ಮಾನವತೆ

Author : ಟಿ.ಕೆ. ಕೃಷ್ಣಪ್ಪ

Pages 424

₹ 280.00
Year of Publication: 2009
Published by: ನೇಕಾರ ಪ್ರಕಾಶನ
Address: ಗುರುಮಂದಿರ ರಸ್ತೆ, ಸೊರಬ – 577429, ಶಿವಮೊಗ್ಗ ಜಿಲ್ಲೆ
Phone: 9141833556

Synopsys

’ಮಾನವತೆ’ ಶಿಕಾರಿಪುರ ತಾಲ್ಲೂಕಿನ ಅಂಜನಾಪುರ ಪ್ರದೇಶದ ಸುತ್ತಮುತ್ತಲಿನ ಹಳ್ಳಿಗಾಡಿನ ಪ್ರದೇಶದಲ್ಲಿ ನಡೆಯುವ ಕಥಾ ಹಂದರವನ್ನು ಹೊಂದಿದೆ.  ಮನುಷ್ಯ ಸಂಬಂಧಗಳ ನಡುವೆ, ಪ್ರತಿಯೊಬ್ಬ  ಮನುಷ್ಯನ ಅಂತರಾಳದಲ್ಲಿ ಬಚ್ಚಿಟ್ಟುಕೊಂಡಿರಬಹುದಾದ ’ಮಾನವ’ನನ್ನು ಹುಡುಕುವ , ನಿರ್ಮಿಸುವ ಪ್ರಯತ್ನ ’ಮಾನವತೆ’ಯಲ್ಲಿದೆ. ಬೌದ್ಧಿಕವಾಗಿಯೂ, ಹಾಗೂ  ಭಾವುಕತೆಯಿಂದಲೂ ಲೇಖಕರು ಕಾದಂಬರಿಯನ್ನು ಕಟ್ಟುತ್ತಾರೆ.

ಕಾದಂಬರಿಯ ನಾಯಕ ’ವರ್ಣ’ ಆತನ ಬಡತನ, ಅನಾಥ ಬದುಕು, ಮುರಳಿ ತಾಯಿ ದೊರೆತ ಸಂಭ್ರಮ ಹೀಗೆ ಕಾದಂಬರಿಯ ವಸ್ತು ಬೆಳೆಯುತ್ತಾ ಹೋಗುತ್ತದೆ. ಹಳ್ಳಿಯ ಜನರ ಜೀವನದ ಬದಲಾವಣೆಗಾಗಿ ಪ್ರಬಲ ಹಂಬಲ, ಆ ಬದಲಾವಣೆಯ ದಾರಿಯಲ್ಲಿ ಎದುರಾಗುವ ಹಲವಾರು ತೊಂದರೆಗಳು, ನಿಂದನೆಗಳು, ಅಪವಾದಗಳು, ಆರೋಪಗಳು ವರ್ಣನ ಜೀವನವನ್ನು ಮುನ್ನಡೆಸಿದ ಬಗೆಯನ್ನು ಕಾದಂಬರಿಕಾರ ಕೃಷ್ಣಪ್ಪನವರು ಆಪ್ತವಾದ ಭಾಷೆ, ಭಾವದಲ್ಲಿ ಚಿತ್ರಿಸಿದ್ದಾರೆ.

Related Books