ಕೃತಿಕರ್ಷ

Author : ಅಜಿತ್ ಹರೀಶಿ

Pages 236

₹ 240.00
Year of Publication: 2021
Published by: ಗೌತಮ್ ಪ್ರಕಾಶನ
Address: 2349/17, 11 ನೇ ಅಡ್ಡ ರಸ್ತೆ, ಬಸವೇಶ್ವರ ರಸ್ತೆ, ಕೆ.ಆರ್‍. ಮೊಹಲ್ಲಾ, ಮೈಸೂರು-570004
Phone: 9342462146

Synopsys

ಕೃತಿಕರ್ಷ ಕೃತಿಯು ಡಾ. ಅಜಿತ್ ಹರೀಶಿ ಅವರ ಕಾದಂಬರಿ. ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಅಶೋಕ ಹಾಸ್ಯಗಾರ ‘ಕೃತಿಯ ವಸ್ತು ಇಂದಿನ ಕಾಲಘಟ್ಟಕ್ಕೆ ಅಗತ್ಯವಾದ ಸಾಹಿತ್ಯವಾಗಿದೆ. ಅಜಿತ್‌ ಅವರು ಇತ್ತೀಚೆಗೆ ಸಾಹಿತ್ಯ ಲೋಕದಲ್ಲಿ ಸಂಚಲನವನ್ನು ಉಂಟು ಮಾಡಿದ ಸಾಹಿತಿ. ಪರಿಸರ ತಜ್ಞ ಶಿವಾನಂದ ಕಳವೆಯವರ 'ಮಧ್ಯಘಟ್ಟ' ಕಾದಂಬರಿಯಿಂದ ಹಿಡಿದು ನಾಡಿನಲ್ಲಿ ಪ್ರಕಟಗೊಂಡ ಅನೇಕ ಉತ್ತಮ ಕತೆ, ಕಾದಂಬರಿ, ಕವನ ಸಂಕಲನ (ಆರ್. ದಿಲೀಪ್ ಕುಮಾರ್‌ರ 'ಹಾರುವ ಹಂಸೆ' ಕವನ ಸಂಕಲನ)ಗಳ ಒಂದು ಸ್ಥೂಲವಾದ ನೋಟ ಕೃತಿಕರ್ಷದ ಬರಹಗಳಿಂದ ಸಾಧ್ಯವಾಗುತ್ತದೆ. ಈ ಕೃತಿಗೆ ವಿವಿಧ ಪ್ರಶಸ್ತಿಗಳು ಲಭ್ಯವಾಗಿರುತ್ತದೆ. ಕವಿ, ಕತೆಗಾರನಾದವನ ಓದು ಸಾಮಾನ್ಯ ಓದುಗನ ದೃಷ್ಟಿಕೋನದಂತಿರುವುದಿಲ್ಲ. ಸಾಮಾನ್ಯ ಓದುಗನು ವ್ಯಕ್ತಪಡಿಸುವ ಅಭಿವ್ಯಕ್ತಿ, ಅಭಿಪ್ರಾಯಗಳಿಗಿಂತ ಭಿನ್ನವಿರುತ್ತವೆ. ವಿಭಿನ್ನವಾಗಿರಬೇಕೆಂದು ಸೃಜನಶೀಲ ಲೋಕವೂ ಅಪೇಕ್ಷೆ ಪಡುತ್ತದೆ. ಡಾ. ಅಜಿತ್‌ ಅವರಿಗೆ ಓದು ಆದಿ, ಅಂತ್ಯವಿಲ್ಲದ, ಅಗಾಧ ಸುಖವನ್ನು ನೀಡುವ ಕಾಯಕ. ಅದು ಧ್ಯಾನಾವಸ್ಥೆಯ ಆನಂದವನ್ನೂ ಕೊಡುವ ಮಾಧ್ಯಮ. ಆದ್ದರಿಂದ, ಅವರಿಗೆ ಓದು ಅನಿವಾರ್ಯ. 'ಜಗತ್ತಿನ ಅಸಂಖ್ಯಾತ ಭಾಷೆಗಳ ಅಗಣಿತ ಕೃತಿಗಳ ಸಾಹಿತ್ಯವೆಂಬ ಅಗಾಧ ಸಮುದ್ರದಲ್ಲಿ ಇದುವರೆಗೆ ನಾನು ಮೊಗೆದು ತುಂಬಿಸಿಕೊಂಡಿದ್ದು ಬೊಗಸೆ ನೀರಷ್ಟೇ' ಎಂಬ ವಿನಯದಿಂದ ಈ 'ಕೃತಿಕರ್ಷ'ವಾಗಿ ನಮ್ಮ ಕೈಗಿತ್ತಿದ್ದಾರೆ. ಇದು ಓದಿನ ಟಿಪ್ಪಣಿ ಮಾತ್ರ ಎಂದಿರುವುದರಿಂದ ನಮ್ಮ ಓದು ಕೂಡ ವಿಮರ್ಶಾತ್ಮಕವಾಗಿರಬೇಕಿಲ್ಲ. ಇಂಥ ಟಿಪ್ಪಣಿಗಳು ಒಮ್ಮೊಮ್ಮೆ ಅಮೂಲ್ಯ ವಿಚಾರಧಾರೆಗಳನ್ನು, ಒಳನೋಟಗಳನ್ನು ನೀಡುವುದರಿಂದ ಲಘುವಾಗಿ ಪರಿಗಣಿಸಲಾಗದು. ಡಾ. ಅಜಿತ್ ಅವರ 'ಕೃತಿಕರ್ಷ' ಇಂದಿನ ಕಾಲಘಟ್ಟಕ್ಕೆ ಅಗತ್ಯವಾದ ಸಾಹಿತ್ಯ ಪರಿಕರಗಳನ್ನು ನೀಡಿದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ. 

