ತೀರ್ಮಾನ ನಿಮ್ದೆ !?

Author : ಹೊನ್ನಶೆಟ್ಟಿಹಳ್ಳಿ ಗಿರಿರಾಜ್

Pages 132

₹ 80.00
Year of Publication: 2010
Published by: ಹೊನ್ನಶೆಟ್ಟಿಹಳ್ಳಿ ಗಿರಿರಾಜ್
Address: 2ನೇ ಹಂತ, ಕೆ.ಎಚ್.ಬಿ ಕಲೋನಿ, ಕುವೆಂಪು ನಗರ,ಮೈಸೂರು

Synopsys

ಹೊನ್ನಶೆಟ್ಟಿಹಳ್ಳಿ ಗಿರಿರಾಜ್ ಅವರು ಗ್ರಾಮೀಣ ಪ್ರದೇಶದ ನೋವು, ನಲಿವು, ಮುಗ್ಧತೆ, ಮೂಢನಂಬಿಕೆಗಳನ್ನು ತಮ್ಮ ಕಾದಂಬರಿಗಳಲ್ಲಿ ಈಗಾಗಲೇ ವಿಶ್ಲೇಷಿಸುತ್ತಾ ಬಂದಿದ್ದಾರೆ. ಈ ಕಾದಂಬರಿಯಲ್ಲಿ ಗ್ರಾಮ ರಾಜಕಾರಣದ ಕ್ರೂರಮುಖವನ್ನು ಯಾವುದೇ ಮುಚ್ಚುಮರೆಯಿಲ್ಲದೆ ವಿವರಿಸಿದ್ದಾರೆ. ಗ್ರಾಮದ ಯಜಮಾನನಿಂದ ಹೆಣ್ಣೊಬ್ಬಳು ದೌರ್ಜನ್ಯಕ್ಕೆ ಒಳಗಾದಾಗ ಅದರ ಸುತ್ತ ನಡೆಯುವ ಹೊಲಸು ರಾಜಕಾರಣದ ಕುರಿತು ಸ್ಪಷ್ಟಪಡಿಸಿದ್ದಾರೆ. ಗ್ರಾಮೀಣ ಜನರ ನೈತಿಕತೆ, ಪ್ರಾಮಾಣಿಕತೆಗಳು ಅಧಿಕಾರದ ಲಾಲಸೆಯಲ್ಲಿ , ರಾಜಕೀಯದ ಮೇಲಾಟದಲ್ಲಿ ಹೇಗೆ ಮೂಲೆಗುಂಪಾಗುತ್ತವೆ ಎಂಬುದನ್ನು ಒತ್ತಿ ಹೇಳಿದ್ದಾರೆ. ಕಲಾತ್ಮಕ ಕಾರಣಗಳಿಗಾಗಿಯೂ ಕೃತಿ ಗಮನ ಸೆಳೆಯುತ್ತದೆ. 

About the Author

ಹೊನ್ನಶೆಟ್ಟಿಹಳ್ಳಿ ಗಿರಿರಾಜ್

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದವರಾದ ಹೊನ್ನಶೆಟ್ಟಿಹಳ್ಳಿ ಗಿರಿರಾಜ್ ಅವರು ಕತೆಗಾರ. ಸಾಹಿತ್ಯ, ಶಿಕ್ಷಣ, ಸಂಘಟನೆಗಳಲ್ಲಿ ಆಸಕ್ತಿ ಹೊಂದಿರುವ ಹೊನ್ನಶೆಟ್ಟಹಳ್ಳಿ ಗಿರಿರಾಜ್ ಅವರದು ವೈವಿಧ್ಯಮಯ ಸಾಧನೆ, ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ಉತ್ತಮ ಶಿಕ್ಷಣ ತಜ್ಞರೆಂಬ ಹೆಸರು ಪಡೆದಿದ್ದಾರೆ. ಕಲೆ, ಸಾಹಿತ್ಯ, ನಾಟಕ, ನಟನೆ, ನಿರ್ದೇಶನ, ಸಂಘಟನೆ, ಸೇವೆ, ತೋಟಗಾರಿಕಗಳಲ್ಲಿ ಆಸಕ್ತರಾಗಿರುವ ಅವರು ನಿಸರ್ಗ, ಚಾಳೀಸು, ಆಯ್ದ ಕಥೆಗಳು ಮುಂತಾದ ಕತಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ನನ್ನ ನಿನ್ನೊಳಗೆ, ನನ್ನ ಪ್ರೀತಿಯ ಹುಡುಗಿ, ಪ್ರಣಯ ಗೀತೆಗಳು ಮುಂತಾದವು ಇವರ ಕವನ ಸಂಕಲನಗಳು. ಸೌರಭ, ಮೂವರು ಮಿತ್ರರು, ನೆಂಬ ಪಟೇಲನೂ ಬಂಡ ಪ್ರಸಂಗವೂ, ಮಹಾಚೈತ್ರವೆ ...

READ MORE

Related Books