ಎರಡು ಹೆಜ್ಜೆ

Author : ಮಿರ್ಜಿ ಅಣ್ಣಾರಾಯ

₹ 1.00
Year of Publication: 1960
Published by: ಅಜಿತ್ ಪ್ರಕಾಶನ
Address: ಬೆಳಗಾವಿ

Synopsys

ಮಿರ್ಜಿ ಅಣ್ಣಾರಾಯರು ಬರೆದ ಸಾಮಾಜಿಕ ಕಾದಂಬರಿ-ಎರಡು ಹೆಜ್ಜೆ. ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶದ ಅಭಿವೃದ್ಧಿ ಸಾಧ್ಯ ಎಂದು ನಂಬಲಾಗಿತ್ತು. ಆದರೆ, ಈ ಯೋಜನೆಗಳ ಬಗ್ಗೆ ಪ್ರಜೆಗಳು ಹಾಗೂ ಅಧಿಕಾರಿಗಳಲ್ಲಿ ಸೂಕ್ತ ಅರಿವು ಇಲ್ಲ. ಇದ್ದರೂ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕೃಷ್ಣಾತೀರದ ಒಂದು ಪುಟ್ಟ ಹಳ್ಳಿ. ಇದು ಇಡೀ ಭಾರತದ ಸಂಕೇತ ಮಾತ್ರ. ಅದನ್ನೇ ಕಥಾ ವಸ್ತುವಾಗಿಸಿ ಪಂಚವಾರ್ಷಿಕ ಯೋಜನೆಗಳ ಮೂಲಕ ಗ್ರಾಮೀಣ ಅಭಿವೃದ್ಧಿಯನ್ನು ಈ ಕಾದಂಬರಿ ಅವಲೋಕಿಸುತ್ತದೆ.

ರಾಷ್ಟ್ರೀಯ ಪ್ರಜ್ಞೆ, ಅಭಿಮಾನವು ದೇಶ ಹಾಗೂ ಪ್ರಜೆಗಳ ಅಭಿವೃದ್ಧಿಗೆ ಅಗತ್ಯ ಎಂಬುದು ಕಾದಂಬರಿಯ ಆಶಯವಾಗಿದೆ. ಇನ್ನೊಂದು ಹೆಜ್ಜೆ ಇಡುವ ಮುನ್ನವೇ ಮೊದಲ ಹೆಜ್ಜೆಯ ಪರಾಮರ್ಶೆ ಆಗಬೇಕು. ಮೊದಲ ಹಾಗೂ ಎರಡನೇ ಹೆಜ್ಜೆಗೆ ಸಂಬಂಧವಿಲ್ಲದಿದ್ದರೆ ಹೇಗೆ? ಈ ವಿಚಾರವನ್ನು ರಾಷ್ಟ್ರೀಯ ಯೋಜನೆಗಳಿಗೆ ಅನ್ವಯಿಸಿರುವ ಲೇಖಕರು, ಇಷ್ಟೆಲ್ಲ ಯೋಜನೆಗಳಿದ್ದರೂ ಗ್ರಾಮೀಣ ಪ್ರದೇಶಗಳು ಹಿನ್ನಡೆಯಾಗುತ್ತಿವೆ ಎಂಬ ಅಂಶವೂ ಓದುಗರನ್ನೂ ಸಹ ಚಿಂತನೆಗೆ ಪ್ರೇರೇಪಿಸುತ್ತದೆ.

About the Author

ಮಿರ್ಜಿ ಅಣ್ಣಾರಾಯ
(25 March 1918 - 11 December 1975)

ಪ್ರಸಿದ್ಧ ಸಾಹಿತಿಗಳು, ಸಮಾಜ ಸುಧಾರಕರೂ ಆದ ಮಿರ್ಜಿ ಅಣ್ಣಾರಾಯರು ಹುಟ್ಟಿದ್ದು (ಜನನ 25-03-1918, ಮರಣ: 11-12-1975) ಬೆಳಗಾವಿ ಜಿಲ್ಲೆಯ ಶೇಡಬಾಳದಲ್ಲಿ. ಕನ್ನಡ ಭಾಷೆಯ ಜೊತೆಗೆ ಮರಾಠಿ, ಹಿಂದಿ, ಇಂಗ್ಲಿಷ್, ಗುಜರಾತಿ ಭಾಷೆಗಳಲ್ಲಿ ಪ್ರಭುತ್ವ. ಪಡೆದಿದ್ದರು.  ನಿಸರ್ಗ’ ಇವರು ಬರೆದ ಮೊದಲ ಕಾದಂಬರಿ. ಭಾಷೆಯ ಹೊಸತನ, ಸರಳ ನಿರೂಪಣೆಯಿಂದ ಕೂಡಿದ ಕಾದಂಬರಿ. ಚಾರಿತ್ರಿಕ ಕಾದಂಬರಿಗಳು: ಸಾಮ್ರಾಟ್ ಶ್ರೇಣಿಕ, ಚಾವುಂಡರಾಯ. ಪೌರಾಣಿಕ ಕಾದಂಬರಿ- ಋಷಭದೇವ. ಕಥಾಸಂಕಲನಗಳು-ಪ್ರಣಯ ಸಮಾ, ಅಮರ ಕಥೆಗಳು, ವಿಜಯಶ್ರೀ. ಶೈಕ್ಷಣಿಕ ಗ್ರಂಥಗಳು-ಭಾಷಾ ಶಿಕ್ಷಣ, ಲೇಖನ ಕಲೆ, ಮೂಲ ಶಿಕ್ಷಣದ ಮೌಲ್ಯಮಾಪನ. ವಿಮರ್ಶಾ ಕೃತಿಗಳು-ದತ್ತವಾಣಿ, ವಿಮರ್ಶೆಯ ಸ್ವರೂಪ, ಭರತೇಶನ ...

READ MORE

Related Books