ಒಂದು ಕೈಫಿಯತ್

Author : ಚಂದ್ರಕಾಂತ ಕುಸನೂರ

Pages 120

₹ 60.00
Year of Publication: 2007
Published by: ಪ್ರಗತಿ ಗ್ರಾಫಿಕ್ಸ್
Address: 119, 3ನೆಯ ತಿರುವು, 8ನೆಯ ಮುಖ್ಯ ರಸ್ತೆ, ಆರ್.ಪಿ.ಸಿ. ಬಡಾವಣೆ, ಬೆಂಗಳೂರು - 560 040
Phone: 08023409512

Synopsys

ಚಂದ್ರಕಾಂತ ಕುಸನೂರರ ಅವರ `ಒಂದು ಕೈಫಿಯತ್' ಕೃತಿಯು ಕಾದಂಬರಿಯಾಗಿದೆ. ಕುಸನೂರರ ಮೂಲಭೂತ ಕಾಳಜಿ ಮನುಷ್ಯನನ್ನು ಎಲ್ಲದರಿಂದ ಲಿಬರೇಟ್ ಮಾಡಿಯೂ ಅವನ ಜೀವನಾಸಕ್ತಿಯನ್ನು ಸಾಯಿಸದೇ, ಸಂನ್ಯಾಸಿಯಾಗಿಸದೇ ಬದುಕಿನೊಳಗೇ ಇರಿಸಿ ಈ ಶೋಧವನ್ನು ನಡೆಸಬೇಕೆನ್ನುವುದು. ಒಂದು ಅರ್ಥದಲ್ಲಿ ಇಲ್ಲಿರುವುದು ಒಂದು ಸಂಘರ್ಷ ಎನ್ನಬಹುದು. ಈ ಸಂಘರ್ಷ ಸಂನ್ಯಾಸವನ್ನು ಪರ್ಯಾಯವಾಗಿ ಸ್ವೀಕರಿಸದ ಆದರೆ ಬದುಕಿನಲ್ಲಿ ತನ್ಮಯತೆಯಿಂದ ತೊಡಗಿಕೊಳ್ಳಲಾರದ, ಎಡಬಿಡಂಗಿಗಳೆಂದು ಸುಲಭವಾಗಿ ಕರೆದುಬಿಡಬಹುದಾದ ಎಲ್ಲಾ ಮಧ್ಯಮವರ್ಗದ ಸಾಮಾನ್ಯ ಗ್ರಹಸ್ಥನೊಬ್ಬನ ಮನಸ್ಸಿನಲ್ಲೂ ಬದುಕಿನ ಒಂದಲ್ಲಾ ಒಂದು ಘಟ್ಟದಲ್ಲಿ ನಡೆದೇ ಇರುವಂಥದ್ದು. ಇದರ ಮೂಲ ಇರುವುದು ಭಗವದ್ಗೀತೆಯಲ್ಲೇ. ಕರ್ಮಣ್ಯೇವ ಅಧಿಕಾರಸ್ತೇ ಮಾ ಫಲೇಶು ಕದಾಚನ ಎನ್ನುವ ವಾಕ್ಯದಲ್ಲೇ ಇರುವ ಒಂದು ವೈರುಧ್ಯವಿದು. ಫಲಾಪೇಕ್ಷೆಯಿಲ್ಲದೆ ಕರ್ಮ ಮಾಡು ಎನ್ನುವಲ್ಲಿ ಅಂಥ ಕರ್ಮ ತನಗೆ ಬೇಕಾದ ಸ್ಫೂರ್ತಿಯನ್ನು, ಉತ್ತೇಜನವನ್ನು, ಉತ್ಕಟತೆಯನ್ನು ಎಲ್ಲಿಂದ ಪಡೆಯುತ್ತದೆ ಎನ್ನುವುದು ಪ್ರಶ್ನೆ. ಒಂದು ಯಂತ್ರ ಇದನ್ನು ಅತ್ಯಂತ ನಿಜವಾಗಿ ಮಾಡಬಲ್ಲದು. ಆದರೆ ಮನುಷ್ಯ ಮಾತ್ರದವನಿಗೆ ಅದು ಸಾಧ್ಯವೆ? ಅಂಥ ಒಂದು ಬದುಕಿನ ಸಾರ್ಥಕ್ಯ ಮತ್ತು ಅರ್ಥವೇನು? ಅದನ್ನು ಬದುಕಲೇಬೇಕಾದ ಅನಿವಾರ್ಯ ಯಾವುದು? ಎಲ್ಲವನ್ನೂ ಕೃಷ್ಣನಿಗೆ ಅರ್ಪಿಸಬಹುದು, ಅರ್ಜುನನಿಗೆ ಅದು ಸಾಧ್ಯ ಯಾಕೆಂದರೆ ಕೃಷ್ಣ ಅವನಿಗೆ ಒಂದು ಅಮೂರ್ತ ಸತ್ಯವಲ್ಲ. ನಾವು, ಅಲ್ಲಲ್ಲಿ ಅವನನ್ನು ನಂಬುತ್ತ ಅಲ್ಲಲ್ಲಿ ಅವನಿಲ್ಲ ಎನ್ನುವುದನ್ನು ಅನುಭವಿಸುತ್ತ ಬದುಕುತ್ತಿರುವವರು ಎಂದು ಈ ಕೃತಿ ಹೇಳುತ್ತದೆ. 

About the Author

ಚಂದ್ರಕಾಂತ ಕುಸನೂರ
(21 October 1931 - 18 April 2020)

ಕನ್ನಡದ ಖ್ಯಾತ ಸಾಹಿತಿ, ರಂಗಕರ್ಮಿ ಚಂದ್ರಕಾಂತ ಕುಸನೂರು ಮೂಲತಃ ಕಲಬುರಗಿಯ ಕುಸನೂರಿನವರು. (ಜನನ: 1931ರ ಅಕ್ಟೋಬರ್ 21) ಎಂ.ಎ,  ಬಿ.ಇಡಿ ಪದವೀಧರರು. ಕಲಬುರ್ಗಿ ಹಿಂದಿ ಶಿಕ್ಷಣ ತರಬೇತಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಲಬುರ್ಗಿಯಲ್ಲಿ ರಂಗ ಮಾಧ್ಯಮ ಎಂಬ ನಾಟಕ ಸಂಸ್ಥೆಯನ್ನು ಸ್ಥಾಪಿಸಿ, ಕನ್ನಡದಲ್ಲಿ ವಿಭಿನ್ನ ಮಾದರಿಯ ನಾಟಕಗಳನ್ನು ರಚಿಸಿದ್ದಾರೆ. ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿದ್ದು, ಆನಿ ಬಂತಾನಿ, ರಿಹರ್ಸಲ್, ರತ್ತೋ ರತ್ತೋ ರಾಯನ ಮಗಳೇ, ದಿಂಡಿ, ವಿದೂಷಕ, ಹಳ್ಳಾ ಕೊಳ್ಳಾ ನೀರು ನಾಟಕಗಳನ್ನು ರಚಿಸಿದ್ದಾರೆ, ಜೊತೆಗೆ, ನಂದಿಕೋಲು ಎನ್ನುವ ಕಾವ್ಯ ಸಂಕಲನ, ಮಾಲತಿ ಮತ್ತು ನಾನು, ಯಾತನಾ ಶಿಬಿರ, ಗೋಹರಜಾನ್, ...

READ MORE

Reviews

ಒಂದು ಕೈಫಿಯತ್ ಕೃತಿಯ ವಿಮರ್ಶೆ(ನರೇಂದ್ರ ಪೈ ಬ್ಲಾಗ್)

Related Books