ಇದ್ದೇನಯ್ಯಾ ಇಲ್ಲದಂತೆ

Author : ಶಶಿಕಲಾ ವೀರಯ್ಯಸ್ವಾಮಿ

Pages 312

₹ 200.00
Year of Publication: 2014
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 7353530805 / 080 - 20161913

Synopsys

ಶಶಿಕಲಾ ವೀರಯ್ಯಸ್ವಾಮಿ ವಸ್ತ್ರದ ರವರ ಅವ್ವ ಪ್ರಶಸ್ತಿ ಪುರಸ್ಕಾರ ಹಾಗೂ ರಾಷ್ಟ್ರಕೂಟ ಸಾಹಿತ್ಯ ಶ್ರೀ ಪುರಸ್ಕಾರ ಪಡೆದ ಕಾದಂಬರಿ "ಇದ್ದೇನಯ್ಯಾ ಇಲ್ಲದಂತೆ." ನೀಲವ್ವ..ನೀಲೂತಾಯಿಯ ಜೀವನದ ಕ್ಷಣಕ್ಷಣದ ನೈಜಘಟನೆಗಳ ಅನುಭವ ವೇದನೆ, ವೇದನೆಯೊಳಗಿನ ಜೀವನ ಪ್ರೀತಿಯ ಕುತೂಹಲ, ಕುತೂಹಲದೊಂದಿಗಿನ ಸಂಗ್ರಾಮವೇ ಈ ಕಾದಂಬರಿ. 

ಕಾದಂಬರಿಯ ಭಾಷೆ ಉತ್ತರ ಕರ್ನಾಟಕದಾಗಿದ್ದು ಬಹಳ ಆಪ್ತವಾದ ಗ್ರಾಮ್ಯಶೈಲಿ. ಪದಪದಗಳು ಅರ್ಥಪೂರ್ಣ ಚಿತ್ರಿಕೆಗಳು. ಈ ಕಾದಂಬರಿಯಲ್ಲಿ ಬರುವ ಜಾತ್ರಿ, ಹಬ್ಬ, ಸಂತಿ, ಹೊಲ, ತೋಟ, ಬಾವಿ, ಕೆರೆ, ಹೊಳೆ ನದಿ, ರಸ್ತೆ, ಬಸ್ಸು, ರೈಲು, ವಿಮಾನ, ಮನಿ, ಶಾಲೆ, ಕಾಲೇಜು, ಸಮುದ್ರ, ಸಾಹಿತ್ಯ, ಕರಾವಳಿ, ಬಯಲುಸೀಮೆ, ಸಮ್ಮೇಳನ, ಮಠ, ಮಂದಿರ, ಸಂಬಂಧಗಳು, ತರತರದ ಅಡಿಗೆಗಳು, ಹಳ್ಳಿ ಆಟಗಳ ವಿವರಗಳು ಕಣ್ಣಿಗೆ ಕಟ್ಟುವಂತಿವೆ. ಇಡೀ ಕರ್ನಾಟಕವನ್ನೆ ಶಶಿಕಲಾ ಅವರು ಕೂತಲ್ಲೆ ದರ್ಶಿಸುವಂತೆ ಬರೆದಿದ್ದಾರೆ.

ಬದುಕು ಸೋಲಲಿಕ್ಕಲ್ಲ ಅಂತ ನೀಲವ್ವನ ಹಠವಾದರೆ, ವಿಧಿ ನಾ ಸೋಲಿಸಿಯೇ ತೀರುತ್ತೇನೆ ಅನ್ನೋ ಹಠಕ್ಕೆ ಬಿದ್ದಂತೆ ಪದೇ ಪದೇ ನೀಲಕ್ಕನನ್ನುಸೋಲಿಸುತಿತ್ತು. ಪದೇ ಪದೇ ನೀಲಕ್ಕನ ಬದುಕಿನ ಎಲ್ಲಾ ಸುಖ ನೆಮ್ಮದಿಗಳನ್ನು ಕಿತ್ತುಕೊಂಡು ಕೆಂಗಡಿಸೊ ಅತಿರೇಕದ ದೇವರಾಟವೇ ಈ ಕಾದಂಬರಿ.

About the Author

ಶಶಿಕಲಾ ವೀರಯ್ಯಸ್ವಾಮಿ
(23 January 1948)

ಕವಯತ್ರಿ ಶಶಿಕಲಾ ಸ್ವಾಮಿ ಅಥವಾ ಶಶಿಕಲಾ ವೀರಯ್ಯಸ್ವಾಮಿ ಎರಡೂ ಹೆಸರುಗಳಿಂದಲೂ ಚಿರಪರಿಚಿತರಾಗಿರುವ ಇವರು ಜನಿಸಿದ್ದು 1948 ಜನವರಿ 23ರಂದು. ವಿಜಯಪುರ ಜಿಲ್ಲೆ ಸಿಂದಗಿ ಇವರ ಹುಟ್ಟೂರು. ತಾಯಿ ಅನ್ನಪೂರ್ಣದೇವಿ. ತಂದೆ ಸಿದ್ದಲಿಂಗಯ್ಯ. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಉಪನ್ಯಾಸಕಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಪ್ರಸ್ತುತ ಬೀದರ್‌ನಲ್ಲಿ ನೆಲೆಸಿದ್ದಾರೆ.  ಕಥೆ, ಕವನ ರಚನೆ ಹಾಗೂ ಸಂಪಾದನೆಯಲ್ಲಿ ತೊಡಗಿಸಿಕೊಂಡಿರುವ ಇವರ ಪ್ರಮುಖ ಕೃತಿಗಳೆಂದರೆ ಗುಬ್ಬಿಮನೆ, ಪ್ರಶ್ನೆ, ಜೀವ ಸಾವುಗಳ ನಡುವೆ, ಹೆಂಗ ಹೇಳಲಿ ಗೆಳತಿ (ಕವನ ಸಂಕಲನ) ಶ್ರೀ ಗುರುಸಿದ್ದೇಶ್ವರ ಚರಿತ್ರೆ (ಜೀವನ ಚರಿತ್ರೆ), ಅಪ್ಪ ...

READ MORE

Related Books