ಅಕ್ಕಮ್ಮಜ್ಜಿಯ ಗಂಡನೂ ವಾಣಾಸಜ್ಜನ ಹೆಣ್ತಿಯೂ

Author : ಜಿ.ಎಸ್. ಭಟ್

Pages 252

₹ 250.00




Year of Publication: 2018
Published by: ಚಾರುಮತಿ ಪ್ರಕಾಶನ
Address: 224, 4ನೇ ಮೇನ್, 3ನೇ ಕ್ರಾಸ್, ಚಾಮರಾಜಪೇಟೆ, ಬೆಂಗಳೂರು-18

Synopsys

ಜಿ.ಎಸ್. ಭಟ್‌ ಅವರ ’ಅಕ್ಕಮ್ಮಜ್ಜಿಯ ಗಂಡನೂ ವಾಣಾಸಜ್ಜನ ಹೆಣ್ತಿಯು’ ಕಾದಂಬರಿಯ ಮಡಿವಂತಿಕೆಯಿಂದ ಮಾತನಾಡಲು ಹೇಸುವ, ಕ್ರಿಯೆಯನ್ನು ಸದಾ ಗುಪ್ತವಾಗಿರಿಸಲು ಅದರೆ ಸದಾ ಜೊತೆಯಾಗಿರಬೇಕೆಂದು ಬಯಸುವ ವಸ್ತುವೊಂದರ ಸುತ್ತ ಹೆಣೆದಿರುವ ಕೃತಿ. ವಾತ್ಸಾಯನನ ಕಾಮಸೂತ್ರ, ವೃದ್ಧಾಪ್ಯದ ದಾಂಪತ್ಯ ಅಧ್ಯಯನಕಾರನ ದೃಷ್ಟಿಕೋನ ಮತ್ತು ತನ್ನದೇ ಮನೆ, ಸುತ್ತಮುತ್ತ ನಡೆಯುವ ವಾಸ್ತವ ಇವುಗಳ ಸುತ್ತ ಸಾಗುವ ಕಥೆ. ಮನುಷ್ಯ ಬದುಕಿನ ಮುಖ್ಯ ಆದರೆ ಸಾಮಾಜಿಕ ನೆಲೆಯ ಅಮುಖ್ಯ ಎಂದು ತೋರ್ಪಡಿಸಲ್ಪಡುವ ಹೆಣ್ಣುಗಂಡಿನ ಸಂಬಂಧಗಳ ಗಡಿಗಳನ್ನು ಬ್ರಹ್ಮಚಾರಿ ವಾತ್ಸಾಯನ ಗುರುತಿಸಿದ ರೀತಿ ಮತ್ತು ಇನ್ನೂ ಅನುಭವ ಪಡೆಯದ ತರುಣನೋರ್ವನ ಸಂಶೋಧನೆ ಇದನ್ನು ಸಮಾಜದ ವಾಸ್ತವದ ಜೊತೆಗೆ ಸಮೀಕರಿಸಿ ನೋಡುವ ಬಗೆ ಕಾದಂಬರಿಯ ತಿರುಳು. ಆದರೆ ಅನುಭವ ಪಡೆದ ದಂಪತಿಗಳ ಒಳಗಿನ ಬೇಗುದಿ, ಹತಾಶೆ, ಹಪಾಹಪಿ ಆ ಮೂಲಕ ಕಾಣುವ ದುರಂತಗಳು ಮಚ್ಚಿಡಲು ಬಯಸುವ ಒಂದು ಸಂಗತಿ ಏನೆಲ್ಲಾ ಪರಿಣಾಮವನ್ನು ಬೀರುತ್ತದೆ ಎನ್ನುವುದನ್ನು ಕಾದಂಬರಿ ಮೂಲಕ ಚಿತ್ರಿಸಲಾಗಿದೆ.

