ವಿಚಿತ್ರ ಅಪರಾಧಿ

Author : ಸುದರ್ಶನ ದೇಸಾಯಿ

Pages 99

₹ 12.00




Year of Publication: 1989
Published by: ಸಾಹಿತ್ಯ ಪ್ರಕಾಶನ,
Address: ಸಿಟಿ ಕ್ಲೀನಿಕ್ ಸಂಕೀರ್ಣ,ದಾಜೀಬಾನ್‌ ಪೇಟೆ ಹುಬ್ಬಳ್ಳಿ-580028

Synopsys

'ವಿಚಿತ್ರ ಅಪರಾಧಿ' ಕಾದಂಬರಿಯು ಪತ್ತೇದಾರಿ ಕಾದಂಬರಿಯಾಗಿದ್ದು ಲೇಖಕ ಸುದರ್ಶನ ದೇಸಾಯಿ ಅವರಿಂದ ರಚಿತವಾಗಿದೆ. ಬೆಂಗಳೂರಿನ ಸಂಯುಕ್ತ ಕರ್ನಾಟಕದಲ್ಲಿ ದೈನಿಕ ಧಾರವಾಹಿಯಾಗಿ ಈ ಕಾದಂಬರಿಯು ಪ್ರಕಟಗೊಂಡಿದೆ. ಕ್ಷಣ ಕ್ಷಣಕ್ಕೂ ಹೊಸ ತಿರುವುಗಳೊಂದಿಗೆ ಸಾಗುವ ಕಾದಂಬರಿಯು ಕೊಲೆಯ ಸುತ್ತ ನಡೆಯುವ ತನಿಖೆ, ಕುಟುಂಬದ ಕೂಗು, ಅಧಿಕಾರಿಗಳ ದುರ್ವರ್ತನೆ, ಅಪರಾಧಿಗಳ ಪತ್ತೆಗೆ ಅಡ್ಡವಾಗುವ ಅಧಿಕಾರಿಗಳ ಪ್ರಭಾವ, ಅದನ್ನು ಮೀರಿ ನಿಲ್ಲುವ ದಿಟ್ಟ ಪೊಲೀಸ್‌ ಅಧಿಕಾರಿಯ ಸುತ್ತ ಕಥೆಯು ಸಾಗುತ್ತದೆ.

About the Author

ಸುದರ್ಶನ ದೇಸಾಯಿ
(14 January 1945 - 31 July 2012)

ಲೇಖಕ ಸುದರ್ಶನ ದೇಸಾಯಿ ಅವರು ಮೂಲತಃ ಧಾರವಾಡದವರು. ತಂದೆ- ಕೃಷ್ಣರಾವ ರಾಮಾರಾವ ದೇಸಾಯಿ. ತಾಯಿ- ರಾಧಾಬಾಯಿ. ವಿದ್ಯಾಭ್ಯಾಸವನ್ನು ಧಾರವಾಡದ ಸರಕಾರಿ ಕನ್ನಡ ಪ್ರಾಥಮಿಕ ಶಾಲೆ, ಮಾಳಮಡ್ಡಿಯ ಕೆ.ಇ.ಬೋರ್ಡ್ ಹೈಸ್ಕೂಲಿನಲ್ಲಿ ಪೂರ್ಣಗೊಳಿಸಿದರು. ಬಾಸೆಲ್ ಮಿಷನ್ ಟ್ರೈನಿಂಗ್ ಕಾಲೇಜಿನಿಂದ ಟಿ.ಸಿ.ಎಚ್. ತರಬೇತಿ ಪಡೆದು  ಧಾರವಾಡದ ಗುಲಗುಂಜಿ ಕೊಪ್ಪದ ಸರಕಾರಿ ಶಾಲೆಯಲ್ಲಿ  ಶಿಕ್ಷಕರಾಗಿ ದುಡಿದರು.1977ರಿಂದ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡರು.  ಪ್ರಜಾಮತ ವಾರಪತ್ರಿಕೆಯ ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ತಮ್ಮ ಸಪ್ತಪದಿ ಕತೆಗೆ ಮೂರನೆ ಬಹುಮಾನ ಪಡೆದರು. ಆನಂತರದಲ್ಲಿ ಸುಮಾರು 60ಕ್ಕೂ ಹೆಚ್ಚು ಸಣ್ಣಕತೆಗಳನ್ನು ರಚಿಸಿದರು. ಅವರ ಕಥೆಗಳಾದ ಅಪರಿಚಿತ, ಕರಿನಾಯಿ, ನೆಲುವಿಗೆ ಹಾರದ ಬೆಕ್ಕು ಹಾಗೂ ...

READ MORE

Related Books