ಸಮಗ್ರ ದೇವುಡು ಕಾದಂಬರಿಗಳು ಸಂಪುಟ-1

Author : ಮಲ್ಲೇಪುರಂ ಜಿ. ವೆಂಕಟೇಶ್‌

Pages 544

₹ 600.00




Year of Publication: 2023
Published by: ಅನ್ನಪೂರ್ಣ ಪಬ್ಲಿಷಿಂಗ್ ಹೌಸ್

Synopsys

`ಸಮಗ್ರ ದೇವುಡು’ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ ಸಂಪಾದಕತ್ವದ ಕಾದಂಬರಿಯಾಗಿದೆ. ಈ ಸಂಪುಟದಲ್ಲಿ ಎರಡು ಐತಿಹಾಸಿಕ ಕಾದಂಬರಿಗಳಿವೆ. ಇನ್ನೊಂದು ಆಧುನಿಕಪೂರ್ವ ಕಥಾನಕವನ್ನು ಹೊಂದಿರುವ ಕಾದಂಬರಿಯೂ ಇದೆ. ಮಯೂರ ಮತ್ತು ಚಿನ್ನಾ ಕಾದಂಬರಿಗಳಲ್ಲಿ 'ಮಯೂರ' ಕನ್ನಡಕ್ಕೊಂದು ಅಪೂರ್ವ ಬಗೆಯ ಕಾದಂಬರಿಯನ್ನು ದೇವುಡು ನೀಡಿದ್ದಾರೆ!. 

ಈ ಕೃತಿಯ ಕುರಿತು ಸಂಪಾದಕ ಮಲ್ಲೇಪುರಂ ಜಿ. ವೆಂಕಟೇಶ ಹೀಗೆ ಹೇಳಿದ್ದಾರೆ; ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಬಂಗಾಳದ ಬಂಕಿಮಚಂದ್ರರ ಐತಿಹಾಸಿಕ ಕಾದಂಬರಿಗಳೂ ಮಹಾರಾಷ್ಟ್ರದಲ್ಲಿ ತಿಲಕರು ಆರಂಭಿಸಿದ ಗಣೇಶೋತ್ಸವ, ಮರಾಠಿಯ 'ಕೀಚಕವಧ' ನಾಟಕ ಹರಿನಾರಾಯಣ ಅಪ್ಟೆ ಅವರ ಐತಿಹಾಸಿಕ ಕಾದಂಬರಿಗಳೂ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಭಾರತೀಯ ಜನತೆಯನ್ನು ಎತ್ತಿ ಕಟ್ಟುವುದರಲ್ಲಿ ವಹಿಸಿದ ಪಾತ್ರ ಚಿರಸ್ಮರಣೀಯವಾದುದು.

ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ ಬಗೆಯ ಪಾರತಂತ್ರ್ಯದ ವಿರುದ್ಧ ನಡೆದ ಹೋರಾಟದ ಚಿತ್ರಗಳೆಲ್ಲವೂ ಸಾಂಕೇತಿಕವಾಗಿ ಬ್ರಿಟಿಷರ ವಿರುದ್ಧ ನಡೆಯಬೇಕಾಗಿದ್ದ, ನಡೆಯುತ್ತಿದ್ದ ಹೋರಾಟವನ್ನೇ ಚಿತ್ರಿಸುತ್ತಿದ್ದವು. ಈ ಕೃತಿಗಳ ಸಾಲಿನಲ್ಲಿ ನಿಲ್ಲುವ ಶ್ರೀ ದೇವುಡು ನರಸಿಂಹಶಾಸ್ತ್ರಿಗಳ ಈ ಶತಮಾನದ ಮೂರನೆಯ ಮೊದಲ ವರ್ಷಗಳ ಐತಿಹಾಸಿಕ ಕಾದಂಬರಿ 'ಮಯೂರ' ಪಲ್ಲವ ಸಾಮ್ರಾಜ್ಯದ ದಶಕದ ಭಾಗವಾಗಿ ಹೋಗಿದ್ದ ಬನವಾಸಿ (ವೈಜಯಂತೇ) ರಾಜ್ಯದ ಸ್ವಾತಂತ್ರ್ಯಕ್ಕಾಗಿ ಕದಂಬ ರಾಜಕುಮಾರ ಮಯೂರ ವರ್ಮ ನಡೆಸಿದ ಯಶಸ್ವೀ ಅಹಿಂಸಾತ್ಮಕ ಹೋರಾಟವನ್ನು ಹೃದಯಂಗಮವಾಗಿ ಇಲ್ಲಿ ನಿರೂಪಿತಗೊಂಡಿದೆ.