ಇಲ್ಲಿ ಓರ್ವ ಮನೋವಿಜ್ಞಾನಿ ಅಥವಾ ಲೈಂಗಿಕ ತಜ್ಞ ಹೇಳುವ ಸಹಜ ದಾಟಿಯಲ್ಲಿ ಕಾದಂಬರಿಗಾರ ಹೇಳಿದ್ದಾರೆ. ಕಾದಂಬರಿ ಪೂರ್ವಾರ್ಧದ ಉದ್ದೇಶಿತ ಗೊಂದಲಕ್ಕೆ ಉತ್ತರಾರ್ಧದ ನಿಖರ ಉತ್ತರ ಜಿ.ಎಸ್.ಭಟ್ಟರನ್ನು ಓರ್ವ ಉತ್ತಮ ಕಾದಂಬರಿಗಾರನ ಸಾಲಿಗೆ ತಂದು ನಿಲ್ಲಿಸುತ್ತದೆ. ತನ್ನ ಎಪ್ಪತ್ತಾರರ ಹರೆಯ ಅದರಲ್ಲೂ ಆಕಸ್ಮಿಕ ವೈಕಲ್ಯದ ಮಧ್ಯೆ ವಾತ್ಸಯನ ಮತ್ತು ನಮ್ಮ ಸುತ್ತಲಿನ ಅಗೋಚರ ಆದರೆ ಗೋಚರ ವಸ್ತುವನ್ನಿರಿಸಿ ಸಹಜ ಅಭಿವ್ಯಕ್ತಿಯಲ್ಲಿ ಕಾದಂಬರಿ ರಚಿಸಿರುವುದು ಜಿ.ಎಸ್.ಭಟ್ಟರ ಅಧ್ಯಯನ ಮತ್ತು ಬದುಕಿನ ಉತ್ಸಾಹದ ಪರಿಯನ್ನು ಪರಿಚಯಿಸುತ್ತದೆ. ಎಲ್ಲೂ ಗಡಿ ಮೀರದ, ಅಶ್ಲೀಲವೆಂದೆಣಿಸದ, ಪ್ರಕೃತಿ ನಿಯಮಕ್ಕೆ ಧಕ್ಕೆ ಬಾರದ ರೀತಿಯ ವಿವರಣೆ ಈ ಕಾದಂಬರಿಯದು. ಮನುಷ್ಯ ಸಂಬಂಧಗಳ ನೆಲೆಯಲ್ಲಿ ಕಾಮದ ಬಳಕೆ,  ದುರ್ಬಳಕೆ ಹೇಗೆ? ಏನು? ಎನ್ನುವ ಚರ್ಚೆಗೆ ಈ ಕಾದಂಬರಿಯಲ್ಲಿ ಖಚಿತ ಉತ್ತರವಿದೆ. 

About the Author

ಜಿ.ಎಸ್. ಭಟ್

ಜಿ.ಎಸ್. ಭಟ್ ಅವರು  ಉತ್ತರ ಕನ್ನಡ ಜಿಲ್ಲೆಯವರು. ಇತಿಹಾಸ ಸ್ನಾತಕೋತ್ತರ ಪದವೀಧರರು. ಪತ್ರಕರ್ತರಾಗಿ ತಮ್ಮ ವೃತ್ತಿ ಬದುಕನ್ನು ಆರಂಭಿಸಿದ ಇವರು ಮೈಸೂರು ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಗಳಲ್ಲಿ ಹಲವಾರು ವಿಶ್ವಕೋಶಗಳ ಯೋಜನೆಗಳಿಗೆ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ “ಕರ್ನಾಟಕ ಗ್ರಾಮ ಚರಿತ್ರೆಕೋಶ'ದ ಸಂಪಾದಕರಾಗಿ ಸೇವೆ ಸಲ್ಲಿಸು ತ್ತಿದ್ದಾರೆ. 20 ಕ್ಕೂ ಅಧಿಕ ಮಹನೀಯರ ಜೀವನ ಚರಿತ್ರೆಗಳು, ಜಾನಪದ ಕ್ಷೇತ್ರಕ್ಕೆ ಸಂಬಂಧಿಸಿದ 15 ಕೃತಿಗಳನ್ನು  ರಚಿಸಿದ್ದಾರೆ. ಹಲವಾರು ಸಂಘ ಸಂಸ್ಥೆಗಳಲ್ಲಿ ಹಾಗೂ ಜನಪರ ಚಳವಳಿಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಂಡಿರುವ ಇವರಿಗೆ  ಅಸಂಖ್ಯಾತ ಸನ್ಮಾನ-ಪುರಸ್ಕಾರಗಳು ಸಂದಿವೆ. ಸಂಸ್ಕೃತಿ ...

READ MORE

Related Books