ಸರದಿ

Author : ನಾ. ದಾಮೋದರ ಶೆಟ್ಟಿ

Pages 130

₹ 42.00
Year of Publication: 2010
Published by: ಮನೋಹರ ಗ್ರಂಥ ಮಾಲಾ
Address: ಸುಭಾಶ್ ರಸ್ತೆ,  ಧಾರವಾಡ.

Synopsys

`ಸರದಿ' ಕಾದಂಬರಿಯನ್ನು ಲೇಖಕ ನಾ. ದಾಮೋದರ ಶೆಟ್ಟಿ ಅವರು ರಚಿಸಿದ್ದಾರೆ.  ಆಧುನಿಕತೆ ಮತ್ತು ಜಾಗತಿಕರಣದ ಪರಿಣಾಮವಾಗಿ ನಮ್ಮ ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆ ಸಾಗುತ್ತಿರುವ ದಾರಿ ಎಲ್ಲೆಡೆಯೂ ಅಭಯಾಶ್ರಮದ ಕಡೆ ಚಲಿಸುತ್ತಿರುವ ದೃಶ್ಯಗಳನ್ನು ಚಿತ್ರಿಸುತ್ತದೆ. ಈ ಎಲ್ಲ ಸಂದರ್ಭಗಳಲ್ಲಿ ಆಶ್ರಮ ಸೇರುತ್ತಿರುವವರೆಲ್ಲಾ ಹೆಂಗಸರು ಮತ್ತು ತಾಯಂದಿರು ಎನ್ನುವುದು ವಿಶೇಷವಾದುದು. ಈ ಕಾದಂಬರಿಯು ಕುಟುಂಬ ಮತ್ತು ತಾಯಿಯನ್ನು ಕೇಂದ್ರವಾಗಿ ಇಟ್ಟುಕೊಂಡು ಈ ಕಾಲದ ಭಿನ್ನ ಅನನ್ಯತೆಗಳ ನಡುವಿನ ಸಂಘರ್ಷ ಮತ್ತು ಅದರಿಂದ ಸಂಭವಿಸುವ ನೋವು, ಅದನ್ನು ನಿವಾರಿಸಲು ಮಾಡುವ ಪ್ರಯತ್ನಗಳು – ಹೀಗೆ ಅನೇಕ ಸಂಗತಿಗಳನ್ನು ಚರ್ಚಿಸುತ್ತದೆ’ ಎಂದು ವಿವರಿಸಲಾಗಿದೆ.

 

About the Author

ನಾ. ದಾಮೋದರ ಶೆಟ್ಟಿ
(02 August 1951)

ನಾದಾ ಎಂತಲೂ ಕರೆಯಲಾಗುವ ನಾ. ದಾಮೋದರ ಶೆಟ್ಟಿ ಅವರು 1951 ಆಗಸ್ಟ್‌ 2ರಂದು ಕಾಸರಗೋಡಿನ ಕುಂಬಳೆಯಲ್ಲಿ ಜನಿಸಿದರು. ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಸುಳುವಿನೊಳಗೆ, ಸರದಿ (ಕಾದಂಬರಿ), ಕೆ.ಎನ್. ಟೇಲರ್‌, ಮುದ್ದಣ ಬದುಕು-ಬರಹ, ನಾರಾಯಣಗುರು, ಪೇಜಾವರ ಸದಾಶಿವರಾಯರು, ಕೆ.ವಿ. ಸುಬ್ಬಣ್ಣ (ವ್ಯಕ್ತಿ ಪರಿಚಯ), ಭತ್ತದ ಕಾಳುಗಳು, ಕರಿಯ ದೇವರ ಹುಡುಕಿ, ಅಶ್ವತ್ಥಾಮ, ಬಾಲ್ಯದ ನೆನಪುಗಳು, ದೇವರ ವಿಕರಾಳಗಳು, ಸಾಕ್ಷಾತ್ಕಾರ, ಮಹಾಕವಿ ಜಿ. ಶಂಕರ ಕುರುಪ್, ಭರತವಾಕ್ಯ (ಅನುವಾದ), ಅದ್ಭುತ ರಾಮಾಯಣ, ಸ್ವಾತಂತ್ರದ ಸ್ವರ್ಣಹೆಜ್ಜೆ, ಸಾನ್ನಿಧ್ಯ, ಪೋಲಿ, ...

READ MORE

Related Books