ಅವಶೇಷ

Author : ಬೇಲೂರು ರಾಮಮೂರ್ತಿ

Pages 136

₹ 12.00




Year of Publication: 1986
Published by: ಐಬಿಎಚ್ ಪ್ರಕಾಶನ
Address: #77, 2ನೇ ಮುಖ್ಯರಸ್ತೆ, ರಾಮರಾವ್ ಲೇಔಟ್, ಬಿಎಸ್ ಕೆ ಮೂರನೇ ಸ್ವೇಜ್, ಬೆಂಗಳೂರು- 560085.
Phone: 080 - 48371555

Synopsys

‘ಅವಶೇಷ’ ಬೇಲೂರು ರಾಮಮೂರ್ತಿ ಅವರ ಕಾದಂಬರಿಯಾಗಿದೆ. ಹೆಣ್ಣು ಗಂಡು ಪ್ರೇಮ ಕಾಮ ಜಗತ್ತಿನ ವಿಶಾಲ ಹಾಸಿನಲ್ಲಿ ನಿರಂತರವಾಗಿ ಹೊಕ್ಕು ಸತತ ಸಿಕ್ಕುಗಳಾಗಿ ಪರಿಣಮಿಸಿ ಜೀವನವನ್ನು ಮತ್ತೆ ಮತ್ತೆ ಪ್ರಚೋದಿಸುತ್ತವೆ. ಹೆಣ್ಣು ಗಂಡುಗಳು ಪರಸ್ಪರ ಮನಸ್ಸುಗಳನ್ನು ಆರಾಧಿಸಬೇಕಷ್ಟೇ ಎನ್ನುವುದು ಸಿದ್ಧಾಂತವಾದರೂ ಕಾದಂಬರಿಯಲ್ಲಿ ಬರುವ ಪಾತ್ರಗಳಾದ ರಾಮು, ಮಾಲಿನಿ, ಮನೋಹರ್, ಶಂಕರ್, ಮಂಜು ಇವೆರೆಲ್ಲರ ಪಾತ್ರಗಳು ವಿಚಿತ್ರವಾಗಿ ಮೂಡಿಬಂದಿದೆ. ತುಂಬಾ ಬೋಲ್ಡ್ ಮತ್ತು ಅಸಹಜ ಸನ್ನಿವೇಶಗಳು ಎನಿಸಿದರೂ ಕಾದಂಬರಿ ಕುತೂಹಲದಿಂದ ಓದಿಸಿಕೊಂಡು ಹೋಗುತ್ತವೆ. ಅಂತಿಮವಾಗಿ ಓದುಗರಲ್ಲಿ ಮೂಡುವ ಪ್ರೆಶ್ನೆ ಎಂದರೆ ಸಮಾಜದಲ್ಲಿ ಹೀಗೂ ನಡೆಯಬಹುದೇ ಎಂದು. ಓದಿದ ನಂತರ ಬಹಳ ಕಾಲ ಮೆಲುಕು ಹಾಕುವಂತಹ ವಸ್ತು ಅವಶೇಷದ ಕಥಾನಕ.

About the Author

ಬೇಲೂರು ರಾಮಮೂರ್ತಿ
(30 June 1950)

ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು.  ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು.  ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ.  ‘ಅನರ್ಘ್ಯ ಪ್ರೇಮ, ಅಗೋಚರ, ಜೋಡಿರಾಗ, ಅಪರಾಧಿ ನಾನಲ್ಲ, ಸುಮಂಗಲೆ, ಹೀಗೊಂದು ಸಾರ್ಥಕ ಬದುಕು, ಅಮೃತಗಾನ, ಅತಿಥಿ, ಶರ್ಮಿಳ, ಅಗ್ನಿಜ್ವಾಲೆ, ಅಭಿಷೇಕ, ಅರುಂಧತಿ, ಸಂಬಂಧ ರಾಗ, ಸ್ವರಸಂಗಮ, ತೂಗುಸೇತುವೆ, ಮುತ್ತಿನ ತೆನೆ, ಸಮಾಗಮ, ಕಾಣದ ಊರಲಿ, ಎಂದೂ ನಿನ್ನವನೇ, ಪ್ರೇಮನಿವೇದನೆ, ...

READ MORE

Related Books