ಸುರಗಿತೊರೆ

Author : ಎಸ್. ಪಿ ವಿಜಯಲಕ್ಷ್ಮಿ

Pages 280

₹ 230.00




Year of Publication: 2021
Published by: ತೇಜು ಪಬ್ಲಿಕೇಷನ್
Address: #1014, 24ನೇ ಮುಖ್ಯ ರಸ್ತೆ, 16ನೇ ಕ್ರಾಸ್‌, ಬನಶಂಕರಿ ಎರಡನೇ ಹಂತ, ಬೆಂಗಳೂರು - 70
Phone: 9900195626

Synopsys

'ಸುರಗಿತೊರೆ' ಎಸ್‌.ಪಿ. ವಿಜಯಲಕ್ಷ್ಮಿ ಅವರ ಕಾದಂಬರಿಯಾಗಿದೆ. ಸಾಮಾಜಿಕವಾಗಿ ಅನೇಕ ಸ್ಥರಗಳಲ್ಲಿ ಬಿಜಿನೆಸ್, ರಾಜಕಾರಣ, ನಟರು ಹೀಗೆ ಹೆಸರಾಂತ ಪುರುಷರನೇಕರು ಪ್ರೀತಿಯ ದಾಂಪತ್ಯ ಕಟ್ಟಿಕೊಂಡರೂ, ಸುಂದರವಾದ ಸಂಗಾತಿ ಇದ್ದರೂ ಹೊರಗಿನ ಸಂಬಂಧ, ಮರುಮದುವೆ ಹೀಗೆಲ್ಲಾ ಮಾಧ್ಯಮಗಳಲ್ಲಿ ಓದಿದಾಗ, ಕಂಡಾಗ ಸಹಜವಾಗಿ ಹೆಣ್ಣಾದ ನನಗೆ ಆ ಪತ್ನಿಯರ ಮನಃಸ್ಥಿತಿ, ಅಳಲು, ಮಾನಸಿಕ ಯಾತನೆ ಅಂತರಂಗ ಕಲಕಿತು. ಇಂತಹ ಘಟನೆಗಳಿಗೆ ಕಾರಣಗಳು ಪುರುಷನ ಚಾಪಲ್ಯ, ಹಣ, ಅಧಿಕಾರದ ಅಮಲು, ಇನ್ನೊಂದು, ಮಗದೊಂದು ಎಂದು ನೂರು ನೆಪ. ಹಾಗಂತ ಪುರುಷರನ್ನು ಕಂಗಡಿಸುವ ಹೆಣ್ಣುಗಳೂ ಇಲ್ಲದಿಲ್ಲ. ಮೇಲೆ ಹೇಳಿದ ಪರಿಚಿತರ ವಿವಾಹ ವಿಚ್ಛೇದನೆ ಕುರಿತು ಆಲೋಚಿಸುವಾಗ ಅದೊಂದು ನನ್ನ ಕಾದಂಬರಿಯ ವಸ್ತುವಿಗೆ ಎಳೆಯಾಗಿ ಹೊಳೆಯಿತು. ಶೋಷಿತ ಹೆಣ್ಣಿನ ಅಂತರಂಗವನ್ನು ಹೊಕ್ಕು, 'ಎಷ್ಟೋ ವರ್ಷಗಳ ವಿವಾಹವೂ ನಿಷ್ಬಲವಾಗುವುದೇಕೆ'? ಎನ್ನುವ ಕಥೆ ಬರೆಯುವ ತೀವ್ರ ತುಡಿತ ಹೊತ್ತಿತು. "ಸರಸ ಜನನ ವಿರಸ ಮರಣ ಸಮರಸವೇ ಜೀವನ " ಹೀಗೊಂದು ಉಕ್ತಿಯ ಸಾರುವ ಕಥೆಗೆ ವೇದಿಕೆ ಸಿದ್ಧವಾಯಿತು. ಹೀಗೆ ಸುರಗಿತೊರೆ ಕಾದಂಬರಿ ಸಿದ್ಧವಾಯಿತು ಎನ್ನುತ್ತಾರೆ ಲೇಖಕಿ ಎಸ್. ಪಿ. ವಿಜಯಲಕ್ಷ್ಮಿ.

About the Author

ಎಸ್. ಪಿ ವಿಜಯಲಕ್ಷ್ಮಿ

ಎಸ್. ಪಿ ವಿಜಯಲಕ್ಷ್ಮಿ ಅವರು ಮೂಲತಃ ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದವರು. ಅವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ನರಸಿಂಹರಾಜಪುರದಲ್ಲಿ ಮತ್ತು ಪಿಯುಸಿ ನಂತರದ ವಿದ್ಯಾಭ್ಯಾಸವನ್ನು ಭದ್ರಾವತಿಯ ಭದ್ರಾಕಾಲೇಜಿನಲ್ಲಿ ಪೂರೈಸಿದರು. ವಿಜಯ ಕರ್ನಾಟಕ, ಸುಧಾ, ತರಂಗ, ಕರ್ಮವೀರ, ತುಷಾರ, ಮಂಗಳ ಪತ್ರಿಕೆಗಳಿಗೆ ಕಥೆ, ಕವನ, ಮಹಿಳಾಲೇಖನ, ಪ್ರವಾಸ ಲೇಖನಗಳನ್ನು ಬರೆಯುತ್ತಿರುವೆ. ಕನ್ನಡ ರಾಜ್ಯೋತ್ಸವದ ಸುವರ್ಣಮಹೋತ್ಸವ ವರ್ಷದಲ್ಲಿ ಬಹಳಷ್ಟು ವೇದಿಕೆಗಳ ಹತ್ತಿಪ್ಪತ್ತು ಕವನಸ್ಪರ್ಧೆಗಳಲ್ಲಿ ಭಾಗವಹಿಸಿ, ಬಹುಮಾನ ಗಳಿಸಿದ್ದಾರೆ. "ಮಂಗಳ" ವಾರಪತ್ರಿಕೆಯಲ್ಲಿ ಮೂರು ವರ್ಷಗಳು ಬೇರೆ ಬೇರೆ ದೇಶಗಳ "ಪ್ರವಾಸ ಕಥನ" ನಿರಂತರ ಧಾರಾವಾಹಿಯಾಗಿ ಪ್ರಕಟವಾಗಿದೆ. ಕೃತಿಗಳು : ಚಿತ್ತ ತೂಗಿದಾಗ ಮತ್ತು ...

READ MORE

Related Books