ಮೂಕ ಧಾತು

Author : ಕೆ.ಎನ್. ಗಣೇಶಯ್ಯ

Pages 248

₹ 195.00




Year of Publication: 2012
Published by: ಅಂಕಿತ ಪುಸ್ತಕ
Address: 53, ಶ್ಯಾಮಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್, ಮುಖ್ಯರಸ್ತೆ, ಬೆಂಗಳೂರು
Phone: 08026617100

Synopsys

ಇತಿಹಾಸವನ್ನು ಆಧರಿಸಿ ರೋಚಕ ಕತಾ ಹಂದರ ಇದಾಗಿದ್ದು ಮನುಷ್ಯನ ವಿಕಾಸ ಕುರಿತು, ನಮ್ಮೊಳಗಿದ್ದು ನಮ್ಮನಾಳುವ ಧಾತುಗಳು ಈ ಕಾದಂಬರಿಯ ಮುಖ್ಯ ವಸ್ತುವಾಗಿದೆ. ಸ್ವಾರ್ಥವನ್ನು ತುಚ್ಛವಾಗಿ ಕಾಣುತ್ತಲೇ ಅದರಲ್ಲೇ ಮೀಯುವ ಮನುಷ್ಯನ ಈ ಹುಟ್ಟು ಗುಣವೇ ಮಾನವ ಜೀವಿಗಳ ವಿಕಾಸಕ್ಕೆ ಇಂಧನವಾಗಿರುವುದು ಎಂಬುದರ ಹೊಸದೃಷ್ಟಿಕೋನವನ್ನು ಲೇಖಕ ಕೆ.ಎನ್. ಗಣೇಶಯ್ಯ ಅವರು ಈ ಕಾದಂಬರಿ  ಮೂಲಕ ನೀಡಿದ್ದಾರೆ.

About the Author

ಕೆ.ಎನ್. ಗಣೇಶಯ್ಯ

ವೃತ್ತಿಯಿಂದ ಕೃಷಿ ವಿಜ್ಞಾನಿ ಆಗಿರುವ ಕೆ.ಎನ್. ಗಣೇಶಯ್ಯ ಅವರು ಮೂಲತಃ ಕೋಲಾರ ಜಿಲ್ಲೆಯವರು. ಕಳೆದ ೩೦ ವರ್ಷಗಳಿಂದ ತಳಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಅವರು  ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು. ಪ್ರಾಣಿ ಮತ್ತು ಸಸ್ಯಗಳ ವರ್ತನೆಗೆ ಮೂಲಭೂತವಾದ ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ. ಭಾರತದ ಪ್ರಮುಖ ಜೀವ ವೈವಿಧ್ಯ ತಾಣಗಳಲ್ಲಿನ ಸಸ್ಯಗಳ ಮತ್ತು ದೇಶದ ಜೀವ ಸಂಪತ್ತಿನ ಬಗ್ಗೆ ಇವರು ತಯಾರಿಸಿರುವ ಮಾಹಿತಿಯ ಖಜಾನೆಯ ಸಿ.ಡಿ.ಗಳು ಮತ್ತು ಅಂತರ್ಜಾಲ ಒಂದು ಅಪೂರ್ವ ಹೆಜ್ಜೆ. ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧ ಬರೆದಿರುವ ಅವರು ಆರು ವೈಜ್ಞಾನಿಕ ಕೃತಿಗಳನ್ನು ...

READ MORE

Related Books