ಯುದ್ಧಕ್ಕೆ ಸಿದ್ಧನಾಗು ಸಾರಥಿ

Author : ಗೌತಮ್ ಬೆಂಗಳೆ

Pages 355

₹ 360.00




Year of Publication: 2023
Published by: ವರ್ಣ ಪಬ್ಲಿಕೇಷನ್ಸ್
Address: ನಂ.254, ಬ್ಲಾಕ್ 175, ಕೆ.ಹೆಚ್.ಬಿ ಅಪಾರ್ಟ್ ಮೆಂಟ್, ಕೆ.ಎಸ್.ಟೌನ್, ಬೆಂಗಳೂರು 560 060

Synopsys

'ಯುದ್ಧಕ್ಕೆ ಸಿದ್ಧನಾಗು ಸಾರಥಿ' ಗೌತಮ್ ಬೆಂಗಳೆ ಅವರು ರಚಿಸಿರುವ ರೋಚಕ ಕಾದಂಬರಿ. ಈ ಕೃತಿಯ ಬಗ್ಗೆ ವಿಮರ್ಶೆ ಬರೆದಿರುವ ಪ್ರಸಾದ ಅಸೋಡು ಅವರು ಪುಸ್ತಕದ ಕುರಿತು ವಿವರಿಸುತ್ತಾ 'ಗಾತ್ರ ದೊಡ್ಡದು ಆದ್ರೂ ಗಾತ್ರ ದೊಡ್ಡದಾಗಿ ಅನಿಸದು. ಇನ್ನು ಈ ಕಾದಂಬರಿಯ ಕತೆಯ ಎಳೆಯ ಬಗ್ಗೆ ಹೇಳಬೇಕು ಅಂದ್ರೆ ಪ್ರೀತಿ, ಪ್ರೇಮ, ದೇಶ, ಯುದ್ಧ, ದ್ವೇಷ, ಭಯೋತ್ಪಾದನೆ, ಆಡಳಿತ ಹೀಗೆ ಎಲ್ಲಾ ಕಡೆ ಹರಿಯುತ್ತೆ. ಹೊಂದಿಸಿ ಹೇಳೋದಾದ್ರೆ ನೀವು ಓದಿರುವ ಕತೆಯ ಗಾತ್ರ ಕರ್ನಾಟಕ ಆದ್ರೆ, ಇದ್ರದ್ದು ಭಾರತ. ಎಷ್ಟು ಚೆನ್ನಾಗಿ ಎಲ್ಲಾ ಕಡೆ ಹರವಿಕೊಳ್ಳಬೇಕೊ ಅಲ್ಲೆಲ್ಲ ಹರಿದು ಸಾಗುತ್ತೆ. ಈ ಕಾದಂಬರಿಯ ಅಧ್ಯಾಯಗಳು ಹಿಂದೆ ಮುಂದೆ ಕಾಲಘಟ್ಟದಲ್ಲಿ ಸಾಗುತ್ತೆ. ಅದ್ರ ಜೊತೆ ಇನ್ನೊಂದು ವಿಶೇಷ ಅಂದ್ರೆ ನೀವು ಈ ಅಧ್ಯಾಯಗಳನ್ನ ಹಿಂದು ಮುಂದು ಓದಿದ್ರು ಒಂತರಾ ಮಜಾ ಕೊಡುತ್ತೆ. 30-35 ನಿಮಿಷದ ಎಪಿಸೋಡ್ ಗಳ ವೆಬ್ ಸೀರೀಸ್ ತೆಗಿಯೋದಾದ್ರೆ ಆರೇಳು ಎಪಿಸೋಡ್ ಗಳು ಖಂಡಿತ ಮಾಡಬಹುದು' ಎಂದಿದ್ದಾರೆ. 

About the Author

ಗೌತಮ್ ಬೆಂಗಳೆ

ಲೇಖಕ ಗೌತಮ್ ಬೆಂಗಳೆ ಶಿರಸಿಯ ಬೆಂಗಳೆಯವರು. ಇಂಜಿನೀಯರಿಂಗ್ ಪದವೀಧರರು. ಪ್ರಸ್ತುತ ಆಲ್ಫ್ ಕಾಮರ್ಸ್ ಎಂಬ ಕಂಪನಿಯ ಸಂಸ್ಥಾಪಕ ಸದಸ್ಯರು. ಕಂಪನಿಯಲ್ಲಿ ಪ್ರೋಗ್ರಾಮರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಳ್ಳಿಯ ಹಸಿರು, ಕೃಷಿಯ ಒಡನಾಟ , ದೇಶ ಸುತ್ತುವುದು, ಪುಸ್ತಕ ಓದುವುದು ಹೆಚ್ಚು ಆಸಕ್ತಿ. 'ಆತ್ಮ ಸಂವೇದನಾ' ಅವರ ಚೊಚ್ಚಲ ಕಾದಂಬರಿ. ಹಾಗೂ 'ಪ್ರತಿವ್ಯೂಹ' ಎರಡನೇ ಕಾದಂಬರಿ. ...

READ MORE

Related Books