ಊರಸಂತೆ

Author : ಪ್ರಭಾಕರ್‌ ನೀರ್‌ಮಾರ್ಗ

Pages 188

₹ 150.00
Year of Publication: 2015
Published by: ವಿವಿದ್‌ಲಿಪಿ
Address: 71, 4ನೇ ಕ್ರಾಸ್‌, ಕಾನ್‌ಕರ್ಡ್‌ ಲೇಔಟ್‌, ರಾಜರಾಜೇಶ್ವರಿ ನಗರ, ಬೆಂಗಳೂರು– 560059
Phone: 9535015489

Synopsys

ಲೇಖಕ ಪ್ರಭಾಕರ್‌ ನೀರ್‌ಮಾರ್ಗ ಅವರ ಕಾದಂಬರಿ ಕೃತಿ ʻಊರಸಂತೆʼ. ಪುಸ್ತಕವು ವಾಣಿಜ್ಯ ವಹಿವಾಟುಗಳ ಮೇಲೆ ಪಾರಂಪರಿಕ ಹಿಡಿತ ಹೊಂದಿರುವ ಉದ್ಯಮಿಗಳಾಗಿರುವ ಮಹಾ ಸಮುದಾಯದವರ ಪ್ರತಿಯಾಗಿ ಸಮಾಜದಲ್ಲಿ ಸೃಷ್ಟಿಯಾಗುವ ಬಡವ, ಶೋಷಿತರು ಹಾಗೂ ನವ ವಿದ್ಯಾವಂತರ ಒಂದು ಗ್ರಾಮೀಣ ಸಮುದಾಯದ ಕುರಿತು ಹೇಳುತ್ತದೆ.

About the Author

ಪ್ರಭಾಕರ್‌ ನೀರ್‌ಮಾರ್ಗ

ಕರಾವಳಿಯ ಸೃಜನಶೀಲ ಬರಹಗಾರ ಡಾ. ಪ್ರಭಾಕರ್‌ ನೀರ್‌ಮಾರ್ಗ ಅವರು ಕನ್ನಡದ ಕಾದಂಬರಿಕಾರ. ಜೊತೆಗೆ, ನೂರಾರು ಕತೆ, ಕವನ, ನಾಟಕಗಳನ್ನೂ ಬರೆದಿದ್ದಾರೆ. ಇವರು ತುಳು ಜಾನಪದ ಲೋಕವನ್ನು ತಮ್ಮ ಕೃತಿಗಳ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅನಾವರಣ ಮಾಡಿದವರು. ಹಾಗಾಗಿ ತುಳುನಾಡಿನ, ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ, ಆರಾಧನಾ ಆಯಾಮಗಳು ಇವರ ಬರವಣಿಗೆಗಳಲ್ಲಿ ಕಾಣಸಿಗುತ್ತವೆ. ಇವರು ಕನ್ನಡ ಸಾಹಿತ್ಯ ಲೋಕಕ್ಕೆ 27 ಕೃತಿಗಳನ್ನು ನೀಡಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾಗಿ, ಮಂಗಳೂರು ವಿಶ್ವವಿದ್ಯಾಲಯದ ಉಪಕುಲಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ, ಮಂಗಳೂರಿನ ಮ್ಯಾಪ್ಸ್ ಕಾಲೇಜಿನ ಪ್ರಾಂಶುಪಾಲರಾಗಿದ್ದಾರೆ. ಕೃತಿಗಳು: ಧರ್ಮಚಾವಡಿ, ಕಾಲಚಕ್ರ, ಕಣ್ಮಣಿ, ದಾಯಿತ್ವ, ಕಾರ್ಣಿಕ, ಮದಿಪು, ವೇಷ, ...

READ MORE

Related Books