ಬಾಡದ ಹೂ

Author : ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)

Pages 226

₹ 150.00




Year of Publication: 1979
Published by: ಸುಧಾ ಎಂಟರ್ ಪ್ರೈಸಸ್

Synopsys

ಕಾದಂಬರಿಕಾರ್ತಿ ಸಾಯಿಸುತೆ ಸಾಮಾಜಿಕ ಕಾದಂಬರಿ ಬಾಡದ ಹೂ. ಪ್ರೀತಿ-ಪ್ರೇಮ ಈ ಜಗತ್ತಿನ ಬೆಚ್ಚಗಿನ ಭಾವ ಎನ್ನುವುದರಲ್ಲಿ ಯಾರ ಭಿನ್ನಾಭಿಪ್ರಾಯವು ಇರದು! ಅದೊಂದು ಅನುಭೂತಿ. ಅದನ್ನೆ ಕವಿಗಳು, ಸಾಹಿತಿಗಳು ತೀರಾ ವೈಭವಿಕರಿಸಿದರೂ ಅದು ಪೂರಾ ಸುಳ್ಳೇನು ಅಲ್ಲ. 'ಬಾಡದ ಹೂ' ಆಗಿನ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾದಾಗ ಓದುಗರಲ್ಲಿ ಒಂದು ರೀತಿಯ ಸಂಚಲನ. ಲೇಖಕಿಯ ಮೊಲದ ಕಾದಂಬರಿಗೆ ಇಂಥ ಅದ್ಭುತ ಸ್ವಾಗತ. ವ್ಯವಸ್ಥಾಪಕ ಸಂಪಾದಕರಾದ ಮ.ನ. ಮೂರ್ತಿಗಳು ಓದುಗರ ಮೆಚ್ಚಿಗೆ ಪೂರದ ಪತ್ರಗಳ ರಾಶಿಯನ್ನು ಮುಂದೆ ಹಾಕಿದ್ದರು. ಅಂದಿನ ಓದುಗರ ಮೆಚ್ಚಿಗೆಯೇ ಇಂದು ಉಳಿಸಿಕೊಂಡು ಹನ್ನೊಂದನೆ ಬಾರಿ ಅಚ್ಚಾಗಿದೆ. ಬೆಳ್ಳೆ ತೆರೆಯಲ್ಲು ಮಿನುಗಿದ 'ಬಾಡದ ಹೂ' ಯಶಸ್ಸನ್ನು ಚಲನಚಿತ್ರ ರಸಿಕರ ಪ್ರಶಸ್ತಿಯನ್ನು ಗಳಿಸಿಕೊಟ್ಟಿತ್ತು. ಇಂಥ 'ಬಾಡದ ಹೂ' ಕಾದಂಬರಿಯನ್ನು ನಮ್ಮ ಪ್ರಕಾಶನದ ಮೂಲಕ ಅಚ್ಚು ಮಾಡುತ್ತಿರುವುದು ಅತ್ಯಂತ ಸಂತೋಷದ ವಿಷಯ.

About the Author

ಸಾಯಿಸುತೆ (ರತ್ನಾ ಅಶ್ವತ್ಥನಾರಾಯಣ)
(20 August 1942)

ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ.  ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು. ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ...

READ MORE

Related Books