ರೊಟ್ಟಿ ಮುಟಗಿ

Author : ಟಿ.ಎಸ್‌. ಗೊರವರ

Pages 90

₹ 100.00




Published by: ಪಲ್ಲವ ಪ್ರಕಾಶನ
Address: ಪಲ್ಲವ ಪ್ರಕಾಶನ ಚನ್ನಪಟ್ಟಣ ಅಂಚೆ, ಎಮ್ಮಿಗನೂರು (ವಯಾ) ಬಳ್ಳಾರಿ-583113
Phone: 9840354507

Synopsys

’ಭ್ರಮೆ’, ’ಕುದರಿ ಮಾಸ್ತರ’, ’ಆಡು ಕಾಯೋ ಹುಡುಗನ ದಿನಚರಿ’ ಕೃತಿಗಳನ್ನು ನೀಡಿದ ಯುವ ಬರಹಗಾರ ಟಿ.ಎಸ್. ಗೊರವರ ಅವರ ಕಾದಂಬರಿ ’ರೊಟ್ಟಿ ಮುಟಗಿ’. ಮೊದಲ ಎರಡು ಕಥಾ ಸಂಕಲನಗಳಾದರೆ ಮೂರನೆಯದು ಅನುಭವ ಕಥನ. ಪ್ರಯೋಗ ಎಂಬಂತೆ ತಮ್ಮ ನಾಲ್ಕನೇ ಕೃತಿಯನ್ನು ಕಾದಂಬರಿ ರೂಪದಲ್ಲಿ ನೀಡಿದ್ದಾರೆ ಟಿ.ಎಸ್. ಗೊರವರ. 

ಲೇಖಕ ಕಮಲಾಕರ ಕಡವೆ ಕೃತಿಕುರಿತು  ’ಘಟನೆಗಳ ಸಂಭ್ರಮ, ಕತಾಹಂದರದ ಚಾಕಚಕ್ಯತೆ, ಪಾತ್ರಗಳ ವೈಶಿಶ್ಠ್ಯ ಮುಂತಾದ ಕಾದಂಬರಿ ಪ್ರಕಾರದ ಪರಿಚಿತ ದಾರಿಗಳನ್ನು ಅನುಸರಿಸುವುದಿಲ್ಲ ಎನ್ನುವುದು ಈ ಕಾದಂಬರಿಯ ವಿಶೇಷ ಗುಣ. ಇದೇ ಗೊರವರ್ ಅವರ ಸಾರ್ಥಕತೆ. ಬದಲಿಗೆ, “ರೊಟ್ಟಿ ಮುಟಗಿ” ಬಾಳ್ಮೆಯ ಅನಾವರಣಕ್ಕಾಗಿ ಕಾದಂಬರಿ ಪ್ರಕಾರವನ್ನು ಬಳಸುತ್ತದೆ. ದಮನಿತ ಸಮಾಜದ ಹಲವು ಬರಹಗಾರರು ಕಾದಂಬರಿ ಪ್ರಕಾರವನ್ನು ಹೀಗೆ ದುಡಿಸಿ ಕೊಂಡಿರುವುದನ್ನು ನಾವು ಸ್ಮರಿಸಿಕೊಳ್ಳ ಬಹುದು. ನಾನು ಕಂಡಂತೆ “ರೊಟ್ಟಿ ಮುಟಗಿ”ಯ ಹೆಚ್ಚುಗಾರಿಕೆಯೆಂದರೆ ಈ ಪ್ರಯೋಗ ಮಾತ್ರವಲ್ಲದೇ, ಒಂದು ಪ್ರದೇಶದ ಜನರ ಕಾಯಕವನ್ನು ಕೇಂದ್ರವಾಗಿಟ್ಟುಕೊಂಡು ಆಯಾ ಕಾಯಕಗಳ ವರ್ಣನೆ, ಸಂಬಂಧಿತ ನುಡಿಗಟ್ಟುಗಳ ಉಪಯೋಗ ಮತ್ತು ಕೇಂದ್ರ ಪಾತ್ರವು ತನ್ನ ಕಾಯಕವನ್ನು ಕಂಡುಕೊಳ್ಳುವುದನ್ನೇ ಕತೆಯ ಗುರಿಯಾಗಿ ಕಾಣುವುದರ ಹಿಂದಿರುವ ಕಾಣ್ಕೆ. ಈ ಕಾಣ್ಕೆ ಬದಲಾವಣೆಯನ್ನು ಹಳ್ಳಿಯಿಂದ ದೂರ ಹೋಗುವುದರಲ್ಲಿಯಾಗಲೀ, ಬೆಳವಣಿಗೆಯನ್ನು ಅಂತಹ ಬದಲಾವಣೆಯಲ್ಲಿಯಾಗಲೀ ಕಾಣದೇ ಕಾಯಕದ ತಿಳುವಳಿಕೆಯನ್ನ ಕತೆಯ ಕೇಂದ್ರವಾಗಿಸುವ ಮೂಲಕ ಪ್ರಾದೇಶಿಕ ಬಾಳ್ಮೆಯನ್ನು ಮನಗಾಣಿಸಿಕೊಡುವ ಪ್ರಯತ್ನವಾಗಿದೆ’ ಎಂದು ತಮ್ಮ ಲೇಖನವೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ. 

