್ತಿಯಲ್ಲಿ ಲೇಖಕಿ ಮತ್ತು ಗಾಯಕಿ ಎಂದು ಪರಿಚಯವಿರುವ ಯಾರಾದರೂ ಡಾ.ಅನಸೂಯಾದೇವಿಯವರನ್ನು ಗುರುತಿಸಬಹುದು. ಅವರ ಕೃತಿಯೇ `ಕಾಳ ಬೆಳದಿಂಗಳು‘. ಬದುಕು ಎಸೆಯುವ ಸಂಕೀರ್ಣಮಯ ಸವಾಲುಗಳಿಗೆ ಒಡ್ಡಿಕೊಂಡು ಕಣ್ಣಂಚಿನಲ್ಲಿಯ ಕಂಬನಿಯೊಂದಿಗೇ ಹೋರಾಟದಲ್ಲಿ ತೊಡಗಿ ತಮ್ಮದೇ ಆದ ಧೀಶಕ್ತಿಯಲ್ಲಿ ಎದ್ದುನಿಲ್ಲುವ ಇಲ್ಲಿನ ಸ್ತ್ರೀ ಪಾತ್ರಗಳು ನಮ್ಮ ಮನ ಕಲಕುತ್ತವೆ. ಓದಲು ಕೈಗೆತ್ತಿಕೊಂಡರೆ ಕೆಳಗಿಡಲಾಗದಂತೆ ಚಿತ್ತಾಪಹಾರಿಯಾಗಿರುವ ಕೃತಿ `ಕಾಳ ಬೆಳದಿಂಗಳು‘ ಎಂದು ಪ್ರಕಾಶಕರು ಅಭಿಪ್ರಾಯ ಪಡುತ್ತಾರೆ. ಡಾ.ಅನಸೂಯಾದೇವಿಯವರ ಲೇಖನಿಯಿಂದ ಮತ್ತಷ್ಟು ಕೃತಿಗಳು ಮೂಡಿ ಬರಲಿ, ವಿಚಾರಶೀಲತೆಯನ್ನು ಓದುಗರಲ್ಲಿ ಹುಟ್ಟುಹಾಕಲಿ ಎಂದು ಲೀಲಾವತಿ ಅಡಿಗ ಮುನ್ನುಡಿಯಲ್ಲಿ ಹಾರೈಸಿದ್ದಾರೆ. ಮುಳಬಾಗಿಲಿನ ಶ್ರೀಪಾದ ಗುರುಗಳಿಗೆ ಕಾದಂಬರಿಯನ್ನು ಅರ್ಪಣೆ ಮಾಡಲಾಗಿದೆ, ಸೀರಿಯಲ್ ನೋಡುಗರೂ ಪುಸ್ತಕಕ್ಕೆ ತಮ್ಮ ಮಸ್ತಕವನ್ನು ಸಮರ್ಪಿಸಿಕೊಳ್ಳಬಹುದು.

About the Author

ಅನಸೂಯಾದೇವಿ
(31 October 1949)

ಕಥೆಗಾರ್ತಿ, ಕಾದಂಬರಿಗಾರ್ತಿ ಅನಸೂಯಾದೇವಿ ಅವರು ಸಂಗೀತ ವಿದುಷಿ. ಅವರು 1949 ಅಕ್ಟೋಬರ್‌ 31 ರಂದು ಜನಿಸಿದರು.  ಇವರು ಮೂಲತಃ ಬೆಂಗಳೂರಿನ ಬನಶಂಕರಿಯವರು.  ತಂದೆ ತಿಮ್ಮಯ್ಯ ಅಡಿಗ, ತಾಯಿ ಕಾವೇರಮ್ಮ.  ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟಗೊಂಡಿವೆ. ಎಲ್ಲಾ ಪ್ರಕಾರದ ಬರಹಗಳು ಸುಮಾರು 430 ಕ್ಕೂ ಹೆಚ್ಚು ಪ್ರಕಟಗೊಂಡಿವೆ. ಕಾವ್ಯ : ’ಪ್ರಕೃತಿ ಪುರುಷ, ಕೇಶವ ನಮನ, ಅಮ್ಮ ನಿನ್ನ ನೆನಪಿಗೆ, ಅನನ್ಯ’ ಅವರ ಕಾವ್ಯ ಕೃತಿಗಳು. ’ಡಾ. ಅನಸೂಯಾದೇವಿಯವರ ಸಮಗ್ರ ಕತೆಗಳು, ದೀಪದ ಕೆಳಗೆ, ಉರಿಯ ಬೇಲಿ, ಅನಸೂಯ ಕತೆಗಳು’ ಅವರ ಕಥಾ ಸಂಕಲನ. ’ಆಕಾಶದ ಹಾಡು, ...

READ MORE

Related Books