ಉದಯಾಸ್ತ

Author : ಸರ್ಫ್ರಾಜ್

Pages 200

₹ 160.00




Year of Publication: 1994
Published by: ನೇಕಾರ ಪ್ರಕಾಶನ
Address: ನೇಕಾರ ಪ್ರಕಾಶನ, ಗುರುಮಂದಿರ ರಸ್ತೆ, ಸೊರಬ-577429 ಶಿವಮೊಗ್ಗ ಜಿಲ್ಲೆ
Phone: 9141833556

Synopsys

ಉದಯಾಸ್ತ ಸರ್ಫ್ರಾಜ್ ರವರ ಎರಡನೆ ಕಾದಂಬರಿ. ಇದರ ಶೈಲಿ ಸರಳವಾಗಿದ್ದು, ನಿರೂಪಣೆ ಓದುಗರ ಮನಸ್ಸನ್ನು ಸೆಳೆಯುತ್ತದೆ. ಕನ್ನಡ ಜನಪ್ರಿಯ ಕಾದಂಬರಿಗಳ ಸಾಲಿನಲ್ಲಿ ಬಹುಕಾಲ ನಿಲ್ಲುವ ಅರ್ಹತೆಯನ್ನು ಪಡೆದಿದೆ.

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶಿಸುತ್ತಿರುವ ಉದಯೋನ್ಮುಖ ಲೇಖಕರಲ್ಲಿ ಸರ್ಫ್ರಾಜ್ ಕೂಡ ಒಬ್ಬರು.

ಜೀವನದ ಆಕಸ್ಮಿಕಗಳು ಉಂಟು ಮಾಡುವ ದುರಂತದ ವಸ್ತುವನ್ನು ಈ ಕಾದಂಬರಿ ಚಿತ್ರಸುತ್ತದೆ. ಮನೋವೈಜ್ಷಾನಿಕ ಮೂಲದ  ಈಡಿಪಸ್ ಕಾಂಪ್ಲೆಕ್ಸ್ ನ ಪರಿಕಲ್ಪನೆಯನ್ನು ಈ ಕಾದಂಬರಿಯಲ್ಲಿ ಮನಗಾಣಬಹುದು.

 

About the Author

ಸರ್ಫ್ರಾಜ್

ಸರ್ಫ್ರಾಜ್ ಕನ್ನಡ ಎಂ.ಎ ಪದವೀಧರರು. ಸೊರಬ ಚಿಕ್ಕಮಾಕೊಪ್ಪ ಎಂಬ ಚಿಕ್ಕ ಹಳ್ಳಿಯಲ್ಲಿ ಹುಟ್ಟಿ ಬೆಳೆದವರು. ಕೆಲವು ಮುಸ್ಲೀಂ ಕುಟುಂಬಗಳು ಬಹುಸಂಖ್ಯಾತ ಹಿಂದೂ ಕುಟುಂಬಗಳ ಜೊತೆಯಲ್ಲಿ ಸಹಬಾಳ್ವೆ ಮಾಡುತ್ತಿರುವ ಭಾವೈಕ್ಯತೆಯ ಪ್ರತೀಕದಂತಿರುವ ಹಳ್ಳಿಯದು. ಇಂತಹ ವಾತಾವರಣದಲ್ಲಿ ಸರ್ಫ್ರಾಜ್ ತಮ್ಮ ಬಾಲ್ಯ ಜೀವನ ಮತ್ತು ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ನಂತರ ಉನ್ನತ ವ್ಯಾಸಂಗವನ್ನು ಸಾಗರ ಮತ್ತು ಶಿವಮೊಗ್ಗಗಳಲ್ಲಿ (ಕುವೆಂಪು ವಿ.ವಿ. ಬಿ.ಆರ್. ಪ್ರಾಜೆಕ್ಟ್) ಮಾಡಿದರು, ವಿದ್ಯಾರ್ಥಿಯಾಗಿರುವಾಗಲೇ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಗೀತಗಳ ಬಗ್ಗೆ ಅಪಾರ ಪ್ರೇಮವನ್ನು ಬೆಳೆಸಿಕೊಂಡವರು. ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿರುವ ಅವರು, ಕನ್ನಡದ ...

READ MORE

Related Books