ನಾನು ನಾನೇನಾ

Author : ಟಿಎನ್ನೆಸ್

Pages 128

₹ 160.00




Year of Publication: 2023
Published by: ಕದಂಬ ಪ್ರಕಾಶನ
Address: ನಂ.834, 62ನೆ ಅಡ್ಡರಸ್ತೆ, ಕುಮಾರಸ್ವಾಮಿ ಲೇಔಟ್, 1ನೇ ಹಂತ, ಬೆಂಗಳೂರು-78

Synopsys

‘ನಾನು ನಾನೇನಾ’ ಟಿಎನ್ನೆಸ್ ಅವರ ರಚನೆಯ ಕಾದಂಬರಿಯಾಗಿದೆ. ಮನುಷ್ಯ ತನ್ನನ್ನು ತಾನು ಕಂಡುಕೊಳ್ಳಬೇಕು. ಬೇರೆ ಗ್ರಹಗಳಿಗೆ ಹೋಗುವುದಕ್ಕಿಂತ, ತನ್ನೊಳಗೆ ತಾನು ತೂರಿ ಹೋಗುವ ಪ್ರಯತ್ನ ಮಾಡಬೇಕು. ಪರಮಾತ್ಮನನ್ನು ನೋಡುವ ಹಂಬಲಕ್ಕಿಂತ, ತನ್ನ ಆತ್ಮವನ್ನೊಮ್ಮೆ ಭೇಟಿ ಮಾಡುವ ಹುಮ್ಮಸ್ಸಿರಬೇಕು. ಅಗಾಧ ಪಾಂಡಿತ್ಯವಿದ್ದೂ, ಏನೂ ಗೊತ್ತಿರದಂತೆ ಮೂಕನಾಗಿರಬೇಕು. ಜಾತ್ರೆಯ ಜನಜಂಗುಳಿ. ದೇವಾಲಯದ ಘಂಟಾಘೋಷ, ಸಿಡಿಲು ಗುಡುಗಿನ ಆರ್ಭಟದ ಮಧ್ಯೆಯೂ ತನ್ನ ಹೃದಯದ ಢಕ್-ಢಕ್ ಎಂಬ ಸಣ್ಣ ಮಿಡಿತ ತನ್ನ ಕಿವಿಗೆ ಕೇಳಸುವಂತಿರಬೇಕು. ಹೌದು! ನಾವೆಲ್ಲ ಆಗಾಗ ಒಮ್ಮೆ ಈ ಸ್ಥಿತಿಗೆ ಜಾರುತ್ತಿರಬೇಕು, ಮೂಕನಾಗಿರಬೇಕು, ಏಕಾಂಗಿಯಾಗಿರಬೇಕು. ಮೌನಿಯಾಗಿರಬೇಕು, ಮೇಲಾಗಿ ತಾನಾರು? ಎಂದು ತನ್ನನ್ನು ತಾನು ಅನ್ವೇಷಿಸಿಕೊಳ್ಳಬೇಕು. ತನ್ನನ್ನು ತಾನು ಅನ್ವೇಷಿಸಿಕೊಳ್ಳಲಿಕ್ಕಾದರೂ ಬಲವಂತವಾಗಿಯಾದರೂ ನಮ್ಮ ಮನಸ್ಸನ್ನು ಮೌನಕ್ಕೆ ತಳ್ಳಬೇಕು. ದೇಹ ಎಚ್ಚರವಾಗಿದ್ದಲೇ, ಪ್ರಜ್ಞೆಯನ್ನು ನಿದ್ರಾವಸ್ಥೆಗೆ ದೂಡಬೇಕು. ಮೈ ಮನಗಳನ್ನು ಹಗುರವಾಗಿ, ನೀಲ ನಭದಲ್ಲಿ ಸ್ವಚ್ಛಂದದಲ್ಲಿ ಹಾರಾಡುವ ಹಕ್ಕಿಗಳಂತೆ ಇರಬೇಕು. ಆತ್ಮವನ್ನು ಒಂಟಿತನದಿಂದ ಏಕಾಂತದೆಡೆಗೆ, ಮನಸ್ಸನ್ನು ಕಲ್ಮಶವಿಂದ ನಿರ್ಮಾನುಷ್ಯದೆಡೆಗೆ ಜಾಲಿಸಿಡಬೇಕು. ಉತ್ಕಟ ಆನಂದದ ತುತ್ತತುದಿಯನ್ನು ಮುಟ್ಟಿ, ಪ್ರಶಾಂತತೆಯ ಸಾಗರದ ಕಡಲ ತಡಿಯನ್ನು ಈಜಬೇಕು. ಈ ಮೂಲಕ ಪ್ರತಿಯೊಬ್ಬ ಮನುಜನೂ ತನ್ನನ್ನು ತಾನು ಸಾಕ್ಷಾತ್ಕರಿಸಿಕೊಳ್ಳಬೇಕು. ಅದೂ ಏಕಾಂತವಾಗಿ, ನಾನು-ಶೆಫಾಲಿ ಏಕಾಂತದಲ್ಲಿ ಈಗ ವಿಹರಿಸುತ್ತಿದ್ದೇವೆ.

About the Author

ಟಿಎನ್ನೆಸ್

ಟಿಎನ್ನೆಸ್ ಅವರು ಚಿತ್ರೋದ್ಯಮದ ಬಗ್ಗೆ ಅನೇಕ ಲೇಖನಗಳನ್ನು ಬರೆಯುವ ಮೂಲಕ ಚಿತ್ರರಂಗಗಳ ಆಸಕ್ತಿದಾಯಕ ವಿಚಾರಗಳನ್ನು ಓದುಗರಿಗೆ ತಲುಪಿಸುವ ಬರಹಗಾರ. ಅವರು chitrodyama.com ಎಂಬ ವೆಬ್‌ಸೈಟ್‌ ಅನ್ನು ನಿರ್ಮಿಸಿದ್ದಾರೆ. ಕೃತಿಗಳು: ಚಿತ್ರೋದ್ಯಮದ ಚಿತ್ತಾರಗಳು, ನಾನು ನಾನೇನಾ ...

READ MORE

Related Books