ಪುಂಸ್ತ್ರೀ

Author : ಬಿ. ಪ್ರಭಾಕರ ಶಿಶಿಲ

₹ 0.00




Year of Publication: 000
Published by: 000
Address: 000
Phone: 000

Synopsys

 ಲಿಂಗ ಸಮಾನತೆ ಕುರಿತು ಚರ್ಚಿಸುವ ”ಪುಂಸ್ತ್ರೀ’ ಕಾದಂಬರಿ ಅರ್ಥಶಾಸ್ತ್ರ ಪಠ್ಯ ಪುಸ್ತಕ ರಚನೆಕಾರ ಡಾ. ಪ್ರಭಾಕರ ಶಿಶಿಲ ಅವರ ವಿಶಿಷ್ಟ ಕೃತಿ. ಮಹಾಭಾರತದ ಅಂಬೆ ಮತ್ತು ಭೀಷ್ಮರನ್ನು ಗಮನದಲ್ಲಿರಿಸಿಕೊಂಡು ಕಾದಂಬರಿ ಮೂಡಿ ಬಂದಿದೆ. ಕರಾವಳಿಯ ಭಾಗದ ಲೇಖಕರಾದ ಶಿಶಿಲ ಅವರ ಮೇಲೆ ಸಹಜವೋ ಎಂಬಂತೆ ಇರುವ ಯಕ್ಷಗಾನದ ಪ್ರಭಾವ ಕೃತಿಗೆ ಮತ್ತೊಂದು ಬಗೆಯ ಮೆರಗು ತಂದಿದೆ. 

ಹದಿನಾಲ್ಕು ಭಾಷೆಗಳಿಗೆ ಅನುವಾದಗೊಂಡಿರುವುದು, ನಾಟಕವಾಗಿಯೂ ಪ್ರಸಿ‌ದ್ಧವಾಗಿರುವುದು ಕೃತಿಯ ವಿಶೇಷ. 

About the Author

ಬಿ. ಪ್ರಭಾಕರ ಶಿಶಿಲ
(21 December 1953)

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ನೆಹರೂ ಮೆಮೋರಿಯಲ್‌ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದ ಡಾ. ಪ್ರಭಾಕರ ಶಿಶಿಲ ಅರ್ಥಶಾಸ್ತ್ರದ ಪಠ್ಯಪುಸ್ತಕರ ರಚನಕಾರರಾಗಿ ಮನೆಮಾತಾದವರು. ಆದರೆ ಅವರ ಸಾಹಿತ್ಯಕೃಷಿಗೂ ತನ್ನದೇ ಆದ ತೂಕವಿದೆ. ಮತ್ಸ್ಯಗಂಧಿ, ಗಗ್ಗರ, ಬಾರಣೆ, ಗುಜರಿ ಅದ್ದಿಲಿಚ್ಚನ ಜಿಹಾದಿಯ, ಕೊಡಗಿನ ಐತಿಹ್ಯ ಕಥೆಗಳು, ಬೆಟ್ಟದಾ ಮೇಲೊಂದು, ಕಪಿಲಳ್ಳಿಯ ಕತೆಗಳು, ಜಲಲ ಜಲಧಾರೆ, ದೊಡ್ಡ ವೀರ ರಾಜೇಂದ್ರ, ಕೊಡಗಿನ ಕತೆಗಳು ಇತ್ಯಾದಿ ಶಿಶಿಲರ ಕೃತಿಗಳು.  ಇನ್ನು ಶಿಶಿಲರನ್ನೇ ಕುರಿತು ಅನೇಕ ಗ್ರಂಥಗಳು ಪ್ರಕಟವಾಗಿವೆ ಅವುಗಳೆಂದರೆ: ಸುವರ್ಣ ಅಭಿನಂದನಾ ಸ್ಮರಣಿಕೆ, ಸಾಹಿತ್ಯ ಶಿಶಿಲ: ಶಿಶಿಲರ ಸಮಗ್ರ ಸಾಹಿತ್ಯ ವಿಮರ್ಶೆ, ಹಿರಿಯ ಸಾಹಿತಿ ಪ್ರಭಾಕರ ಶಿಶಿಲ: ಶಿಶಿಲರ ಜೀವನ ಮತ್ತು ಸಾಧನೆಗಳು, ಪ್ರಭಾಕರ ಶಿಶಿಲರ ಸಾಹಿತ್ಯ ...

READ MORE

Related Books