ನಿರಂತರ

Author : ಕೆ.ಟಿ.ಗಟ್ಟಿ

Pages 238

₹ 170.00




Year of Publication: 2015
Published by: ವಸಂತ ಪ್ರಕಾಶನ
Address: ನಂ 360, 10ನೇ ಬಿ- ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಜಯನಗರ, ಬೆಂಗಳೂರು-11

Synopsys

‘ನಿರಂತರ’ ಕನ್ನಡದ ಬಹುಮುಖ್ಯ ಲೇಖಕ ಕೆ.ಟಿ.ಗಟ್ಟಿ ಅವರ ಕಾದಂಬರಿ. ವ್ಯಕ್ತಿಯೊಬ್ಬ ಸ್ವರ್ಗವನ್ನು ಹುಡುಕಿ ಹೊರಡುವ ಕತೆಯೇ ಇಲ್ಲಿಯ ವಸ್ತು. ಸದಾ ಸುಖಕ್ಕಾಗಿ, ನೆಮ್ಮದಿಗಾಗಿ ಸ್ವರ್ಗವನ್ನು ಹುಡುಕಲು ಹೊರಟ ವ್ಯಕ್ತಿಯೊಬ್ಬ ಕೊನೆಗೆ ಅಂಥಹದ್ದೊಂದು ಸ್ಥಳವನ್ನು ತಲುಪಿಯೂ ಬಿಡುತ್ತಾನೆ. ಅಲ್ಲಿ ತಾನಂದುಕೊಂಡ ಸುಖವನ್ನು ಕಂಡುಕೊಂಡನಾದರೂ ಮತ್ತೆ ತನ್ನ ಹಿಂದಿನ ಬದುಕು ಬೇಕೆನಿಸಿ, ಸಾಮಾನ್ಯ ಜೀವನಕ್ಕಾಗಿ ತುಡಿಯುತ್ತಾನೆ. ಇಂಥಹದ್ದೊಂದು ವಿಭಿನ್ನ ಕತೆಯನ್ನು ಒಳಗೊಂಡಿರುವ ಈ ಕಾದಂಬರಿ, ಮನುಷ್ಯನೊಳಗಿನ ನಿರಂತರ ಹುಡುಕಾಟದ ದಾರಿಗಳನ್ನೇ ಬದಲಿಸುವಷ್ಟು ಸೂಕ್ಷ್ಮವಾಗಿದೆ.

About the Author

ಕೆ.ಟಿ.ಗಟ್ಟಿ
(22 July 1938)

ಕಾದಂಬರಿಕಾರ, ಭಾಷಾತಜ್ಞ, ಸಮರ್ಥ ಪ್ರಾಧ್ಯಾಪಕರೆನಿಸಿದ ಕೆ.ಟಿ. ಗಟ್ಟಿಯವರು ಕಾಸರಗೋಡು ಸಮೀಪದ ಕೂಡ್ಲೂವಿನಲ್ಲಿ ಜನಿಸಿದರು. ತಂದೆ ಧೂಮಪ್ಪಗಟ್ಟಿಯವರು ಕೃಷಿಕರಾದರೂ ಯಕ್ಷಗಾನ ಕಲೆಯ ಬಗ್ಗೆ ಅಪಾರ ಒಲವಿದ್ದವರು. ತಾಯಿ ಪರಮೇಶ್ವರಿ ತುಳು-ಮಲಯಾಳಂ ಪಾಡ್ದನ ಹಾಡುಗಳನ್ನು ಕಲಿತವರು. ಉತ್ತಮ ಭಾಷೆ, ಆಕರ್ಷಕ ಶೈಲಿ, ಹೊಸ ಹೊಸ ವಸ್ತು, ಸರಳ ನಿರೂಪಣೆಗಳ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಮನೆ ಮಾತಾದ ಹಿರಿಯ ಕಥೆಗಾರ ಕೆ.ಟಿ.ಗಟ್ಟಿ ಅವರು ಎಲ್ಲಾ ಓದುಗರಿಗೆ ಚಿರಪರಿಚಿತರು. ಕೇರಳ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಬಿಎಡ್ ಪದವಿ ಪಡೆದಿರುವ ಕೆ.ಟಿ.ಗಟ್ಟಿ ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯವರು. ಜನಿಸಿದ್ದು 1938ರಲ್ಲಿ. ಸದ್ಯ ...

READ MORE

Related Books