ಅಳಿದು ಉಳಿದವರು

Author : ಸಿ. ನಂದಿನಿ

Pages 200

₹ 160.00




Year of Publication: 2020
Published by: ಎಸ್ ಎಲ್ ಎನ್ ಪಬ್ಲಿಷಿಂಗ್ ಹೌಸ್
Address: ಬೆಂಗಳೂರು

Synopsys

ಲೇಖಕಿ ಡಾ. ಸಿ. ನಂದಿನಿಯವರ ಕಾದಂಬರಿ ‘ಅಳಿದು ಉಳಿದವರು’. ಈ ಕಾದಂಬರಿಯಲ್ಲಿ ಪ್ರೇಮ ಪ್ರಣಯಗಳ ರಮ್ಯತೆ ಇಲ್ಲ. ವಾಸ್ತವದ ತೀವ್ರತೆ ಪ್ರಧಾನವಾಗಿರುವುದರಿಂದ ಭಾವನೆಗಳ ಆರ್ದ್ರತೆಯೂ ಸ್ಪಷ್ಟವಾಗಿ ಕಾಣುವುದಿಲ್ಲ. ಆದರೂ ಈ ಕಾದಂಬರಿಯು ಓದುಗನ ಆಸಕ್ತಿಯನ್ನು ಹೆಚ್ಚಿಸುತ್ತ, ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.

ಕೃತಿಯ ಬೆನ್ನುಡಿಯಲ್ಲಿ ಲೇಖಕಿಯೇ ಹೇಳಿರುವಂತೆ, ’ ಸದಾ ಸತ್ಯನಿಷ್ಠೆಯನ್ನು ಪ್ರತಿಪಾದಿಸುವುದರಿಂದ ನೋವು ದುರ್ಘಟನೆಗಳ ಸರಮಾಲೆಯೆನ್ನೇ ಹೇರಿಕೊಂಡು ಜೀವಿಸುವುದಷ್ಟೇ ಪಾಲಿಗೆ ಉಳಿಯುವುದು. ಕಲ್ಪನೆ, ಕನಸುಗಳಿಗೂ ವಾಸ್ತವಕ್ಕೂ ಇರುವ ಕಂದಕವನ್ನು ಮೀರಿದ ಭೀಕರತೆಯೇ ಜೀವನ. ಆದರೂ ಜಿಜ್ಞಾಸೆಯನ್ನು ದೂರ ಸರಿಸಿ ಅದಮ್ಯ ಹಂಬಲ ಆಕಾಂಕ್ಷಿಯಿಂದ ಜೀವಿಸುವುದೇ ಈ ಕತೆಯ ಹಂದರ” ಎಂದಿದ್ದಾರೆ.

About the Author

ಸಿ. ನಂದಿನಿ
(16 August 1975)

ಸಿ. ನಂದಿನಿ ಅವರು ದಿನಾಂಕ 16.8.1975ರಂದು ಹುಬ್ಬಳ್ಳಿಯಲ್ಲಿ ಜನಿಸಿದರು. ಇವರ ತಂದೆ ಕೆ. ಎಂ.ಚಂದ್ರಶೇಖರ. 3 ನೇ ತರಗತಿವರೆಗೂ ಪುತ್ತೂರಿನಲ್ಲಿ ವಿದ್ಯಭ್ಯಾಸವನ್ನು ಮಾಡಿದ ಇವರು, ಮಂಗಳೂರಿನಲ್ಲಿ ದ್ವಿತೀಯ ಪಿಯುಸಿವರೆಗಿನ ಶಿಕ್ಷಣ ಪೂರ್ತಿಗೊಳಿಸಿದರು. ಎಂ.ಎಸ್ಸಿ (ಮೆಡಿಕಲ್ ಮೈಕ್ರೋಬಯಲಜಿ ) ವಿನಾಯಕ ಮಿಷನರಿಸ್. ಸೇಲಂನಲ್ಲಿ ಮಾಡಿದ ನಂತರ H. I. V ರೋಗಿಗಳ ಕುರಿತಾಗಿ ಪಿ. ಹೆಚ್. ಡಿ ಪಡೆದರು. ಪ್ರಸ್ತುತ ರಾಜರಾಜೇಶ್ವರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರಾದ್ಯಾಪಕಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಶಸ್ತಿಗಳು:- ಲೇಖಕಿ ಸಂಘ ದಿಂದ ತ್ರಿವೇಣಿ ಪ್ರಶಸ್ತಿ, ಗುಲ್ಬರ್ಗ ಯೂನಿವರ್ಸಿಟಿ ಯಿಂದ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಪರಿಷತ್ ನ ...

READ MORE

Related Books