ಸಾಹಿತಿ ಸುನಂದಾ ಕಡಮೆ ’ರೊಟ್ಟಿಮುಟಗಿ’ ಕೇವಲ ಒಂದು ದೇಸಿ ಆಹಾರ ಮಾತ್ರವಾಗಿರದೇ ತನ್ನ ಸ್ವಾಧ, ಘಮ ಹಾಗೂ ಪೌಷ್ಟಿಕಾಂಶವುಳ್ಳ ಆರೋಗ್ಯಕರ ಗುಣಗಳಿಂದ, ಇಡೀ ಕಥನದ ಸತ್ವವನ್ನು ಪ್ರತಿನಿಧಿಸುವ ಒಂದು ಇಡಿಯಾದ ರೂಪಕವಾಗಿ ಪರಿಣಮಿಸಿರುವದು, ಟಿ ಎಸ್ ಗೊರವರ ನ ಬರವಣಿಗೆಯ ಒಂದು ವಿಶಿಷ್ಠ ಛಾಪನ್ನು ತೋರಿಸುತ್ತದೆ’ ಎಂದಿದ್ದಾರೆ. 

ಬರಹಗಾರ್ತಿ ಸ್ನೇಹಲತಾ ಗೌನಳ್ಳಿ, ’ಸಂಪೂರ್ಣ ಹಳ್ಳಿಯ ವಾತಾವರಣದ ಚಿತ್ರಣವನ್ನೊಳಗೊಂಡ ಕಾದಂಬರಿಯು ದನ ಕಾಯೋ ಹುಡುಗನ ಆತ್ಮಚರಿತ್ರೆಯಂತೆ ಅನಿಸುತ್ತದೆ.ದ್ಯಾಮನ ಪಾತ್ರದ ಸುತ್ತವೇ ಹೆಣೆದಿರುವ ಕಥೆಯಲ್ಲಿ ಜಾನಪದ ಸೊಗಡಿನ ಲೇಪವಿದೆ.ಜನರಾಡುವ ಗಾದೆ,ಒಗಟು,ಒಡಪುಗಳಿಂದ ಇಲ್ಲಿನ ಭಾಷೆ ಖುಷಿ ಕೊಡುತ್ತದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

About the Author

ಟಿ.ಎಸ್‌. ಗೊರವರ
(10 June 1984)

ಗದಗ ಜಿಲ್ಲೆಯ ರೋಣ ತಾಲೂಕಿನ ರಾಜೂರ ಗ್ರಾಮದ ಟಿ.ಎಸ್. ಗೊರವರ, 1984 ಜೂನ್ 10 ರಂದು ಜನಿಸಿದರು.  ರಾಜೂರು, ಗಜೇಂದ್ರಗಡದಲ್ಲಿ ವಿದ್ಯಾಭ್ಯಾಸ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಭ್ರಮೆ (2007) ಕಥಾ ಸಂಕಲನ, ಆಡು ಕಾಯೋ ಹುಡುಗನ ದಿನಚರಿ (2011) ಅನುಭವ ಕಥನ, ಕುದರಿ ಮಾಸ್ತರ (2012) ಕಥಾ ಸಂಕಲನ, ರೊಟ್ಟಿ ಮುಟಗಿ (2016) ಕಾದಂಬರಿ, ಮಲ್ಲಿಗೆ ಹೂವಿನ ಸಖ (2018) ಕಥಾ ಸಂಕಲನ ಪ್ರಕಟಿತ ಕೃತಿಗಳು. ತನ್ನ ಎದೆಯ ಮೆದುವನ್ನೇ ನಾದಿ ನಾದಿ ಮಿದ್ದು ಒಂದು ಹದದಲ್ಲಿ ಕೆತ್ತಿದಂತಿರುವ ಇವರ ...

READ MORE

Related Books