ಮಹಾಸಂಗಮ

Author : ಲಕ್ಷ್ಮಣ ಕೌಂಟೆ

Pages 279

₹ 300.00




Year of Publication: 2019
Published by: ಬಸವಧರ್ಮ ಪ್ರಸಾರ ಸಂಸ್ಥೆ
Address: ಹಿರೇಮಠ ಸಂಸ್ಥಾನ, ಭಾಲ್ಕಿ, ಬೀದರ
Phone: 9880807864

Synopsys

‘ಮಹಾಮಣಿಹ’ ಮತ್ತು ‘ಮಹಾಯಾಣ’ ಕಾದಂಬರಿಗಳು ಒಂದೇ ಕಾದಂಬರಿಯ ಎರಡು ಭಾಗಗಳಾಗಿದ್ದು ಅವೆರಡನ್ನು ಸೇರಿಸಿ ಒಂದುಗೂಡಿಸಿದ ಪುಸ್ತಕ ರೂಪ ‘ಮಹಾಸಂಗಮ’. 12ನೇ ಶತಮಾನದ ಕಲ್ಯಾಣದ ಶರಣರಿಗೆ ಸಂಬಂಧಿಸಿದ ಬಹು ಮುಖ್ಯವಾದ ಘಟನಾವಳಿಗಳನ್ನು ಪುಸ್ತಕ ರೂಪದಲ್ಲಿ ಹಿಡಿದಿಡುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ. ಕಲ್ಯಾಣ ಶರಣರ ವಿಷಯ ವಸ್ತು ಮತ್ತು ಶರಣರ ಚಿಂತನೆಗಳಿಗೆ ಹೊಸ ರೂಪವನ್ನು ಕಾದಂಬರಿಯ ಮೂಲಕ ನೀಡಲಾಗಿದೆ.

About the Author

ಲಕ್ಷ್ಮಣ ಕೌಂಟೆ

ಕಾದಂಬರಿಕಾರ ಲಕ್ಷ್ಮಣ ಕೌಂಟೆಯವರು 1958 ಡಿಸೆಂಬರ್‌ 10 ರಂದು ಜನಿಸಿದರು. ಮೂಲತಃ ಗುಲಬರ್ಗದವರು. ರಂಗಭೂಮಿ ಅವರ ಅಭಿರುಚಿಯ ಕ್ಷೇತ್ರ. ಓದು, ಸಾಹಿತ್ಯ ರಚನೆ, ನಾಟಕ ಅವರ ಒಲವಿನ ಪ್ರವೃತ್ತಿ. ಅವರು ಬರೆದ ನಾಟಕ 'ಕಲೆಯ ಕೊಲೆ ಅರ್ಥಾತ್ ಕಲಾವಿದನ ಕಣ್ಣೀರು' ರಂಗ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಲೀಲಾತರಂಗ, ಸಂಚಲನ, ಅನುಪರ್ವ, ಸಮರ್ಪಿತ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ...

READ MORE

Related Books