ವ್ಯಥೆಯಾದಳು ಹುಡುಗಿ

Author : ಜೀವಿ (ಜಿ.ವಿ. ಕುಲಕರ್ಣಿ)

Pages 82

Synopsys

ಖ್ಯಾತ ಸಾಹಿತಿ ಜೀವಿ ಕುಲಕರ್ಣಿ ಅವರು 1968 ರಲ್ಲಿ ರಚಿಸಿದ ‘ವ್ಯಥೆಯಾದಳು ಹುಡುಗಿ’ ಕಾದಂಬರಿಯನ್ನು ಪ್ರಕಟಿಸಿದ್ದು ಮಾತ್ರ 1981ರಲ್ಲಿ. ಮದುವೆಯಾದ ಹೊಸದರಲ್ಲೇ ಗಂಡನನ್ನು ಕಳೆದುಕೊಂಡ ಗೃಹಿಣಿಯೊರ್ವಳ ಕಥೆ-ವ್ಯಥೆಯು ಈ ಕಾದಂಬರಿಯ ಮೂಲ ವಸ್ತು. ಗಂಡನಿಲ್ಲದ ಆಕೆಯ ಬಾಳು ಸಮಾಜ ಮಾಡುವ ನಿಂದೆಗೆ-ಕಟುವಾದ ಟೀಕೆಗೆ ನರಳಿ ನರಳಿ , ಶೋಷಣೆಗೆ ಬಲಿಯಾಗುವ ಹೃದಯ ವಿದ್ರಾವಕ ವಿಷಯ ವಸ್ತು, ಆಕೆಯ ಆತ್ಮಹತ್ಯೆಯಲ್ಲಿ ಮುಕ್ತಾಯಗೊಳ್ಳುತ್ತದೆ. ಗ್ರಾಮೀಣ ಪರಿಸರದಲ್ಲಿ ಗ್ರಾಮೀಣ ಮಹಿಳೆಯರಿಂದಲೇ ಗ್ರಾಮೀಣ ಹೆಣ್ಣುಮಕ್ಕಳ ಶೋಷಣೆ ನಡೆಯುತ್ತದೆ ಎಂಬುದರ ಚಿತ್ರಣ ಸ್ಪಷ್ಟವಾಗಿ ಮೂಡಿಬಂದಿದೆ. ಮಹಿಳೆಯರ ಪರ ಇರುವಂತೆ ಪ್ರದರ್ಶನ ಮಾಡುವ ಮಹಿಳಾ ಮಂಡಳಗಳ ರಾಜಕೀಯ, ಒಣ ಪ್ರತಿಷ್ಠೆ ಇತ್ಯಾದಿಗಳು ಸಹ ಕಾದಂಬರಿಯ ಪರಿಣಾಮಕತೆಯನ್ನು ಹೆಚ್ಚಿಸಿವೆ. ಹಳ್ಳೆಯ ಜನರ ಸ್ವಾಭಿಮಾನದ ಬದುಕೂ ಇಲ್ಲಿ ಅನಾವರಣಗೊಂಡಿದ್ದು, ಈ ಕೃತಿಯ ಅರ್ಥವಂತಿಕೆಗೆ ಕನ್ನಡಿ ಹಿಡಿಯುತ್ತದೆ.

About the Author

ಜೀವಿ (ಜಿ.ವಿ. ಕುಲಕರ್ಣಿ)
(10 June 1937)

  ಮೂಲತಃ ವಿಜಯಪುರ ಜಿಲ್ಲೆಯ ಡೊಮನಾಳ ಗ್ರಾಮದವರಾದ ಡಾ. ಜಿ.ವಿ.ಕುಲಕರ್ಣಿ ಕವಿ, ನಾಟಕಕಾರ, ವಿಮರ್ಶಕ. ’ಜೀವಿ’ ಎಂಬ ಕಾವ್ಯ ನಾಮದಿಂದ ಬರೆಯುವ ಅವರು ಶಾಲಾ-ಕಾಲೇಜಿನ ದಿನಗಳಿಂದಲೂ 'ಮೆರಿಟ್ ಸ್ಕಾಲರ್ಶಿಪ್' ಪಡೆಯುತ್ತಿದ್ದ ವಿದ್ಯಾರ್ಥಿ. 'ಫೆಲೋಶಿಪ್' ಪಡೆದೇ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಎಂ.ಎ) ಕನ್ನಡ ಹಾಗೂ ಸಂಸ್ಕೃತ ಬಿ.ಎ. ಪದವಿಗಳನ್ನು ಗಳಿಸಿದರು. ನಂತರ, ಕರ್ನಾಟಕ ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ ಪದವಿ ಪೂರ್ಣಗೊಳಿಸಿ ಮುಂಬೈಗೆ ತೆರಳಿದರು. ಮುಂಬಯಿ ವಿಶ್ವವಿದ್ಯಾಲಯದಿಂದ ಆಂಗ್ಲ ಭಾಷೆಯಲ್ಲಿ ಎಂ.ಎ, ಪಿಎಚ್.ಡಿ ಪಡೆದರು. ಬೊಂಬಾಯಿ ನಗರದ ಖಾಲ್ಸಾ ಮತ್ತು ಡಹಣೂಕರ್ ಚೀನಾಯ್ ಕಾಲೇಜುಗಳಲ್ಲಿ ಕನ್ನಡ-ಇಂಗ್ಲೀಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ...

READ MORE

Related Books