ಕಶೀರ ಮತ್ತು ಕ್ಷಮೆ (ಎರಡು ಕೃತಿಗಳು)

Author : ಸಹನಾ ವಿಜಯಕುಮಾರ್

₹ 550.00
Year of Publication: 2018
Published by: ಸಾಹಿತ್ಯ ಭಂಡಾರ
Address: ಜಂಗಮ ಮೇಸ್ತ್ರಿಗಲ್ಲಿ, ಬಳೇಪೇಟೆ, ಬೆಂಗಳೂರು-560053

Synopsys

ಕಶೀರ ಮತ್ತು ಕ್ಷಮೆ-ಲೇಖಕಿ ಸಹನಾ ವಿಜಯಕುಮಾರ ಅವರು ಎರಡು ಪ್ರತ್ಯೇಕ ಕಾದಂಬರಿಗಳು. ಕಶೀರ-ಇದು ಕಾಶ್ಮೀರದಲ್ಲಿ ನಡೆಯುತ್ತಿರುವ ಎರಡು ಸಂಸ್ಕೃತಿಗಳ ಘರ್ಷಣೆ. ರಾಜಕೀಯ ದಾಳಕ್ಕೆ ಈ ಸಮಸ್ಯೆಯನ್ನು ಪರಿಹರಿಸದೇ ಮುಂದೂಡತ್ತಾ ಬರಲಾಗಿದೆ. ಧರ್ಮ ಇಣುಕಿದ್ದು ಮಾತ್ರವಲ್ಲ; ಅದೇ ಆಳುತ್ತಾ ರಾಜಕೀಯವೂ ಮಾಡುತ್ತಿದೆ. ಇಂತಹ ವಿಷಯ ವಸ್ತುವಿನ ಕಾದಂಬರಿ-ಕಶೀರ. ಖ್ಯಾತ ಕಾದಂಬರಿಕಾರ ಡಾ. ಎಸ್.ಎಲ್ ಭೈರಪ್ಪ ಅವರು ಈ ಕೃತಿ ಬಗ್ಗೆ ಬರೆದು ‘ಇಡೀ ರಾಷ್ಟ್ರದ, ಇಡೀ ಮಾನವ ಜನಾಂಗದ ಸಾಂಸ್ಕೃತಿಕ ಸಂಘರ್ಷವನ್ನು ಕಾಣಿಸಲಿರುವ ಈ ಕಾದಂಬರಿಯಲ್ಲಿ ಲೇಖಕಿಯ ಧೈರ್ಯ,ಚಿಂತನೆ, ಅಧ್ಯಯನ ಕಾಣಬಹುದು’ ಎಂದು ಪ್ರಶಂಸಿಸಿದ್ದಾರೆ. ಕ್ಷಮೆ-ಎಂಬ ಕಾದಂಬರಿಯು ಸಹ ರಮ್ಯ ಭಾವದ ವಿಷಯ ವಸ್ತುವನ್ನು ಹೊಂದಿದ್ದು, ಜೀವನ ಸಾರ್ಥಕತೆಗೆ, ಅರ್ಥವಂತಿಕೆಗೆ ಪ್ರೇಮವೇ ಆಧಾರ. ತಪ್ಪಿದರೆ, ಯಾವುದಕ್ಕೂ ಕ್ಷಮೆ ಇರದು ಎಂಬುದರ ಪ್ರಧಾನ ಭಾವದ ಕಾದಂಬರಿ.

About the Author

ಸಹನಾ ವಿಜಯಕುಮಾರ್

ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿರುವ ಅವರು ಮೂಲತಃ ಮೈಸೂರಿನವರು. ಓದಿನ ಹವ್ಯಾಸದೊಂದಿಗೆ ಕಾದಂಬರಿ ರಚನೆಯಲ್ಲಿ ಮೇರು ಗೈ ಸಾಧಿಸಿದ್ದಾರೆ. ಅವರ ‘ಕಶೀರ’ ಕೃತಿ ಐದು ಮುದ್ರಣಗಳನ್ನು ಕಂಡು ಜನ ಮೆಚ್ಚಿಗೆಗೆ ಪಾತ್ರವಾಗಿದೆ. ಮೊದಲ ಕಾದಂಬರಿ - ‘ಕ್ಷಮೆ’. ಮೂರನೇ ಕಾದಂಬರಿ ’ಅವಸಾನ’. ಅವರ ಸಾಹಿತ್ಯ ಸೇವೆಗೆ ‘ಚಡಗ’ ಪ್ರಶಸ್ತಿ ದೊರೆತಿದೆ.  ...

READ MORE

Related Books