About the Author

ಅಜಿತ್ ಹರೀಶಿ
(24 August 1978)

ಲೇಖಕ ಡಾ. ಅಜಿತ್  ಹರೀಶಿ ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹರೀಶಿ ಗ್ರಾಮದವರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹುಟ್ಟೂರಿನ ಸರ್ಕಾರಿ ಶಾಲೆಗಳಲ್ಲಿ, ಪದವಿಪೂರ್ವ ಶಿಕ್ಷಣವನ್ನು ಶಿರಸಿಯಲ್ಲಿ ಮುಗಿಸಿರುತ್ತಾರೆ. ಆಯುರ್ವೇದ ಮಹಾವಿದ್ಯಾಲಯ, ಹುಬ್ಬಳ್ಳಿಯಲ್ಲಿ ವೈದ್ಯಕೀಯ ಪದವೀಧರರಾದ  ಇವರು, ಆಕ್ಯುಪಂಕ್ಚರ್ ಚಿಕಿತ್ಸೆ , ಹಿಪ್ನೋಥೆರಪಿಯಲ್ಲಿಯೂ ಪರಿಣಿತರು.  ಪ್ರಸ್ತುತ ಹರೀಶಿಯಲ್ಲಿ ಖಾಸಗಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ಬರವಣಿಗೆಯನ್ನು ತಮ್ಮ ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ. ಬಿಳಿಮಲ್ಲಿಗೆಯ ಬಾವುಟ, ಸೂರು ಸೆರೆಹಿಡಿಯದ ಹನಿಗಳು, ಕನಸಿನ ದನಿ ಪ್ರಕಟಿತ ಕವನ ಸಂಕಲನಗಳು.  ಪರಿಧಾವಿ, ಕಾಮೋಲ ಮತ್ತು ಮೂಚಿಮ್ಮ ಪ್ರಕಟಿತ ಕಥಾಸಂಕಲನಗಳು.  ಕಥಾಭರಣ ಸಂಪಾದಿತ ಕೃತಿಯಾಗಿದೆ. ಆರೋಗ್ಯದ ಅರಿವು ...

READ MORE

Related Books