ಮೈಮನಗಳ ಸುಳಿಯಲ್ಲಿ

Author : ಶಿವರಾಮ ಕಾರಂತ

Pages 267

₹ 130.00
Year of Publication: 2013
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯ ರಸ್ತೆ. ಗಾಂಧಿನಗರ, ಬೆಂಗಳೂರು, 560009
Phone: 080 4011 4455

Synopsys

ಇದೊಂದು ಅತ್ಯಪೂರ್ವವಾದದೊಂದು ಲೈಂಗಿಕ ಕಾದಂಬರಿ. ಯಾವುದೇ ಅಶ್ಲೀಲತೆಯ ಭಾವನೆ ಓದುಗರಲ್ಲಿ ಉಂಟಾಗದಂತೆ ಇದರಲ್ಲಿ ಶೃಂಗಾರರಸ ಪ್ರತಿಪಾದಕ ವಸ್ತುವನ್ನು ಅತ್ಯಂತ ಸಂಯಮದಿಂದ ನಿರ್ವಹಿಸಿದ್ದಾರೆ.

ಪ್ರಣಯದ ವಿವಿಧ ಸನ್ನಿವೇಶಗಳೇ ಕಾದಂಬರಿಯ ಉದ್ದಕ್ಕೂ ಕಾಣಿಸಿಕೊಂಡರೂ, ವರ್ಣನೆಗಳಲ್ಲಾಗಲಿ ಶಬ್ದಗಳ ಬಲಕೆಯಲ್ಲಾಗಲಿ ಅಶ್ಲೀಲತೆಯ ಸೋಂಕಿಲ್ಲದಂತೆ, ಅತ್ಯಂತ ಪರಿಣಾಮಕಾರಿಯಾಗಿ ಹೆಣೆಯಲಾದ ಕಾದಂಬರಿ. ಈ ಕಾದಂಬರಿಯಲ್ಲಿ ಕಾಣಿಸಿಕೊಳ್ಳುವ ಪಮ್ಮ , ದುಗ್ಗಿಯರು ಕಡಿಮೆಕುಲದಲ್ಲಿ ಹುಟ್ಟಿದ ಭಿಕ್ಷೆ ಬೇಡುವ 'ದಂಪತಿಗಳು. ಅವರನ್ನು ಅಂತಹ ಮುಪ್ಪಿನಲ್ಲಿ ಕಂಡಾಗಲೂ ಅವರು ಪರಸ್ಪರರನ್ನು ಕಡು ದಾರಿದ್ರದಲ್ಲೂ ನಡೆಯಿಸಿಕೊಂಡ ರೀತಿಯನ್ನು ಕಂಡಾಗ ಶೃಂಗಾರಕ್ಕೆ ಬೇಕಾದ ವಯ್ಯಾರ, ಬಿನ್ನಾಣ, ಒನಪು, ಮತ್ತೊಂದು ಆಭರಣದಿಂದ, ಅಲಂಕಾರದಿಂದ, - ಸೀರೆಯಿಂದ, ಸಂಗೀತದಿಂದಲೂ ಬರಲಾರದೆನ್ನುವುದನ್ನು (ಮಂಜುಳೆ) ಕಂಡುಕೊಳ್ಳುತ್ತಾಳೆ. ಪಮ್ಮ, ದುಗ್ಗಿಯರ ಬಾಳು ಹರೆಯದಲ್ಲಿ ಅದೆಷ್ಟು ಸೊಗಸಿನಿಂದ ಬೆರೆತಿತ್ತೋ, ಬೆಳೆದಿತ್ತೋ, ಗಂಡು ಹೆಣ್ಣುಗಳಲ್ಲಿನ ಮೈಯ ಆಕರ್ಷಣೆ ಕಳೆದ ಮೇಲೆಯೂ ಅದು ತನ್ನ ಸವಿಯನ್ನು, ಸೊಗಸನ್ನು ಕಳೆದುಕೊಳ್ಳದಿದ್ದುದನ್ನು ಕಂಡ ಬಳಿಕ, ಅವಳಿಗೆ 'ಸಾಯುವ ಗಳಿಗೆಯ ತನಕವೂ ಕಾದದ್ದಾದರೆ, ನನಗೂ ಯಾಕೆ ಒಬ್ಬ ಪಮ್ಮ ಸಿಗಬಾರದು ?” ಎಂಬ ಹಂಬಲವಾಗುತ್ತದೆ. ''ನನ್ನನ್ನು ಆ ಪಮ್ಮ ದುಗ್ಗಿಯರು ಹರಸಿದ್ದರೆ, ಈ ತೃಪಜೀವಿಗೆ ಯಾರ ಹಂಗೂ ಇಲ್ಲ; ಯಾವ ಹೊರಗಣ ಉಡುಗೊರೆಯೂ ಬೇಕಿಲ್ಲ'' ಎಂದು ಮಂಜುಳೆ ತನ್ನ ಆತ್ಮವೃತ್ತವನ್ನು ಮುಗಿಸುತ್ತಾಳೆ. ಮೈಯ ಆಕರ್ಷಣೆ ಕಳೆದ ಮೇಲೆಯೂ, ಅಂದರೆ ಮುಪ್ಪಿನಲ್ಲೂ ದಂಪತಿಗಳು ಪರಸ್ಪರರನ್ನು , ಹರೆಯದಲ್ಲಿದ್ದಂತೆಯೇ ಪ್ರೀತಿಸುತ್ತ ಸಾಗಿಸುವ ಜೀವನವೇ ಸಾರ್ಥಕ ದಾಂಪತ್ಯ ಎಂಬ ತತ್ವವನ್ನು ಮೈಮನಗಳ ಸುಳಿಯಲ್ಲಿ ಕಾದಂಬರಿ ಸಾರುತ್ತದೆ.

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Related Books