ಲೇಖಿಕಾ ಶೈಲಜಾ ಪ್ರಸಾದ್ ಅವರ ಕಾದಂಬರಿ. ಮಾನವೀಯ ಸಂಬಂಧಗಳನ್ನು ಮನೋವೈಜ್ಞಾನಿಕ ವಿಶ್ಲೇಷಣೆಯಡಿ ಚಿತ್ರಿಸಿರುವ ಇಲ್ಲಿಯ ಪಾತ್ರಗಳು, ಸನ್ನಿವೇಶಗಳು, ಕಥೆಯ ನಿರೂಪಣೆ ಶೈಲಿ ಓದುಗರ ಗಮನ ಸೆಳೆಯುತ್ತವೆ.
ಕಾದಂಬರಿಗೆ ಮುನ್ನುಡಿ ಬರೆದ ಸಾಹಿತಿ ಶೈಲಜಾ ಸುರೇಶ್ ‘ದಂಪತಿ (ಶ್ರೀಕಾಂತ-ಪುಷ್ಪಾ) ತಲೆದೋರಿರುವ ವೈಮನಸ್ಸು-ತಪ್ಪುಗ್ರಹಿಕೆಗಳನ್ನು ಅವರ ಮಗಳು (ಚಂದ್ರಿಕಾ) ಪರಿಹರಿಸಲು ಯತ್ನಿಸುವುದೇ ಇಲ್ಲಿಯ ಕಥಾ ವಸ್ತು. ಸಾಮಾನ್ಯವಾಗಿ ದಂಪತಿ ಮಧ್ಯೆ ತಲೆದೋರುವ ಸಮಸ್ಯೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಲೇಖಿಕಾ ಶೈಲಜಾ ಪ್ರಸಾದ್ ಅವರ ಮೊದಲ ಕಾದಂಬರಿ ಇದು. ಇಲ್ಲಿಯ ಬೆಳವಣಿಗೆಯನ್ನು ಕಾಣುವಾಗ ಅವರು ಉತ್ತಮ ಕಾದಂಬರಿಗಳನ್ನು ರಚಿಸಬಲ್ಲರು. ಕಥೆಯ ಎಳೆಗಳನ್ನು ಅಚ್ಚುಕಟ್ಟಾಗಿಸಿ, ಹಾಸುಹೊಕ್ಕಾಗಿಸಿ, ಚಿತ್ತಾರಗಳೊಂದಿಗೆ ನೇಯ್ಗೆಯ ಕೆಲಸ ಅಂದವಾಗಿ ಮಾಡಿದ್ದಾರೆ ’ ಎಂದು ಪ್ರಶಂಸಿಸಿದ್ದಾರೆ.
ಶೈಲಜಾ ಪ್ರಸಾದ್ ಅವರು ಮೂಲತಃ ಮೈಸೂರಿನ ಕಿಕ್ಕೇರಿಯವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವೀಧರರು. ಬೆಂಗಳೂರಿನ ಲೇಖಿಕಾ ಸಾಹಿತ್ಯ ವೇದಿಕೆಯ ಸದಸ್ಯರು. ಮಳೆ ನಿಂತ ಮೇಲೆ-ಕಥಾ ಸಂಕಲನ. ಬಾನಂಗಳದಲ್ಲಿ-ಪ್ರಬಂಧ ಸಂಕಲನ. ಅಗೋಚರ-ಇವರ ಕಾದಂಬರಿ. ಬೆಂಗಳೂರು ಆಕಾಶವಾಣಿಯಲ್ಲಿ ‘ಕರುಣಾಳು ಬಾ ಬೆಳಕೆ’ ಕಥೆ ವಾಚನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಲೇಖಿಕಾ ಸಾಹಿತ್ಯ ವೇದಿಕೆಯಿಂದ ಸನ್ಮಾನ, ಅಕ್ಕನ ಮನೆ ಪ್ರತಿಷ್ಠಾನದಿಂದ ರಾಜ್ಯ ಮಟ್ಟದ ದೇಸಿ ದಿಬ್ಬಣ ಪ್ರಶಸ್ತಿ-2020ರಲ್ಲಿ ಇವರ ಪ್ರಬಂಧಕ್ಕೆ ಬಹುಮಾನ, ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ತಿನಿಂದ ಸೇವಾ ರತ್ನ ಪ್ರಶಸ್ತಿ ಲಭಿಸಿದೆ. ...
READ MORE