“'ಮಯೂರ'ವು ಕಥೆ, ಚರಿತ್ರೆಯಲ್ಲ. ಇದರಲ್ಲಿ ದಿಟಕ್ಕಿಂತಲೂ ದಿಟದಂತೆ ತೋರುವ ಕತೆಯೇ ಹೆಚ್ಚು” ಎಂದು ದೇವುಡು ತಮ್ಮ ಮುನ್ನುಡಿಯಲ್ಲಿ ನಿವೇದಿಸಿಕೊಂಡಿದ್ದಾರೆ. ಆದರೂ ಇಲ್ಲಿ ಕಥಿತವಾಗುವ ಒಂದೊಂದು ಅಂಶಕ್ಕೂ ಆಧಾರವಿದೆ ಎಂಬುದನ್ನು ಅವರು ಹೇಳುತ್ತಾರೆ. ಈ ಕಾದಂಬರಿಯ ಚಾರಿತ್ರಿಕ ಕಾಲ ಕ್ರಿ.ಶ. ನಾಲ್ಕನೆಯ ಶತಮಾನದ ಪೂರ್ವಾರ್ಧ. ಕೆಲವು ಶಾಸನಗಳನ್ನು ಬಿಟ್ಟರೆ ಹನ್ನೊಂದನೆಯ ಶತಮಾನಗಳನ್ನು ಬಿಟ್ಟರೆ ಹನ್ನೊಂದನೆಯ ಶತಮಾನಗಳಲ್ಲಿ ಅಂಶಕ್ಕೂ ಹುಟ್ಟಿಕೊಂಡವು ಎನ್ನಲಾದ ಜನಜನಿತ ಕತೆಗಳು ಮಾತ್ರ ಅಂದಿನ ಘಟನೆಗಳ ಮೇಲೆ ಬೆಳಕು ಚೆಲ್ಲುವುದರಿಂದ ಚಾರಿತ್ರಿಕವಾಗಿ ನಿಖರವಾಗಿ ಆಗ ಹೀಗೆಯೇ ನಡೆಯಿತೆಂದು ಎನನ್ನೂ ನಾವು ಹೇಳಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಶ್ರೀ ದೇವುಡು ಅವರು ಮಾಡಿಕೊಂಡಂತೆ ಕಾಣುವ ಕೆಲವು ಬದಲಾವಣೆಗಳು ಅರ್ಥಪೂರ್ಣವಾಗಿ ತೋರುವುದರಿಂದ ನಮಗೆ ಪರಿಶೀಲನಾರ್ಹವೆನಿಸುತ್ತದೆ.

About the Author

ಮಲ್ಲೇಪುರಂ ಜಿ. ವೆಂಕಟೇಶ್‌
(05 June 1952)

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿದ್ದ ಮಲ್ಲೇಪುರಂ ಜಿ. ವೆಂಕಟೇಶ ಅವರು 1952, ಜೂನ್ 5ರಂದು ಬೆಂಗಳೂರು ಜಿಲ್ಲೆಯ ನೆಲಮಂಗಲದಲ್ಲಿ ಜನಿಸಿದರು. ತಂದೆ ಗಂಗಯ್ಯ, ತಾಯಿ ವೆಂಕಟಮ್ಮ. ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾಭ್ಯಾಸ ನೆಲಮಂಗಲದ ಸರ್ಕಾರಿ ಮತ್ತು ಹೈಯರ್‌ಸೆಕೆಂಡರಿ ಶಾಲೆ. ಮೊದಲ ಸಂಸ್ಕೃತ-ಕನ್ನಡ ಗುರುಗಳು ಎಸ್.ವಿ. ರಾಮಸ್ವಾಮಿ ಅಯ್ಯಂಗಾರ್. ಸಿದ್ಧಗಂಗಾ ಮಠದಲ್ಲಿ ಕನ್ನಡ ಪಂಡಿತ್ ಮತ್ತು ಸಂಸ್ಕೃತ ಅಲಂಕಾರವಿದ್ವತ್ ವ್ಯಾಸಂಗ. ವಿದ್ವಾನ್ ಬಿ. ವೆಂಕಟರಾಮಭಟ್ಟ,  ಇವರಲ್ಲಿ ಕಾವ್ಯಾಲಂಕಾರಗಳ ಅಧ್ಯಯನ. ಬೆಂಗಳೂರಿನ ಶ್ರೀರಾಮಕೃಷ್ಣಾಶ್ರಮದಲ್ಲಿ ಸ್ವಾಮಿ ಆದಿದೇವಾನಂದರಿAದ ಅದ್ವೈತ ವೇದಾಂತದ ಅನುಗ್ರಹ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ., ಮೂರನೇ ರ‍್ಯಾಂಕಿನೊಡನೆ ಕುವೆಂಪು ಚಿನ್ನದ ...

READ MORE

Related Books