ಡಾ. ವೀಣಾ

Author : ದೇವುಡು ನರಸಿಂಹಶಾಸ್ತ್ರಿಗಳು

Pages 160

₹ 90.00




Year of Publication: 2012
Published by: ಹೇಮಂತ ಸಾಹಿತ್ಯ
Phone: 91 94484 67728

Synopsys

ಲೇಖಕ ದೇವುಡು ನರಸಿಂಹಶಾಸ್ತ್ರಿಗಳು ಅವರ ಕಾದಂಬರಿ ಡಾ. ವೀಣಾ . ಈ ಗ್ರಂಥದಲ್ಲಿ ಒಂದು ಹೊಸತನವಿದೆ. ಅದು ಹೆಣ್ಣುತನ. ಸಮಾಜದ ಸುಖ ದುಃಖಗಳು ಯಾರನ್ನು ಅವಲಂಬಿಸಿವೆಯೋ, ಮುಂದಿನ ಆಗುಹೋಗುಗಳಿಗೆ ಯಾರು ಕಾರಣಳೋ ಆ ಹೆಣ್ಣು ಹೇಗಿರಬೇಕು? ಉತ್ತರ ಪುಸ್ತಕದಲ್ಲಿದೆ.

About the Author

ದೇವುಡು ನರಸಿಂಹಶಾಸ್ತ್ರಿಗಳು
(29 December 1886 - 27 October 1962)

’ಮಹಾಕಾದಂಬರಿಕಾರ’ ಎಂದು ಹೆಸರುವಾಸಿಯಾಗಿದ್ದ ದೇವುಡು ನರಸಿಂಹಶಾಸ್ತ್ರಿಗಳು ಶಿಕ್ಷಕರಾಗಿ, ಸಂಪಾದಕರಾಗಿ, ನಟರಾಗಿ, ವಿಮರ್ಶಕರಾಗಿ ತಮ್ಮ ಪ್ರತಿಭೆ- ಪಾಂಡಿತ್ಯ ಮೆರೆದಿದ್ದರು. ನರಸಿಂಹ ಶಾಸ್ತ್ರಿಗಳು ಜನಿಸಿದ್ದು ಮೈಸೂರಿನ ರಾಜಪುರೋಹಿತರ ಮನೆತನದಲ್ಲಿ.  1896ರ ಡಿಸೆಂಬರ್‌ 26ರಂದು ಜನಿಸಿದ ಅವರು ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡರು. ತಾಯಿಯ ಆಸರೆಯಲ್ಲಿ ಬೆಳೆದ ನರಸಿಂಹಶಾಸ್ತ್ರಿಗಳು ತೀಕ್ಷ್ಣ ಬುದ್ಧಿಯುಳ್ಳವರಾಗಿದ್ದರು. ಹನ್ನೆರಡನೆಯ ವಯಸ್ಸಿನಲ್ಲಿಯೇ ರಾಮಾಯಣ, ಮಹಾಭಾರತದಂತಹ ಕಾವ್ಯ ಮತ್ತುಭಾಗವತದಂತಹ ಪುರಾಣಗಳನ್ನು ಓದಿ ಅರಿತಿದ್ದರು. ಹದಿನೈದನೆಯ ವಯಸ್ಸಿನಲ್ಲಿಯೇ ಛಂದೋಬದ್ಧವಾಗಿ ಕಾವ್ಯ ರಚಿಸುವ ಹವ್ಯಾಸ ಬೆಳೆಸಿಕೊಂಡರು. ಸಾಂಪ್ರದಾಯಿಕ ವೈದಿಕ ವಿದ್ಯೆಯ ಜೊತೆಯಲ್ಲಿಯೇ ಬಿ.ಎ., ಎಂ.ಎ. ಪದವಿಯನ್ನು ಸಂಸ್ಕೃತ ಹಾಗೂ ಭಾರತೀಯ ತತ್ವಶಾಸ್ತ್ರದಲ್ಲಿ ಪಡೆದಿದ್ದರು. ಸರ್ವಪಲ್ಲಿ ...

READ MORE

Related Books