ಎಳನೀರು

Author : ಸುನಂದಾ ಕಡಮೆ

Pages 114

₹ 75.00
Year of Publication: 2014
Published by: ಕಾವ್ಯಕಲಾ ಪ್ರಕಾಶನ
Address: # 1273, 7th ಕ್ತಾಸ್, ಚಂದ್ರಾ ಲೇಔಟ್, ವಿಜಯನಗರ, ಬೆಂಗಳೂರು, 560040
Phone: 9964124831

Synopsys

ಸುನಂದಾ ಕಡಮೆ ಅವರು ಮಕ್ಕಳಿಗಾಗಿ ಬರೆದ ಕಾದಂಬರಿ-ಎಳನೀರು. ಕತೆಗಳ ಕುರಿತು ಬಾಲ್ಯದಿಂದಲೂ ಆಸಕ್ತಿಯಿದ್ದ ಶಿಕ್ಷಕಿಯೊಬ್ಬರು ತಮ್ಮ ನಿತ್ಯದ ದಾರಿಯಲ್ಲೂ ಮಕ್ಕಳನ್ನು ಆ ನಿಟ್ಟಿನಲ್ಲಿ ತುಡಿಯಲು ಹಚ್ಚುವ ಕಥನವೇ ಈ ಕಾದಂಬರಿಯ ವಿಸ್ತಾರದಲ್ಲಿದೆ. ಶಿಕ್ಷಕಿಯ ಬಾಲ್ಯದ ಅನುಭವಗಳನ್ನು ಕೂಡ ಒಂದು ಕತೆಯ ರೂಪದಲ್ಲೇ ಮಂಡಿಸಿದ್ದಾರೆ ಲೇಖಕಿ. ಬಾಲ್ಯದ ಅನುಭವಗಳು ದೊಡ್ಡವರಿಗೂ ಆಪ್ಯಾಯಮಾನವಾಗುವಂತಿವೆ.

About the Author

ಸುನಂದಾ ಕಡಮೆ
(27 August 1967)

ಕಥೆಗಾರ್ತಿ ಸ್ತ್ರೀವಾದಿ ಸುನಂದಾ ಕಡಮೆ ಉತ್ತರ ಕನ್ನಡ ಜಿಲ್ಲೆ, ಅಂಕೋಲಾ ತಾಲ್ಲೂಕಿನ ಅಲಗೇರಿ ಗ್ರಾಮದವರು. ಸಮಕಾಲೀನ ವಿಷಯಗಳ ಕುರಿತು ಬರೆಯುವ ಸುನಂದಾ ಅವರು ಸೀಳುದಾರಿ (ಕವನ ಸಂಕಲನ), ಪುಟ್ಟ ಪಾದದ ಗುರುತು, ಗಾಂಧಿ ಚಿತ್ರದ ನೋಟು (ಕಥಾ ಸಂಕಲನ), ಪಿಸುಗುಡುವ ಬೆಟ್ಟಸಾಲು, ಪಡುವಣದ ಕಡಲು (ನುಡಿಚಿತ್ರ ಸಂಕಲನ) ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಛಂದ ಪುಸ್ತಕ ಬಹುಮಾನ, ಎಂ.ಕೆ. ಇಂದಿರಾ ಬಹುಮಾನ, ಕಲೇಸಂ ಸುಧಾಮ ದತ್ತಿನಿಧಿಯ 'ತ್ರಿವೇಣಿ' ಪುರಸ್ಕಾರ ದೊರೆತಿದೆ.  ...

READ MORE

Related Books