ಅರ್ಧ ಸತ್ಯ ಅರ್ಧ ಸುಳ್ಳು

Author : ಕೌಶಿಕ್ ಕೂಡುರಸ್ತೆ

Pages 126

₹ 130.00




Year of Publication: 2022
Published by: ಸ್ನೇಹ ಬುಕ್‌ ಹೌಸ್.
Address: 165, 10ನೇ ಮುಖ್ಯ ರಸ್ತೆ, ಶ್ರೀನಗರ ಬೆಂಗಳೂರು -560050.
Phone: 9845031335

Synopsys

'ಅರ್ಧ ಸತ್ಯ ಅರ್ಧ ಸುಳ್ಳು' ಪತ್ತೇದಾರಿ ಕಾದಂಬರಿಯನ್ನು ಲೇಖಕ ಕೌಶಿಕ್‌ ಕೂಡುರಸ್ತೆ ರಚಿಸಿದ್ದಾರೆ. ಈ ಪುಸ್ತಕದ ಬೆನ್ನುಡಿಯಲ್ಲಿ ಹೀಗೆ ಪ್ರಸ್ತಾಪಿಸಲಾಗಿದೆ ‘ಪಾರ್ಕಿನೊಳಗಿನ ಮರವೊಂದರ ರೆಂಬೆಯಲ್ಲಿ ಇಂಜಿನಿಯರಿಂಗ್‌ ವಿಧ್ಯಾರ್ಥಿನಿ ನೇಹಾಳ ಹೆಣ ನೇಣು ಬಿಗಿ ಸ್ಥಿತಿಯಲ್ಲಿ ಪತ್ತೆಯಾಗಿದ್ದೇಕೆ?, ರಾಮದಾಸನ ಮಗ ಸಾಗರ್‌ ಕಳೆದ ಹತ್ತು ದಿನಗಳಿಂದ ಕಾಣೆಯಾಗಿರಲು ಕಾರಣವೇನು?, ಎಸ್ಟೇಟಿನ ನಡುವಿನಲ್ಲಿದ್ದ ಪಾಳುಮನೆಯಲ್ಲಿ ಎಳೆಮಕ್ಕಳು ಬೆಂಕಿ ಹೊತ್ತು ಚೀರಾಡುವುದೇಕೆ?, ಕೊಲೆಯಾದ ಹೆಣಗಳ ಪಕ್ಕದಲ್ಲಿರುವ ಹ್ಯಾಂಡ್‌ ಮೋಲ್ಡ್‌ ಅಚ್ಚುಗಳು ನೀಡುತ್ತಿದ್ದ ಸಂದೇಶವೇನು?, ಇದು ಅರ್ಧ ಸತ್ಯ ಅರ್ಧ ಸುಳ್ಳು ತುಂಬಿರುವ ಸೇಡಿನ ಕಥೆ’ ಎಂದು ಕಾದಂಬರಿಯ ಸ್ವರೂಪದ ಸುಳಿವು ನೀಡಿದೆ.

About the Author

ಕೌಶಿಕ್ ಕೂಡುರಸ್ತೆ

ವೃತ್ತಿಯಿಂದ ಸಹಾಯಕ ನಿರ್ದೇಶಕರಾಗಿರುವ ಕೌಶಿಕ್ ಕೂಡುರಸ್ತೆ ಅವರು ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕೂಡುರಸ್ತೆ ಗ್ರಾಮದವರು. ತಂದೆ-ಹೆಚ್.ಎಸ್. ತಮ್ಮೇಗೌಡ, ತಾಯಿ ಭಾಗ್ಯ ಆಚಾರ್ಯ ಇನ್ಸ್ಟಿಟ್ಯೂಟಿನಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದಿರುವ ಅವರು ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಹೃದಯದ ಮಾತು’ ಇವರ ಮೊದಲ ಪ್ರಕಟಿತ ಕವನ ಸಂಕಲನ. ‘ಇಂತಿ ನಿಮ್ಮ ಆತ್ಮೀಯ’ ಎಂಬ ಕಾದಂಬರಿಯು ಇವರ ಎರಡನೆಯ ಪ್ರಕಟಿತ ಕೃತಿಯಾಗಿದ್ದು ಎರಡನೇ ಮುದ್ರಣವನ್ನು ಕಂಡಿದೆ. ಈ ಕಾದಂಬರಿಯು ‘ಬಹ್ರೇನ್ ಕನ್ನಡ ಡಿಂಡಿಮ’ ಸಮಾರಂಭದಲ್ಲಿ ಪ್ರದರ್ಶನಗೊಂಡಿದೆ. ಗ್ರಿಫಿನ್ಸ್ ಗುರುಕುಲ ಎಂಬ ಸಂಸ್ಥೆಗೆ ಬಿಸಿನೆಸ್ ಕುರಿತಾದ ‘ಬಿಸಿನೆಸ್ ಮತ್ತು ...

READ MORE

Related Books